ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು
ಬಾಲ್ಯದಲ್ಲಿ ನನ್ನ ಮೆಚ್ಚಿನ ಕೆಲಸ ಹಸು ಹಾಗು ಎಮ್ಮೆಗಳನ್ನು ಹೊಡೆದುಕೊಂಡು ಆಳುಗಳ ಜೊತೆ ಮೆಯ್ಸೋದಕ್ಕೆ ಹೋಗೋದು, ಅವಾಗೆಲ್ಲ ನಮ್ಮ ವಯಸ್ಸಿನ ಹುಡುಗರ ಒಂದು ದಂಡೆ ಇರುತ್ತಿತ್ತು, ಒಬ್ಬೊಬ್ಬರದ್ದು ಒಂದೊಂದು ಹಸು, ಎಮ್ಮೆ, ಕುರಿ, ಆಡು, ಒಬ್ಬರು ಇನ್ನೊಬ್ಬರ ಪ್ರಾಣಿಗಳನ್ನು ಮುಟ್ಟುವ ಹಾಗಿಲ್ಲ, ನನ್ನದು ಅಂತ ಒಂದು ಕರು ಇತ್ತು, ಅದೂ ಬೆಳೆದು ದೊಡ್ಡದಾಗಿ ಕರು ಹಾಕುವ ತನಕ ನಾನು ಅದನ್ನ ತುಂಬಾ ಹಚ್ಚಿಕೊಂಡಿಬಿಟ್ಟಿದ್ದೆ. ಆಳುಗಳು ಯಾರು ಅದನ್ನ ಹೊಡೆಯುವ ಆಗಿರಲಿಲ್ಲ, ಹಳ್ಳಿಗೆ ಹೋದರೆ ನಾನೆ ಅದಕ್ಕೆ ಹುಲ್ಲು ಹಾಕಬೇಕು, ಅದೂ ನನ್ನ ನೋಡಿದ ತಕ್ಷಣ ಕುಣಿಯುತ್ತಿತ್ತು. ಸಂಕ್ರಾಂತಿ ಬಂದರೆ ಕಾಸನ್ನು ಕದ್ದಾದರೂ ಅದಕ್ಕೆ ಅಲಂಕಾರ ಮಾಡ್ತಾ ಇದ್ದೆ. ಅದೂ ಕರು ಹಾಕಲ್ಲ ಸಾಬ್ರುಗೆ ಮಾರಿ ಬಿಡ್ತಾರೆ ಅಂತ ಹೆದರಿಸುತ್ತ ಇದ್ದರು, ಅವಾಗೆಲ್ಲ ಎಲ್ಲಾ ದೇವರಿಗೂ ಕೈ ಮುಗಿದು ಬೇಗ ಕರು ಹಾಕಲಿ ಅಂತ ಹರಕೆ ಹೊರುತ್ತಿದ್ದೆ.
ಆದರೆ ಅದು ಕರು ಹಾಕುವ ಹೊತ್ತಿಗೆ ನಾನು high school ಕಾನ್ವೆಂಟ್ ಗೆ ಸೇರಿದ್ದೆ, ಕ್ರಮೇಣ ನಾನು ಹಳ್ಳಿಯಿಂದ ದೂರ ಆಗಿಬಿಟ್ಟೆ.
ಇತ್ತೀಚೆಗೆ ನನ್ನ ಮಗಳು ಹಳ್ಳಿಗೆ ಹೋಗಿದ್ದಾಗ ಅವಳು ಎಮ್ಮೆ ಮೆಯಿಸೋದಕ್ಕೆ ಹೊಗಿದ್ದನ್ನ ನನ್ನ ಹೆಂಡತಿ ಮೇಲ್ ಮಾಡಿದ್ದಳು , ಹಳೆಯದೆಲ್ಲ ಜ್ಞಾಪಕ ಬಂತು, ಆಗ ನಾನು ಹಳ್ಳಿಗೆ ಹೋದಾಗಲೆಲ್ಲ ನಮಪ್ಪ " ನೀನು ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು" ಅಂತ ಬಯ್ತ ಇದ್ದರು, ಈಗ ನಾನು, ಅಲ್ಲಿ ನನ್ನ ಮಗಳು ಎಮ್ಮೆ ಮೆಯ್ಸ್ತ ಇದ್ದರೆ " ನಾನು ಇಲ್ಲಿ ಅಮೇರಿಕಾದಲ್ಲಿ ಕೂತುಕೊಂಡು ಮಾಡ್ತಾ ಇರೋ ಕೆಲಸಕಿಂತ ಅದೇ ಎಷ್ಟೋ ಖುಶಿ ಕೊಡೊ ಕೆಲಸ ಅಂತ ಅಂದ್ಕೋತ ಇದ್ದೀನಿ" !!
ನಾನು ಚಿಕ್ಕವನಿದ್ದಾಗ ಈಗಿನ ಮಕ್ಕಳ ಹಾಗೆ ಯಾವಾಗಲು ಬರಿ ಓದು ಓದು ಅಂತ ಕೂತಿದ್ದೆ ಜ್ಞಾಪಕ ಇಲ್ಲ, ಬರಿ ಹಳ್ಳಿಯಲ್ಲಿ ಆಟ ಅಡ್ತ ಇದಿದ್ದು, ಹೆಬ್ಬಾಳದಲ್ಲಿ ಈಜು ಹೊಡೆಯುತ ಇದ್ದಿದ್ದು, ಇವೆ ನೆನಪಿಗೆ ಬರುತ್ತೆ, ಈಗಿನ ಮಕ್ಕಳ್ಳನ್ನು ನೋಡಿದಾಗಲೆಲ್ಲ ಇವರು ತಮ್ಮ ಅಮೂಲ್ಯ ಬಾಲ್ಯವನ್ನು ಬರೀ ವೀಡಿಯೊ ಗೇಮ್ಸ್ ನಲ್ಲೆ ಕಳೆದು ಎಷ್ಟೊಂದು ಆಟಗಳನ್ನು ಮಿಸ್ ಮಾಡ್ಕೊಂತ ಇದರಲ್ಲ ಅಂತ ಅನ್ನಿಸುತ್ತೆ. ನನ್ನ ಮಗಳಿಗೆ ಹಳ್ಳಿಗೆ ಹೋದಾಗಲೆಲ್ಲ ಆದಷ್ಟು ಹೊಲ, ಗದ್ದೆ, ನೀರು, ಹಸು, ಎಮ್ಮೆ ಕುರಿ ನಾಯಿ ಇವುಗಳ ಜೊತೆ ಆಡಲು ಬೀಡುತ್ತೇನೆ, ಪೂರಾ ನಾನು ಅನುಭವಿಸಿದ ಬಾಲ್ಯ ಕೊಡೋದಕ್ಕೆ ಅಗದಿದ್ದರು ಇರೋದ್ರಲ್ಲೇ ಎಷ್ಟು ಸಾದ್ಯನೋ ಅಷ್ಟು ಆ ರಿತಿಯಾ ಪೂರಕ ವಾತಾವರಣ ನಿರ್ಮಿಸೋದಕ್ಕೆ ಪ್ರಯತ್ನ ಪಡ್ತೇನೆ.
Rating
Comments
ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು
In reply to ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು by malathi shimoga
ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು
ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು
In reply to ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು by raghusp
ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು
ಉ: ಎಮ್ಮೆ ಮೆಯ್ಸೋದಕ್ಕೆ ಲಾಯಕ್ಕು