ಕಿಚ್ಚು :: ಭಾಗ - ೫
ಕಿಚ್ಚು :: ಭಾಗ - ೫
ಹಿಂದಿನ ಕಂತು : http://sampada.net/blog/kamathkumble/06/12/2010/29359
೧೦
ಸಹನೆಗೆ ಅನ್ವರ್ಥ ನಾಮದಂತಿರುವ ವಸುಂದರ ಈಗ ತನ್ನ ಎಲ್ಲಾ ಸಹನೆ ಕಳಕೊಂಡಿದ್ದಳು, ತನ್ನ ತಂದೆಯವರನ್ನು ಜೀವಕ್ಕಿಂತ ಹೆಚ್ಚು ಪ್ರಿತಿಸುತಿದ್ದಳು ಆದರೆ ಅವರ ಒಂದು ನಡೆ ಇವಳ ಮನದಲ್ಲಿನ ಎಲ್ಲಾ ಪ್ರೀತಿಯನ್ನು ಸುಟ್ಟು ಹಾಕಿತು, ತನ್ನವರೆಂದು ಕೊಂಡವರೆಲ್ಲರ ಮೇಲೆ ದ್ವೇಷ ತಾಳಿದ್ದಳು. ಈಗ ಅವಳ ಪಾಲಿಗೆ ನಾನೇ ಎಲ್ಲಾ ಸರ್ವಸ್ವ ನಾಗಿದ್ದೆ. ತಂದೆಯವರು ಅಂಗಳ ಬಿಡುವಾಗ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತಳು.ಅಲ್ಲಿ ಅವಳ ಹೆತ್ತವರು ತಮ್ಮ ಮಗಳು ತನ್ನ ಭವಿಷ್ಯವನ್ನು ಕೈಯಾರೆ ಹಾಳುಮಾಡಿ ಕೊಂಡಳಲ್ಲಾ ಎಂದು ವ್ಯಥೆ ಪಡುತ್ತಿದ್ದರು.
ನಾನು ಕೆಲಸ ಹುಡುಕುವುದು ಅನಿವಾರ್ಯವಾಗಿತ್ತು, ಆದರೆ ಮನನೊಂದ ಹೆಂಡತಿಯನ್ನು ಈ ಪರಿಸ್ತಿತಿಯಲ್ಲಿ ಬಿಟ್ಟು ಅದೇಕೋ ಮನಸಾಗಲಿಲ್ಲ, ಅಣ್ಣನೂ ಬಳಗ್ಗೆಯೇ ಮನೆ ಬಿಟ್ಟಿದ್ದನು, ಮನೆಯಲ್ಲಿರುವ ಇತರ ಗೆಳೆಯರನ್ನು ನಮಗಾಗಿ ಸಲ್ಪ ದಿನದ ಮಟ್ಟಿಗೆ ಆತ ಹೊರ ಹಾಕಿದ್ದ. ಒಂದು ಕೋಣೆ ಯ ಆ ಪುಟ್ಟ ಮನೆಯನ್ನು ಈ ನವದಂಪತಿಗಳಿಗಾಗಿ ಆತ ಒಂದು ವಾರದ ಮಟ್ಟಿಗೆ ಬಾಡಿಗೆ ಗೆ ನೀಡಿದ್ದನು, ಅವನೂ ರಾತ್ರಿ ಪಕ್ಕದ ಮನೆಯಲ್ಲಿ ರಾತ್ರಿ ಕಳೆಯುತಿದ್ದ, ಅವನಿಗೆ ಇನ್ನೂ ನಾವು ಹೊರೆಯಾಗಿರುವುದು ನಮಗಿಷ್ಟ ವಿರಲಿಲ್ಲ, ಕೆಲಸ ಹುಡುಕ ಬೇಕು, ನಮ್ಮಿಬ್ಬರ ಹೊಟ್ಟೆ ನಾವು ತುಂಬಿಸಬೇಕು ಎಂಬ ಮಾತೇ ನಮ್ಮಿಬ್ಬರ ಮನಸನ್ನು ಕೊರೆಯುತ್ತಿತ್ತು.
ವಸುಂದರ IAS ಓದಬೇಕು ಎಂಬ ಕನಸು ಕಂಡಿದ್ದಳು, ಆದರೆ ನಮ್ಮ ಈ ಆತುರದ ನಿರ್ಧಾರದಿಂದ ಅವಳ ಓದು ಅರ್ಧದಲ್ಲೇ ನಿಲ್ಲಿಸಿದಂತಾಯಿತಲ್ಲ ಎಂದು ಬಾರಿ ಬಾರಿ ನನ್ನಲ್ಲಿ ಪಾಪ ಪ್ರಜ್ಞೆ ಕಾಡುತಿತ್ತು.ನಾನೇನೋ ಓದಿನಲ್ಲಿ ಹುಷಾರಿರಲಿಲ್ಲ ಓದಿದರೂ ಎಲ್ಲಿಯಾದರೂ ಸಣ್ಣ ಸಂಬಳಕ್ಕೆ ನಿಲ್ಲುವಂತ ಕೆಲಸ ಸಿಕ್ಕುತಿತ್ತೆ ವಿನಹ ಬ್ಯಾಂಕ್ ನಮ್ಮ ಮುಂದಿನ ಪೀಳಿಗೆಗೆ ಕಾಸು ಮಾಡಿದುವಂತ ಭಾರಿ ಕೆಲಸವೇನೋ ಸಿಗುತಿರಲಿಲ್ಲ, ಅವಳ ಬಗ್ಗೆ ಆಲೋಚಿಸುವಾಗ ಅವರ ತಂದೆ ಅಂದ ಪ್ರತಿಯೊಂದು ಮಾತು ನಿಜ ಎಂದನಿಸುತಿತ್ತು ಆದರೆ ಅವಳ ಕಣ್ಣಲ್ಲಿ ನೀರು ಹರಿಸಿದಕ್ಕೆ ಅವರ ಮೇಲೆ ಅಪಾರವಾದ ಕೋಪವು ಬರುತಿತ್ತು. ಕೋಪದ ಜ್ವಾಲಾಗ್ನಿ ಹೃದಯದ ಎಡೆಯಲ್ಲಿರುವ ಅವರಬಗೆಗಿನ ಸಣ್ಣ ಅಭಿಮಾನವನ್ನು ಸುಟ್ಟು ಹಾಕಿತು.
ಹೊರಗಿನ ಬಾಗಿಲು ಹಾಕಿ ಒಳ ಬಂದೆ, ವಸುಂದರ ನನ್ನಲ್ಲಿ "ನನಗೆ ನೀನು ಬೇಕು,ಯಾರು ಬೇಡ,ಅಪ್ಪ ಅಮ್ಮ ಅವರ ಜಾತಿ, ಅಂತಸ್ತು, ಪ್ರೀತಿ ಏನು ಬೇಡ , ನನ್ನ ಜೊತೆ ಕೊನೆಯವರೆಗೆ ಇರುವಿಯಲ್ಲಾ ...?ಯಾರು ಏನು ಹೇಳಿದರು ಅವರನ್ನು ಎದುರಿಸುವಿಯಲ್ಲಾ ...?"
ನಾನು "ಇರುವೆ ಕಣೆ, ಆದರೆ ನಾವು ಮಾಡಿದ್ದು ತಪ್ಪೆಂದು ನನಗೀಗ ಅನಿಸುತ್ತಿದೆ, ಅವರನ್ನು ನಾವು ಅರ್ಥೈಸ ಬೇಕಿತ್ತು, ಅವರು ನಮ್ಮ ಒಳ್ಳೇದಕ್ಕೆ ಹೇಳುತ್ತಿದ್ದರು ಎಂದೆನಿಸುತ್ತಿದೆ, ನಿನಗೆ ಅವರು ಕೊಟ್ಟಂತ ಉಪಚಾರ ನನ್ನಿಂದ ಕೊಡಲಾಗುವುದಿಲ್ಲ, ನಿನ್ನ ಮುಂದಿನ ಓದಿಗೆ ಸಹಾಯ ಮಾಡಲಾಗುವುದಿಲ್ಲ,ನಾವು ತಪ್ಪು ಮಾಡಿದೆವು ಕಣೇ, ಒಂದು ಕ್ಷಣ ನಾವು ಮನೆ ಬಿಟ್ಟು ಬರ ಬೇಕಾದರೆ ನಮ್ಮವರನ್ನು ನೆನೆಯ ಬೇಕಿತ್ತು ...."
ಜ್ವಾಲಾಗ್ನಿಯ ಸೆರಗಲ್ಲಿರುವ ವಸುಂದರೆಗೆ ನನ್ನ ಮಾತಿನ ಅರ್ಥ ತಿಳಿಯದೇ ಹೋಯಿತು, ನನ್ನಲ್ಲಿ "ನಿಮ್ಮ ಚಪಲ ಎರಡು ರಾತ್ರಿಯಲ್ಲೇ , ತೀರಿತಲ್ಲಾ ...? ನೀವು ಇದಕ್ಕಾಗಿಯೇ ನನ್ನನ್ನು ಈಗ ಮರಳಿ ಹೋಗು ಅನ್ನು ತಿದ್ದಿರಲ್ಲಾ ... ನಾನು ನಿಮ್ಮ ಒಳಗಿನ ಈ ಗೂಡಾಲೋಚನೆ ತಿಳಿಯದೇ ನಿಮ್ಮನ್ನು ನಂಬಿ ನನ್ನ ಹೆತ್ತವರನ್ನು ಬಿಟ್ಟು ಬಂದೆ ... ಆದರೆ ಈಗ ನಾನು ಮರಳಿ ಹೋದರೆ ನಮ್ಮ ಪ್ರೀತಿಯನ್ನು ನೋಡಿ ಲೋಕವೇ ಹಾಸ್ಯ ಮಾಡುವುದು, ನನಗೆ ಸರಿಯಾದ ಪಾಠ ನೇ ಕಲಿಸಿದಿರಿ..."ಎನ್ನುತ್ತಾ ಬದಿಯಲ್ಲಿದ್ದ ದಿಂಬನ್ನು ತಬ್ಬಿ ಅಳಲಾರಂಬಿಸಿದಳು.
ಅವಳನ್ನು ಪಡೆದ ಖುಷಿಯಲ್ಲೇ ಹಿಂದಿನ ಎರಡು ರಾತ್ರಿಗಳನ್ನು ನಾನು ಅನುಭವಿಸಿದ್ದೆ,ಆದರೆ ಈಗ ಒದಗಿರುವ ಸಂಧರ್ಭದ ಕಲ್ಪನೆನೆ ನನ್ನಲ್ಲಿರಲಿಲ್ಲ ಆ ಮದುರ ಗಳಿಗೆಯಲ್ಲಿ ,ತಡವಡಿಸುತ್ತಾ ನಾನು ಅವಳಲ್ಲಿ "ವಸುಂದರಾ ಹಾಗೆ ಏಕೆ ಅಂದು ಕೊಳ್ಳುತ್ತಿಯಾ ...?ನಿನ್ನನ್ನು ನಾನು ಪವಿತ್ರ ಪ್ರೀತಿಯ ಕಣ್ಣಿಂದ ನೋಡಿದ್ದೆ ವಿನಹ ಕಾಮಸಾದನೆ ನನ್ನ ಛಲ ವಾಗಿರಲಿಲ್ಲ, ತುಮ್ಬಾದಿನದ ನಂತರ ನೀ ಸಿಕ್ಕಿದ್ದು, ನಿನ್ನನ್ನು ಪದಕ್ಕೊಂಡ ಖುಷಿ,ಎಲ್ಲಾ ಒಟ್ಟಾಗಿ ನಿನ್ನಲ್ಲಿ ಕಾಮಪಾಶಕ್ಕೆ ಬಲಿಯಾದೆ ಈ ಎರಡು ರಾತ್ರಿಯಲ್ಲಿ ....
ನಿನ್ನನ್ನು ನಾನು ಈಗ ಮರಳಿ ಹೋಗು ಅಂದಿಲ್ಲಾ , ಬದಲಿಗೆ ನಾವು ತಪ್ಪಾದ ನಿರ್ಣಯ ತೆಗೆದು ಕೊಂಡೆವು,ಅಂದಿದ್ದು.....
ಆದದೆಲ್ಲಾ ಆಯಿತು ನಿನ್ನನ್ನು ಕಳಕೊಳ್ಳಲು ನನಗೆ ಇಷ್ಟವಿಲ್ಲ, ಯಾರು ಬಂದರೂ ನಿನ್ನ ಎದುರಿಸುತ್ತೇನೆ,ನಿನ್ನನ್ನು ಸುಖವಾಗಿಡಲು ಎಲ್ಲಾ ಪ್ರಯತ್ನ ನಾ ಮಾಡುತ್ತೇನೆ,ನೀನು ನನ್ನಲ್ಲಿತ್ತ ನಂಭಿಕೆಗೆ ನಾನೆಂದು ದ್ರೋಹ ಮಾಡುವುದಿಲ್ಲ.ಸಮಾಧಾನ ಮಾಡಿಕೊ ..."ಅಂದೆ.
ಅವಳೂ ಒಂದು ನಿರಾಳ ಉಸಿರು ಬಿಟ್ಟಳು.
ನಮ್ಮ ಜೀವನ ಪಡೆದ ತಿರುವನ್ನು ನಾನು ಒಂದು ಬದಿಯಲ್ಲಿ ಕುಳಿತು ಮೆಲುಕು ಹಾಕುತಿದ್ದರೆ, ಮೂಲೆಯಲ್ಲಿ ವಸುಂದರಾ ಮನೆಯವರ ವಿಶ್ವಾಸ ನಾನು ಕೆಡುವಿದೆನಲ್ಲ ಎಂದು ಆಲೋಚಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು, ಇಲ್ಲಿ ವರೆಗೆ ಒಂದು ಹನಿ ಕಣ್ಣಿರು ಬರಲು ಬಿಟ್ಟಿರಲಿಲ್ಲ ಆ ಹೆತ್ತವರು, ಆದರೆ ಇಂದು ವಯಸ್ಸು-ಮನಸ್ಸಿನ ಹುಚ್ಚಾಟಕ್ಕೆ ಕಣ್ಣೀರು ಕಟ್ಟೆ ಒಡೆದ ಅಣೆಕಟ್ಟಿನಂತೆ ಸರಾಗವಾಗಿ ಹರಿಯುತ್ತಲೇ ಇತ್ತು.
ಮಧ್ಯಾಹ್ನ ವಾಗುತಿದ್ದಂತೆ ಒಮ್ಮೆಲೇ ಅವಳ ಬಿಕ್ಕಳಿಕೆ ನಿಂತಿತು, ನನ್ನ ಬಳಿಗೆ ಬಂದು "ನಾವು ಹೋಗೋಣ,ತಂದೆಯವರು ಬಸ್ಸ್ ಹತ್ತುವ ಸ್ಥಳಕ್ಕೆ , ಅವರನ್ನು ನೋಡಬೇಕು ಅಂತ ಅನಿಸುತ್ತಿದೆ."
ನನಗೇಕೋ ಅವಳೂ ನನಗಿಂತ ಮನೆಯವರನ್ನು ಹೆಚ್ಚು ಇಷ್ಟ ಪಡುವಂತೆ ಕಂಡಳು , ನಾನು "ಏನು ನನ್ನನ್ನು ಬಿಟ್ಟು ಹೋಗುತ್ತಿಯಾ ..?"
ಆವಳು ಇಲ್ಲ "ಒಂದು ಬಾರಿ ಅವರಲ್ಲಿ ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು.ಅಷ್ಟೇ "
ನಾನು "ಸರಿ ಸಂಜೆ ಹೋಗುವ" ಅಂದೆ. ಅವಳಲ್ಲೂ ಏನೋ ಬಡ ಕೊಂಡಂತೆ ಮಂದಹಾಸ ಮೂಡಿತು.
೧೧
ಕೈಯಲ್ಲಿ ಕಾಸಿರಲಿಲ್ಲ,ಗೆಳೆಯನ ಕೈಯಲ್ಲಿ ೧೫ ರುಪಾಯಿ ಸಾಲ ಪಡಕ್ಕೊಂಡು, ಬೆಳಗ್ಗೆ ರಾಯರು ಹೇಳಿದ ಬಸ್ಸ್ ಸ್ಟಾಪ್ ತಲುಪಿದೆವು. ರಾಯರು ಆಗಲೇ ಅಲ್ಲಿ ತಲುಪಿ ಆಗಿತ್ತು . ನಮ್ಮನ್ನು ನೋಡುತಿದ್ದಂತೆ "ಬಾ ಮಗಳೇ .."ಅಂದರು
ಇಲ್ಲಿವರೆಗೆ ತಂದೆಯವರು ,ಮನೆಯವರಿಗಾಗಿ ಬಿಕ್ಕಳಿಸುತಿದ್ದ ವಸುಂದರನ ಪ್ರೀತಿ ಈಗ ಮಾಯವಾಗಿತ್ತು ,ಒಂದೇ ಮಾತಲ್ಲಿ "ನಾನು ನಿಮ್ಮೊಂದಿಗೆ ಬರಲು ಬಂದಿಲ್ಲ, ಬದಲಿಗೆ ನಾನು ಮಾಡಿದ್ದು ತಪ್ಪಾಯಿತು,ಕ್ಷಮಿಸಿ ಎಂದು ಕ್ಷಮೆ ಕೇಳಲು ಬಂದಿದ್ದೇನೆ.ಕ್ಷಮಿಸುವಂತಿದ್ದರೆ ಕ್ಷಮಿಸಬಹುದು, ಇಲ್ಲಂಥಾದರೆ ಬಂದ ದಾರಿಗೆ ಸುಂಕ ವಿಲ್ಲ ಎಂದು ತಿರುಗಿ ಹೋಗುತ್ತೇನೆ "ಅವಳ ಮಾತು ಕ್ಷಮೆ ಯಾಚಿಸಿದ್ದಂತಿರಲಿಲ್ಲ ಬದಲಿಗೆ ಪಿಸ್ತೂಲು ಕುತ್ತಿಗೆಯಲ್ಲಿಟ್ಟು ಖೈದಿಗೆ ಆದೇಶಿಸಿದ್ದಂತಿತ್ತು.
ಶಾಂತ ಸ್ವಭಾವದ ಆ ಮುದ್ದು ಹುಡುಗಿಯಲ್ಲಿನ ಈ ರೀತಿಯ ಬದಲಾವಣೆ ಕಂಡ ಅವಳ ಅಮ್ಮ "ನಮ್ಮ ಮಗಳಲ್ಲಾ ಇವಳು, ಯಾರಿಗಾಗಿ ನೀವು ಕಾಯುತಿದ್ದಿರಾ ...?ನಮಗೆ ಮಕ್ಕಳು ಹುಟ್ಟಲೇ ಇಲ್ಲ ಇನ್ನೇಕೆ ನೀವು ಇಲ್ಲದ ಮಗಳ ಪ್ರೀತಿಗೆ ಹಂಭಲಿಸುತ್ತಿದ್ದಿರಾ...?ಬನ್ನಿ ಹೋಗೋಣ,ಮಂಗಳೂರಿಗೆ , ಬೆಂಗಳೂರಿನ ಪಯಣ ತುಂಬಾನೆ ಚೆನ್ನಾಗಿತ್ತು... "ಎನ್ನುತ್ತಾ ಬಸ್ಸ್ ಹತ್ತಿದರು. ಅವರ ಮಾತಿನಲ್ಲಿನ ಪ್ರೀತಿ ಅವರ ಕಣ್ಣಲ್ಲಿ ಆಗತಾನೆ ಮೂಡಿದ ಕಂಬನಿಯಲ್ಲಿ ಕಾಣುತಿತ್ತು, ಅವರು ಅದನ್ನು ಯಾರಿಗೂ ಕಾಣ ಬಾರದೆಂದು ಒರಸಿ ಬಿಟ್ಟರು.
ಕೆಳಗಿದ್ದ ಅವಳ ಮಾವ "ಹೆಣ್ಣೇ ಇಷ್ಟೊಂದು ಅಹಂಕಾರ ಒಳ್ಳೆದಲ್ಲಾ ,ನಾಳೆ ನೀನು ರೋಧಿಸಿದರೆ ನಿನ್ನ ಕಣ್ಣೀರು ಒರೆಸಲು ಯಾರು ಬರಲಾರರು ,ಮೂಡ ನಿರ್ಧಾರ ತೆಕ್ಕೊಂಡಿದ್ದಿಯಾ ಕಾಲ ಪಾಠ ಕಲಿಸುತ್ತದೆ."ಅಂದರು.
ಮೊದಲಿನಿಂದಲೂ ಅವರನ್ನು ಧ್ವೆಶಿಸುತ್ತಿರುವ ವಸುಂದರೆ ಅವರ ಮೇಲೂ ಹೌಹಾರಿದಳು."ನೀವ್ಯಾರು ನನ್ನ ಭವಿಷ್ಯದ ಬಗ್ಗೆ ಕಾಳಜಿ ವಿಡಳು, ನನ್ನ ಹೆತ್ತ ತಂದೆ ತಾಯಿಯರೇ ಸುಮ್ಮನಿರ ಬೇಕಾದರೆ ,ನೀವೇನೂ ಹೀರೋ ಗಿರಿ ತೋರಿಸುವುದು..? ನನ್ನ ಸೊಸೆ ಮಾಡಿ ನನ್ನ ತಂದೆಯವರ ಆಸ್ಥಿ ಒಳ ಹಾಕಲು ನಿಮ್ಮ ಪ್ರಯತ್ನ ಅಂತ ಕರಿಯ ಬೇಕೇ ಈ ರೀತಿಯ ಕೃತಕ ಪ್ರೀತಿಗೆ ..?" ಅಂದಳು.
ಅವರು "ನನಗೇಕೆ ಬೇಕಿತ್ತು ಈ ಸಾಹಸ .. ಬುದ್ಧಿ ಹೇಳಲು ಹೋಗಿ ಕೆಟ್ಟವನಾದೆ, ಕ್ಷಮಿಸು ತಾಯೆ ...ನಿನ್ನ ದಾರಿ ನಿನಗೆ ..."ಎನ್ನುತ್ತಾ ಅವರೂ ಬಸ್ಸ್ ಹತ್ತಿದರು.
ಆಶೀರ್ವಾದ ಪಡೆಯುವ ನೆಪದಲ್ಲಿ ವಸುಂದರ ರಾಯರ ಕಾಲು ಮುಟ್ಟಲು ಮುಂದಾದಳು, ರಾಯರು ಮೆಲ್ಲನೆ ಕಾಲು ಹಿಂದೆ ಮಾಡಿದರು,ಇಲ್ಲಿಗೆ ರಾಯರು ತಮ್ಮ ಮತ್ತು ಕರುಳ ಬಳ್ಳಿಯ ಸಂಭಂಧಕ್ಕೆ ತಿಲಾಂಜಲಿ ಇಟ್ಟರು.
ಮನೆಯವರೆಲ್ಲರೂ ಬಸ್ಸ್ ಹತ್ತಿ ಕುಳಿತಿರಬೇಕಾದರೆ, ತಮ್ಮ ಬೆಂಗಳೂರು ಕೆಲಸ ಮುಗಿಸಿ ಬಂದ ಮಂಗಳೂರಿನ ಸಚಿವರು ನಮ್ಮಿಬ್ಬರಲ್ಲಿ "ಎಂಥ ಕೆಲಸ ಮಾಡಿದಿರಯ್ಯಾ , ನೀವಿಬ್ಬರು ಸೇರಿ , ಊರಿಗೆ ಊರೇ ಗೌರವ ಕೊಡುತಿದ್ದ ರಾಯರ ಕತ್ತು ತಗ್ಗಿಸುವ ಕೆಲಸ ಮಾಡಿದಿರಲ್ಲ,ಅವರು ನಿಮ್ಮ ಪ್ರೀತಿಯ ದ್ವೇಷಿ ಯಾಗಿರಲಿಲ್ಲ ಬದಲಿಗೆ ನಿಮ್ಮ ನಿರ್ಧಾರದ ಧ್ವೇಶಿ ಆಗಿದ್ದರು, ನಿಮ್ಮ ಆತುರದ ನಿರ್ಧಾರ ದಿಂದ ಅವರ ಸಂಭಂದವನ್ನೇ ಕಳ ಕೊಂಡಿರಲ್ಲಾ .. ಮಗಳೇ ವಸುಂದರಾ ನಿನ್ನನ್ನು ಹುಟ್ಟಿನಿಂದ ನೋಡುತಿದ್ದೇನೆ, ಪ್ರತಿಯೊಂದಕ್ಕೂ ಅವರು ಅಸ್ತು ಅನ್ನುತ್ತಿದ್ದರು, ಈ ಪ್ರೀತಿ ಅವರು ನಿರಾಕರಿಸುತ್ತಿರಲಿಲ್ಲ, ನೀವು ನಿಮ್ಮ ಭವಿಷ್ಯ ಗಟ್ಟಿ ಮಾಡಿ ನಿಮ್ಮ ಪ್ರೀತಿ ಬಗೆಗಿನ ನಿರ್ಧಾರ ತಿಳಿಸ ಬೇಕಿತ್ತು, ಅದು ಬಿಟ್ಟು ಆತುರದ ನಿರ್ಧಾರ ತೆಗೆದು ತಪ್ಪು ಮಾಡಿದಿರಿ.ಈಗ ನೀನು ಮಾಡಿದ ತಪ್ಪನ್ನು ಒಪ್ಪಿ ಕ್ಷಮೆ ಯಾಚಿಸಿದರೆ ಅವರು ನಿಮ್ಮಿಬ್ಬರ ಭವಿಷ್ಯಕ್ಕೆ ಉತ್ತಮ ಭುನಾದಿಯನ್ನೇ ಹಾಕುತಿದ್ದರು,ಅದು ಬಿಟ್ಟು ನೀನು ಪ್ರೀತಿಯ ದುರಹಂಕಾರಿ ಯಾಗಿ ಮಾತಾಡಿ ಅವರಿಗೆ ತುಂಬಾ ನೋವು ತಂದಿ ಮಗಳೇ,ಎಲ್ಲಿದ್ದರು ಸುಖವಾಗಿರು ಎಂದೇ ನಾ ಹರಸುವೆ, ಆದರೆ ಇನ್ನೂ ಮುಂದೆ ನಿನ್ನ ಮನೆಯವರ ಎದುರು ಬಂದು ನೀನು ಅವರ ಸಂಭಂದವನ್ನು ನೆನಪಿಸಬೇಡ, ಕಳೆದ ಮೂರು ದಿನಗಳಿಂದ ನಿನ್ನ ಮನೆಯವರ ಪ್ರತಿಯೊಂದು ಆಗು ಹೋಗು ನಾ ನೋಡುತ್ತಿದ್ದೇನೆ, ಅವರಲ್ಲಿ ಇನ್ನು ನೀನು ಕೊಡುವ ಶಿಕ್ಷೆ ಸಹಿಸಲು ಶಕ್ತಿ ಉಳಿದಿಲ್ಲ... "ಎನ್ನುತ್ತಾ ಅವರು ಬಸ್ಸ್ ಹತ್ತಿದರು
ನನ್ನಲ್ಲಿನ ಪ್ರತಿಯೊಂದು ಕೊರತೆ ಅವಳಿಗೆ ಈ ಮೂರು ದಿನದಲ್ಲಿ ಅರಿವಾಗಿತ್ತು.ಆದರೂ ಆವಳು ತನ್ನ ಹೆತ್ತವರಲ್ಲಿ ನನ್ನ ಪರ ಮಾತಾಡಿದಳು, ೧೮ ರ ನಾರಿಯಲ್ಲಿ ಮನೆಯವರ ಬಗ್ಗೆ ಧ್ವೇಶದ ಜ್ವಾಲೆ ಹೊತ್ತಿ ಉರಿಯುತ್ತಿತ್ತು.ಮನೆಯವರು ಮಗಳು ಮಾಡಿದ ಕಾರ್ಯಕ್ಕೆ ಹೆತ್ತಮಗಳು ಎಂಬುದನ್ನು ಮರೆತು ಇನ್ನೊಂದು ಬಗೆಯ ಕಿಚ್ಚಿಗೆ ಬಲಿಯಾದರೆ, ರಾಯರ ಪ್ರಗತಿಕ್ಕಂಡು ಇಷ್ಟು ದಿನ ಅಸೂಯೆ ಪಡುತಿದ್ದ ಅಕ್ಕ ಪಕ್ಕದವರು ಚುಚ್ಚು ಮಾತಿನ ಶೂಲದಿಂದ ನೊಂದ ಆ ಮನೆ ಮನಗಳನ್ನು ಚುಚ್ಚುತ್ತಿದ್ದರು.
ಆದರೆ ಆ ವಸುಂದರೆಯ ಎದೆಯಲ್ಲಿ ನನ್ನ ಬಗೆಗಿನ ನಿರ್ಮಲ ನೀಲಾಂಜನ ಪ್ರಕಾಶಮಾನವಾಗಿ ಬೆಳಗುತಿತ್ತು.
ಮುಂದಿನಭಾಗ:: : http://sampada.net/blog/kamathkumble/11/12/2010/29445
Comments
ಉ: ಕಿಚ್ಚು :: ಭಾಗ - ೫
ಉ: ಕಿಚ್ಚು :: ಭಾಗ - ೫
ಉ: ಕಿಚ್ಚು :: ಭಾಗ - ೫