ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…

ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…


 ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು ಹಾಕಿ ಪತ್ರಿಕೊಧ್ಯಮದ ಘನತೆ ಹೆಚ್ಚಿಸಿದಿರಿ…..ನೀವಿಲ್ಲದ ಪತ್ರಿಕೆ ಇನ್ನುಮು೦ದೆ ನೀರಸ…ನಿಮ್ಮೂದಿಗೆ ನಾವಿದ್ದೇವೆ..’


ಇಂಥ ಒಂದು ಕಾಮೆಂಟ್ ವಿಶ್ವೇಶ್ವರ ಭಟ್ಟರ ಫೇಸ್ ಬುಕ್ ನಲ್ಲಿ ಇದೆ ಅಂದ್ರೆ ಅವರ ಬರಹಗಳನ್ನು ಆರಾಧಿಸುವ ಜನ ಎಷ್ಟಿರಬಹುದೆಂದು ಯೋಚಿಸಿ. ಪತ್ರಿಕೆಯ ಸಂಪಾದಕನಾದವನಿಗೆ ಇದಕ್ಕಿಂತ ಹೆಮ್ಮೆ ಬೇಕೆ? ಒಂದು ಕಾಲವಿತ್ತು. ಪತ್ರಿಕೆಯ ಸಂಪಾದಕರ ಹೆಸರುಗಳನ್ನು ಪತ್ರಿಕೆಯ ಕಡೆಯ ಸಾಲುಗಳಲ್ಲಿ ಹುಡುಕಬೇಕಾಗಿತ್ತು. ಈ ಸಂಸ್ಕೃತಿಯನ್ನು ತಪ್ಪಿಸಿ ದಿನವೂ ಬರೆಯುವ ಯಾರಾದರೂ ಸಂಪಾದಕರಿದ್ದರೆ ಅದು ವಿಶ್ವೇಶ್ವರ ಭಟ್ಟರು ಮಾತ್ರ ಎಂಬಂತಾಗಿತ್ತು.


ನೀವಿಲ್ಲದಿದ್ದರೆ ನಾವು ವಿ.ಕ.ವನ್ನು ಬಾಯ್ಕಾಟ್ ಮಾಡುತ್ತೇವೆ ಎಂಬ ಹಂತಕ್ಕೆ ಓದುಗ ತಲುಪುತ್ತಾನೆ ಎಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಈ ಹಿಂದೆಯೂ ಹಲವು ಜನ ಸಂಪಾದಕರು ಪತ್ರಿಕೆ ಇಲ್ಲವೇ ವೃತ್ತಿಯನ್ನು ಬದಲಿಸಿದ್ದಿದೆ. ಆದರೆ ಇಂಥ ಅಮೂಲ್ಯವಾದ ಓದುಗರ ಪ್ರೀತಿಗೆ ಯಾರು ಭಾಜನರಾಗಿದ್ದಿಲ್ಲ. ಅವರು ಕನ್ನಡದ ನಡುವೆ ಬೇರೆ ಭಾಷೆಯ ಪದಗಳನ್ನು ಬಳಸುವುದರ ಬಗ್ಗೆ ಕೆಲವು ಓದುಗರಿಗೆ ಅಸಮಾಧಾನವಿದ್ದರೂ ಕೂಡ ಅವರ ಕನ್ನಡ ಕಾಳಜಿಗೆ ಅವರ ಬರೋಬ್ಬರಿ ನಲವತ್ತೈದು ಕೃತಿಗಳು ಸಾಕ್ಷಿ.


ಅವರ ಚಿಂತನೆಯೂ ಹಾಗೆಯೇ ತುಸು ಬಲಪಂಥೀಯ. ಅನಂತಕುಮಾರ್ ಅವರ ಮೀಡಿಯಾ ಸೆಕ್ರೇಟರಿಯಾಗಿದ್ದದ್ದು ಇದಕ್ಕೆ ಇನ್ನಷ್ಟು ಇಂಬು ಕೊಟ್ಟಿದ್ದು ಸುಳ್ಳಲ್ಲ. ಆದರೂ ಎಲ್ಲ ಪತ್ರಿಕೆಗಳು ಬಲಪಂಥೀಯ ವಿಷಯಗಳನ್ನು ತಮ್ಮ ಪತ್ರಿಕೆಗಳಲ್ಲಿ ಹಾಕಲು ಯೋಚಿಸುವ ಸಾಕಷ್ಟು ಪ್ರಮಾಣ ಬಲಪಂಥೀಯರಿಗೆ ತಮ್ಮ ಪತ್ರಿಕೆಯಲ್ಲಿ ಸ್ಪೇಸ್ ನೀಡಿ ಬೆಳೆಸಿದ್ದರು. ಇದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಗಮನಿಸುವಷ್ಟು ಮಟ್ಟದ ಬದಲಾವಣೆ.


ಈಗಂತೂ ವಿಶ್ವೇಶ್ವರ ಭಟ್ಟರ ರಾಜಿನಾಮೆ ಓದುಗರಲ್ಲಿ ಸಾಕಷ್ಟು ಗೊಂದಲ ಮತ್ತು ಗಾಳಿಸುದ್ದಿಗಳನ್ನು ಸೃಷ್ಟಿಸಿದೆ. ಭಟ್ಟರ ಮುಂದಿನ ನಡೆಯೇನು ಎಂಬ ಬಗ್ಗೆ ಅವರ ಎಲ್ಲ ಪ್ರೀತಿಯ ಓದುಗರ ಕುತೂಹಲಕ್ಕೆ ಕಾರಣವಾಗಿದೆ. ಒಂದು ಸಣ್ಣ ಸುದ್ದಿಯೂ ಇಲ್ಲದೇ ವಿ ಕ ವನ್ನು ತೊರೆದ ಭಟ್ಟರು, ಸುದ್ದಿ ಮಾಡುವುದರಲ್ಲಿ ನಿಪುಣರಾದ ಅವರು ಈಗ ತಾವೇ ಸುದ್ದಿಯಲ್ಲಿದ್ದಾರೆ.


 

Rating
No votes yet

Comments