ಪೆನ್ಸಿಲ್ ಹಾಗೂ ರಬ್ಬರ್ ಅನುಬಂಧ

ಪೆನ್ಸಿಲ್ ಹಾಗೂ ರಬ್ಬರ್ ಅನುಬಂಧ

ಮಿಂಚಂಚೆಯಲ್ಲಿ ಬಂದದ್ದು.


 


ಪೆನ್ಸಿಲ್ : ದಯವಿಟ್ಟು ನನ್ನನ್ನು ಕ್ಷಮಿಸು.


ರಬ್ಬರ್ : ಏತಕ್ಕಾಗಿ?


ಪೆನ್ಸಿಲ್ : ಏಕೆಂದರೆ ಪ್ರತಿ ಸಲ ನಾನು ತಪ್ಪು ಮಾಡಿದಾಗಲೂ, ನನ್ನ ತಪ್ಪುಗಳನ್ನು ನೀನು ಅಳಿಸುತ್ತೀಯ, ಆದರೆ ನನ್ನ ತಪ್ಪುಗಳೆನೋ ಅಳಿಸಿ ಹೋಗುತ್ತದೆ, ಆದರೆ ಅದರ ಜೊತೆ ನಿನ್ನ ಆಯಸ್ಸು ಕಡಿಮೆ ಆಗುತ್ತದೆ. ನೀನು ಪ್ರತಿ ಸಲ ನನ್ನ ತಪ್ಪುಗಳನ್ನು ಅಳಿಸಿದಾಗಲು ಸಣ್ಣ ಆಗುತ್ತಾ ಹೋಗುತ್ತೀಯ.


ರಬ್ಬರ್ : ಅದು ನಿಜ, ಆದರೆ ನನಗೆ ಬೇಸರವಿಲ್ಲ, ನನ್ನ ಕೆಲಸವೇ ಅದು. ನಾನಿರುವುದೆ ನಿನ್ನ ತಪ್ಪುಗಳನ್ನು ತಿದ್ದಲು. ಒಂದು ದಿನ ನಾನು ಸಂಪೂರ್ಣ ನಶಿಸಿ ಹೋಗಬಹುದು ಹಾಗೂ ನನ್ನ ಜಾಗಕ್ಕೆ ಹೊಸದೊಂದು ಬರಬಹುದು. ಆದ್ದರಿಂದ ಚಿಂತಿಸುವುದನ್ನು ಬಿಡು. ನೀನು ಬೇಸರವಾಗಿದ್ದರೆ ನೋಡಲು ಆಗದು.


 


ಈ ಸಂಭಾಷಣೆ ಅಪ್ಪ ಅಮ್ಮನ ವಿಷಯದಲ್ಲೂ ನಿಜ. ಅಪ್ಪ ಅಮ್ಮ ರಬ್ಬರ್ ಆದರೆ ಮಕ್ಕಳು ಪೆನ್ಸಿಲ್ ಇದ್ದ ಹಾಗೆ. ಅವರು ಯಾವಾಗಲೂ ಮಕ್ಕಳ ತಪ್ಪುಗಳನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸುತ್ತಾರೆ. ಕೆಲವೊಮ್ಮೆ ಅವರಿಗೆ ಬೇಸರವಾಗಲೂಬಹುದು ಹಾಗೆ ಒಂದು ದಿನ ಅವರು ನಮ್ಮನ್ನು ಅಗಲಿ ಹೋಗುವರು. ಮಕ್ಕಳು ಹೊಸದೊಂದನ್ನು (ಬಾಳ ಸಂಗಾತಿ) ಕರೆ ತಂದರೂ ಅಪ್ಪ ಅಮ್ಮ ಯಾವಾಗಲೂ ಮಕ್ಕಳ ಸಂತೋಷವನ್ನೇ ಬಯಸುವರು ಹೊರತು ಅವರು ಬೇಸರವಾಗಿರುವುದನ್ನು ಸಹಿಸುವುದಿಲ್ಲ


 

Comments