ಸ್ಟಾರ್ ವಾರ್

ಸ್ಟಾರ್ ವಾರ್

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.


mother of all battles. ಈ ನುಡಿಮುತ್ತುಗಳನ್ನು ಚಲಾವಣೆಗೆ ತಂದಿದ್ದು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಮ್ ಹುಸೇನ್. ೧೯೯೦ ರ ಲ್ಲಿ ಕುವೈತ್ ದೇಶವನ್ನು ಆಕ್ರಮಿಸಿಕೊಂಡಾಗ ಅಮೆರಿಕೆಯೂ ಸೇರಿ ಬಲಿಷ್ಠ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದಕ್ಕೆ ಸದ್ದಾಮ್ ಗುಡುಗಿದ್ದು ನನ್ನ ತಂಟೆಗೆ ಬಂದರೆ ಕೊಲ್ಲಿ ಯುದ್ಧ mother of all battles ಗೆ ಕಾರಣವಾಗುತ್ತದೆ ಎಂದು.   


ವಿಕಿ ಲೀಕ್ ವಿರುದ್ಧದ ಕಾರ್ಯಾಚರಣೆ ಈ ರೀತಿ ಆರಂಭ. ಅಸಾಂಜ್ ತನ್ನ ವಿಕಿಲೀಕ್ ಎನ್ನುವ ಟಾಮ್ ಟಾಮ್ ಅಂಗಡಿಯನ್ನು ನಡೆಸುತ್ತಿದ್ದದ್ದು ದೇಣಿಗೆಯ ಸಹಾಯದಿಂದ. ಅದಕ್ಕೆ ಬಿತ್ತು ಮೊದಲ ಕತ್ತರಿ. ಹಣ paypal, visa, master card ನಂಥ ವ್ಯವಸ್ಥೆಗಳ ಮೂಲಕ ಬರುತ್ತಿದ್ದರಿಂದ ಅಮೆರಿಕೆಗೆ ಹೆದರಿ ಅವೂ ಸಹ ತಮ್ಮ ಗಿರಾಕಿ ಅಸಾಂಜ್ ನನ್ನು ಹೊರಗಟ್ಟಿದವು. ಹಾಗೆಯೇ ಅವನ ‘ಅಂಗಡಿ’ ಗೆ ಸ್ಥಳ ದಯಪಾಲಿಸಿದ್ದ ವೆಬ್ ಸರ್ವರ ಗಳ ಮೇಲೂ ಸರಕಾರಗಳ ಕೆಂಗಣ್ಣು. ಸರ್ವರುಗಳೂ ಅಸಾಂಜ ನ ಮುಖಕ್ಕೆ ಬಡಿದವು ಕದಗಳನ್ನು. ಅಸಾಂಜ್ ನನ್ನು ಅತ್ಯಾಚಾರದ ಆರೋಪ ಹೊರಿಸಿ ಸರಳುಗಳ ಹಿಂದಕ್ಕೆ ನೂಕಿದ ಕ್ರಮ ಪ್ರತಿಭಟಿಸಿ, ಕುಪಿತರಾದ ಆತನ ಬೆಂಬಲಿಗರು ಎಲ್ಲಾ ರೀತಿಯ ವೆಬ್ ಧಾಳಿಗಳನ್ನು ಹರಿ ಬಿಟ್ಟಿದ್ದಾರೆ ವಿರೋಧಿ ಪಾಳೆಯದ ಮೇಲೆ. ಬೆಂಬಲಿಗರು facebook , twitter ಮೂಲಕ ಸಭೆ ನಡೆಸಿದರು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಇಲ್ಲಿಗೂ ಬಂತು ಕುತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಹ ಅಸಾಂಜ್ ಗೆ ವಿರೋಧ ವ್ಯಕ್ತಪಡಿಸಿದವು. ಇಷ್ಟೆಲ್ಲಾ ರಾದ್ಧಾಂತವನ್ನು ನೋಡಿದ ನಮಗೆ ಅನ್ನಿಸದೆ ಇರುತ್ತದೆಯೇ ನಮ್ಮ ಪುರಾಣದ ಸತ್ಯ ಹರೀಶ್ ಚಂದ್ರನೂ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿರಲಿಕ್ಕಿಲ್ಲವೇನೋ ಎಂದು?


ಈ “ಹೈ ಟೆಕ್” ಸಮರ ಒಂದು ರೀತಿಯ ಸೈ ಫೈ (sci fi )  ಸಿನೆಮಾ ನೋಡಿದಂತೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಸಹ ಹಾಡಬಹುದೇನೋ ಇದು. ಈ ಸಮರದಲ್ಲಿ apache helicopter ಗಳಿಗಾಗಲಿ, F 16, JAGUAR ಯುದ್ಧ ವಿಮಾನಗಳಿಗಾಗಲಿ, HEAT SEEKING MISSILE ಗಳಿಗಾಗಲಿ ಕೆಲಸವಿಲ್ಲ. ಇಲ್ಲಿ “ಕೀಲಿ ಮಣೆ” ಗಳದೇ ದರ್ಬಾರು. ಈ ಕೀಲಿ ಮನೆಗಳ ವಟ ಗುಟ್ಟುವಿಕೆಗೆ ಎಲ್ಲರೂ ತತ್ತರ. ಎಲ್ಲರೂ ಎಂದರೆ ಅಸಾಂಜ್ ನ ಮೇಲೆ ನಂಜು ಕಾರುವವರು. ಅಸಾಂಜ್ ನ ಬೆಂಬಲಿಗರು ಮೇಲೆ ಸರಕಾರಗಳ ಕಿರುಕುಳಗಳಿಗೆ ಉತ್ತರ ನೀಡಲು ತೀರ್ಮಾನಿಸಿದರು. ಆಪರೇಶನ್ ಪೇ ಬ್ಯಾಕ್. ಅಂದರೆ ಮರು ಪಾವತಿ ಕಾರ್ಯಾಚರಣೆ.  PAY PAL, VISA, MASTER CARD, SERVER ಇವುಗಳ ಮೇಲೆ ಮಿಂಚಿನ ಧಾಳಿ. ವೆಬ್ಸೈಟ್ ಗಳು ಒಂದೊಂದಾಗಿ ತರಗೆಲೆಗಳಂತೆ ಉದುರ ತೊಡಗಿದವು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಗಂಭೀರ ಎಚ್ಚರಿಕೆ. ಅತ್ಯಾಚಾರ ನಡೆದಿದ್ದು ಸ್ವಿಸ್ ನಲ್ಲಿ ಎಂದು ಅಲ್ಲಿನ ಸರಕಾರ ಅಸಾಂಜ್ ನ ಕಸ್ಟಡಿ ಕೇಳಿದ್ದಕ್ಕೆ ಅಲ್ಲಿನ ಸರ್ಕಾರದ ವೆಬ್ ತಾಣದ ಮೇಲೂ ಧಾಳಿ. ಸರಕಾರದ ವೆಬ್ ತಾಣದ ಮೇಲೆಯೇ ಧಾಳಿ ಮಾಡಿದ ಬೇಕೆಂದರೆ ಅಸಾಂಜ್ ನಿಗೆ ಯಾವ ರೀತಿಯ ಆರಾಧಕರಿದ್ದಾರೆ ಮತ್ತು ಅವರ ಸಾಮರ್ಥ್ಯ ಎಂಥದ್ದು ಎಂದು ಊಹಿಸಿ. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಅಸಾಂಜ್ ಮಾತ್ರ ವಿಚಲಿತನಾಗಲಿಲ್ಲ. ಛಲ ಬಿಡದ ತ್ರಿವಿಕ್ರಮ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೊಂದನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಬಂದೆರಗುವ ಆಪತ್ತುಗಳನ್ನು ಊಹಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ತನ್ನ ಸಂದರ್ಶಕರಿಗೆ ಕೂಲ್ ಆಗಿ  ಹೇಳಿದ.  


ಅಸಾಂಜ್ ನ ಮೇಲೆ ಅತ್ಯಾಚಾರದ ಆರೋಪ. ಈಗ ಈ ಸಮಸ್ಯೆಗೆ ಒಂದು ರೋಮಾಂಟಿಕ್ angle ಸಹ ಇದೆ. ಘಟನೆ ನಡೆದಿದ್ದು ಸ್ವಿಸ್ ನಲ್ಲಿ. ಅದಕ್ಕೆ ಸ್ವಿಸ್ ಸರಕಾರಕ್ಕೆ ಅಸಾಂಜ್ ನ ಕಸ್ಟಡಿ ಬೇಕಿರುವುದು.  ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಮ್ಮೊಂದಿಗೆ ಲೈಂಗಿಕವಾಗಿ ನಡೆದು ಕೊಂಡ ಎಂದು ಇಬ್ಬರು ತರುಣಿಯರ ದೂರು. ಅಸಾಂಜ್ ನ ವಿರುದ್ಧದ ಅತ್ಯಾಚಾರದ ಆರೋಪ ದ ಬಗ್ಗೆ ಸ್ವಲ್ಪ ನೋಡೋಣ. ಇಬ್ಬರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಚಟುವಟಿಕೆ ವೇಳೆ ಗರ್ಭ ನಿರೋಧಕ ಕಾಂಡೋಂ ಅಸಾಂಜ್ ಧರಿಸಿರಲಿಲ್ಲ, ಹಾಗಾಗಿ ಇದರಿಂದ ತಮಗೆ AIDS ರೋಗ ಅಥವಾ STD ಅಂಟಿ ಕೊಂಡಿತೆ ಎಂದು ಒಬ್ಬ  ಹುಡುಗಿಯ ಗಾಭರಿ. AIDS ಅಥವಾ STD (Sexually transmitted disease) ಇದೆಯೋ ಎನ್ನುವ ಗಾಭರಿ ಕೋಣೆ ಸೇರುವಾಗ ಇರಲಿಲ್ಲವೇ ಎಂದು ಬಹುಶಃ ಅಸಾಂಜ್ ನ ವಕೀಲರು ಕೇಳಬಹುದು ನ್ಯಾಯಾಲಯದಲ್ಲಿ. ಮತ್ತೊಬ್ಬಾಕೆಯ ದೂರು ಹೀಗೆ. ಲೈಂಗಿಕ ಚಟುವಟಿಕೆ ಸಮಯ ಅಸಾಂಜ್ ಧರಿಸಿದ್ದ ಗರ್ಭ ನಿರೋಧಕ ಚೀಲ ‘ದಾರಿ’ ಮಧ್ಯೆ ಹರಿದು ಹೋಯಿತು, ಉದ್ದೇಶ ಪೂರ್ವಕವಾಗಿ ಅಸಾಂಜ್ ಈ ರೀತಿ ಮಾಡಿದ ಎಂದು. ಹೇಗಿದೆ ನೋಡಿ ಸಂಸ್ಕಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆತ ಸಂಭಾವಿತ ಎಂದು ಖಾತರಿಯಾದ ಮೇಲೆ ಅವನೊಂದಿಗೇ ಇರುಳನ್ನು ಕಳೆಯೋದು, ಬೆಳಗಾದ ಕೂಡಲೇ, ಅಮಲಿಳಿದ ನಂತರ, ಕಲ್ಪನಾ ಲಹರಿಯನ್ನು ಹರಿ ಬಿಟ್ಟು ನಲ್ಲನ ಚಾರಿತ್ರ್ಯ ವಧೆ ಮಾಡುವುದು. ವಿವಾಹದ ಹೊರಗೆ, ಕಾನೂನು ಬಾಹಿರವಾಗಿ ಈ ಕೆಲಸ ಮಾಡುವವರಿಗೆ ಚಾರಿತ್ರ್ಯ ಎಲ್ಲಿಂದ ಬಂತು ಎಂದು ಮಾತ್ರ ಕೇಳಬೇಡಿ. ಏಕೆಂದರೆ they do things differently. 


ಈ ವಿವಾದದಲ್ಲಿ ಏನೆಲ್ಲಾ ಸಂಗತಿಗಳು ಹೊರಬಂದವು ನೋಡಿ. ಸರಕಾರಗಳು ವ್ಯವಹರಿಸುವ ರೀತಿ, ರಾಷ್ಟ್ರ ರಾಷ್ಟ್ರ ಗಳ ಮಧ್ಯೆ ಮಾತುಕತೆಗಳ ಧಾಟಿ, ಮೋಸ, ವಂಚನೆ, ಇಬ್ಬಂದಿತನ.  ಅಸಾಂಜ್ ಮತ್ತು ಸರಕಾರಗಳ ನಡುವಿನ ಜಟಾಪಟಿ ವಿಶ್ವದ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳ ಸ್ಥಾಪನೆಗೂ ನಾಂದಿ ಹಾಡಬಹುದೇನೋ?   


ಮತ್ತಷ್ಟು: ವಿಕಿ ಲೀಕ್ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದು distributed denial of service attack ಮೂಲಕ. ಅಂದರೆ ನಮಗಿಷ್ಟವಾಗದ ವೆಬ್ ಸೈಟ್ ಮೇಲೆ ನಿರಂತರವಾಗಿ, ಅವ್ಯಾಹತವಾಗಿ ಲಾಗ್ ಇನ್ ಆಗಿ ಅದನ್ನು ಅಸ್ತವ್ಯಸ್ತಗೊಳಿಸೋದು. ಒಂದು ರೀತಿಯ carpet bombing. ಉದಾಹರಣೆಗೆ ಒಂದು ಚಿಕ್ಕ ಚಾದಂಗಡಿಗೆ ಒಮ್ಮೆಲೆ ನೂರಾರು ಜನ ಗಿರಾಕಿಗಳು ಬಂದಾಗ ಆಗುವ ಅವ್ಯವಸ್ಥೆ. ಓಡಿ ಹೋಗುತ್ತಾನೆ ಅಡುಗೆ ಭಟ್ಟ. ಮಾಹಿತಿಗಾಗಿ ಎಲ್ಲರೂ ವೆಬ್ಸೈಟ್ ಮೇಲೆ ಧಾಳಿ ಮಾಡಿದಾಗ ಒತ್ತಡ ತಾಳಲಾರದೆ ಕ್ಷಣ ಕಾಲ ಮುಚ್ಚಿ ಹೋಗುತ್ತದೆ. ಕೆಲವೊಮ್ಮೆ ಟ್ವಿಟ್ಟರ್ ಗೆ ಸಹ ಈ ಪರಿಸ್ಥಿತಿ ಎದುರಾಗುವುದುಂಟು. 

Comments