||ಸಂಜೆಯ ಕಣ್ಣೀರು||
ಕವನ
ನಾನೊಂದು ಸಂಜೆ ಬೇಸರವ ಕಳೆಯಲು
ಸಮುದ್ರದ ದಂಡೆಗೆ ಹೊರಟುನಿಂತೆ
ಮುಗಿಲಾಚೆ ಮೋಡಗಳು ಬಾ...ಬಾ.. ಎಂದು ಕರೆಯುತ್ತಿತ್ತು
ಮರಳ ಮೇಲೆ ನಡೆವಾಗ ಚಿತ್ತ
ಮತ್ತೇನನ್ನೋ ಯೋಚಿಸಿ ಬೇಸರಿಸುತ್ತಿತ್ತು
ಬಿಸಿಯಾ ಬೇಗೆಗೆ ನೊಂದೊಂದು ಹಕ್ಕಿ
ಏಕಾಂಗಿಯಾಗಿ ಇನಿಯನ ಅರಸುತ್ತಿತ್ತು
ದಿನದಾಟ ಮುಗಿಯಿತೆಂದು
ಹಕ್ಕಿಗಳ ಹಿಂಡೊಂದು ಗೂಡು ಸೇರುವ ತವಕದಲ್ಲಿತ್ತು
ತಾಯಿ ಹಕ್ಕಿಯೊಂದು ಮಗುವ ಜೊತೆಗೂಡಿ
ತಂದೆಯ ನಿರೀಕ್ಷೆಯಲ್ಲಿತ್ತು
ಹಿರಿಯ ಹಕ್ಕಿಯೊಂದು ಕಿರಿಯ ಹಕ್ಕಿಗೆ ನೋವಿನ
ಕಥೆಯ ಹೇಳುತ್ತಿತ್ತು
ಕಿರಿಯ ಹಕ್ಕಿ ಪ್ರೀತಿಯ ಗರಿಯ ಬಿಚ್ಚಿ
ಮುದದಿ ಮನವ ಹದವಗೊಳಿಸುತ್ತಿತ್ತು
ಕರಿಮೋಡ ಕಣ್ಣೀರಾಗಿ ಬಾನಿನಿಂದ ಜಾರುತ್ತಿತ್ತು
Comments
ಉ: ||ಸಂಜೆಯ ಕಣ್ಣೀರು||
In reply to ಉ: ||ಸಂಜೆಯ ಕಣ್ಣೀರು|| by vani shetty
ಉ: ||ಸಂಜೆಯ ಕಣ್ಣೀರು||
ಉ: ||ಸಂಜೆಯ ಕಣ್ಣೀರು||
In reply to ಉ: ||ಸಂಜೆಯ ಕಣ್ಣೀರು|| by srimiyar
ಉ: ||ಸಂಜೆಯ ಕಣ್ಣೀರು||
ಉ: ||ಸಂಜೆಯ ಕಣ್ಣೀರು||