ಇಂದಿನ ಪರಿಸ್ಥಿತಿಯಲ್ಲಿ ಸ್ವದೇಶಿ ಯಾವುದು? ವಿದೇಶಿ ಯಾವುದು?

ಇಂದಿನ ಪರಿಸ್ಥಿತಿಯಲ್ಲಿ ಸ್ವದೇಶಿ ಯಾವುದು? ವಿದೇಶಿ ಯಾವುದು?

Comments

ಬರಹ

        ವಿಕಾಸ ಹೆಗಡೆ ರಾಜೀವ ದೀಕ್ಷಿತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದ ಲೇಖನದ (http://sampada.net/blog/vikashegde/03/12/2010/29321)  ಚ ರ್ಚೆಯು ಎಲ್ಲೆಲ್ಲೋ ತಲುಪಿದೆ. ಆ ಕೊಂಡಿಯು ಚರ್ಚೆಗೆ ಸರಿಯಲ್ಲ ಅನ್ನಿಸಿದ್ದು, ಚರ್ಚೆಯು ಅಗತ್ಯ ಎನ್ನಿಸಿದ್ದರಿಂದ ಈ ಕೊಂಡಿಯಲ್ಲಿ ಮುಂದುವರಿಸುತ್ತಿದ್ದೇನೆ.

 

 ವಿಷಯ ಇಷ್ಟು!

ಒಂದು:

ಸ್ವದೇಶಿ ಎಂಬ ತತ್ವವನ್ನು ಬಹಳ ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಸ್ವದೇಶಿ ಎಂದರೆ ಆ ಪ್ರದೇಶದ್ದು ಮಾತ್ರ ಎಂದರ್ಥ. ಭಾರತ ದೇಶದ್ದು ಅಂತ ಅರ್ಥ ಅಲ್ಲ.

ಸ್ವದೇಶಿಯಲ್ಲಿ ಎಂದರೆ ಮೆಟ್ಟಿಲುಗಳು ಹೀಗಿವೆ,

೧. ಮೊದಲು ಬರುವುದು ನಿಸರ್ಗದತ್ತ ಉತ್ಪನ್ನಗಳು.
೨. ಮನೆಯಲ್ಲಿ ತಯಾರಾದ ವಸ್ತುಗಳು.
೩. ಪಕ್ಕದ ಮನೆಯಲ್ಲಿ ತಯಾರಾದ ವಸ್ತುಗಳು.
೪. ನಮ್ಮ ಏರಿಯಾದಲ್ಲಿ ತಯಾರಾದ ವಸ್ತುಗಳು.
೫. ನಮ್ಮ ಊರಲ್ಲಿ ತಯಾರಾದ ವಸ್ತುಗಳು.
೬. ನಮ್ಮ ಅಕ್ಕ ಪಕ್ಕದ ಊರಲ್ಲಿ ತಯಾರಾದ ವಸ್ತುಗಳು.
೭. ನಮ್ಮ ಎಕಾನಾಮಿಯಲ್ಲಿ ತಯಾರಾಗುವ ವಸ್ತುಗಳು.

ಸ್ವದೇಶಿ ಎಂದರೆ ಭಾರತಕ್ಕೆ ಮಾತ್ರ ಸೀಮಿತವೆಂದಲ್ಲ. ಇದು ವಿಶ್ವವ್ಯಾಪಿ ತತ್ವ.

ಪಕ್ಕದ ಮನೆಯಲ್ಲಿ ಸೋಪು ಸಿಗುತ್ತಿದ್ದರೂ ಪಕ್ಕದ ಏರಿಯಾದಿಂದ ಸೋಪು ಖರೀದಿಸಿದರೆ ಅದು ವಿದೇಶಿಯೇ! (ಕ್ವಾಲಿಟಿ ವಿಷಯ ಇಲ್ಲಿ ಬೇಡ)

ನಮ್ಮ ಊರಿನಲ್ಲಿ ಸಿಗದೇ ಪಕ್ಕದ ಊರಿನಲ್ಲಿ ಕೊಂಡುಕೊಂಡರೆ ಅದು ಸ್ವದೇಶಿ!

ಸ್ವದೇಶಿ ಎಂಬುದು ಆರ್ಥಿಕ ಸ್ವಾವಲಂಬನೆಗೆ ಹಾದಿ.

 

ಎರಡು:

{ಮೊದಲು ನಮ್ಮ ಗ್ರಾಮಗಳಲ್ಲೇ ಉತ್ಪನ್ನಗಳು ತಯಾರಾಗಬೇಕು,ಅವು ಅವೆಲೆಬಲ್ ಇಲ್ಲದ ಸ್ಥಳಗಳಲ್ಲಿ ಅವರ ಕೈಗೆಟಕುವ ದರದಲ್ಲಿ(ನಮ್ಮ ಲಾಭ ಹಿಡಿದು) ರಫ್ತಾಗಬೇಕು,ಅಂದರೆ ಮಾತ್ರ ವಿದೇಶದಿಂದ ಬರುವ ವಸ್ತುಗಳಿಗೆ ಕಡಿವಾಣ ಬೀಳುತ್ತೆ ಹಾಗೂ ಬಳಕೆಗೂ ಸಹ..}
ಒಂದು ಬಾರಿ ಪ್ರಾಕ್ಟಿಕಲ್ ಆಗಿ ಯೋಚಿಸಿ.. ಬಾಬಾ ರಾಮ್ ದೇವ್ ಗೆ ಕಾರ್ಪೋರೇಟುಗಳಿಂದ ಜೀವ ಬೆದರಿಕೆ ಯಾಕೆ ಇದೆ? ಯಾಕೆಂದರೆ ಅವರು ತಯಾರಿಸುತ್ತಿರುವ ಟೂತ್ ಪೇಸ್ಟ್ ಮತ್ತು ಇತರ (ಬೇವಿನಕಡ್ಡಿ ??) ಪ್ರಾಡಕ್ಟುಗಳಿಂದ ಹಿಂದುಸ್ತಾನ್ ಯುನಿಲಿವರ್ ನ ಮಾರಾಟಕ್ಕೆ ಪೆಟ್ಟು ಬೀಳುತ್ತಿದೆ. ಅಥವಾ ಮುಂದೆ ಪೆಟ್ಟು ಬೀಳಬಹುದು ಎಂಬ ಭಯ ಅವರಿಗಿದೆ. ನೀವು ಹೇಳಿದಂತೆ ಗ್ರಾಮದಲ್ಲೆ ಉತ್ಪನ್ನಗಳು ತಯಾರಾಗುವುದು ದೇಶದ ಎಲ್ಲಾ ಕಡೆ ಒಂದೇ ಬಾರಿಗೆ ಆಗುವುದಿಲ್ಲ. ಅದಕ್ಕೆ ಸಮಯ ಬೇಕು. ಅಲ್ಲದೆ ಅಂತಹವನ್ನು ಯುನಿಲಿವರ್ ದುಡ್ಡು ಕೊಟ್ಟು ಕೊಂಡುಕೊಂಡು ಜಾಣತನ ಮೆರೆಯಬಹುದು. MTR ಆದ ಗತಿ ಆಗಬಹುದು. ಈ ನಿಟ್ಟಿನಲ್ಲಿ ಯೋಚಿಸಿದರೆ ಬಾಬಾ ಮಾಡಿದ್ದು ಪೂರ್ತಿ ಸ್ವದೇಶಿ ಅಲ್ಲದಿದ್ದರೂ ಈಗಿನ ಪರಿಸ್ಥಿತಿಗೆ ಸರಿಯಾಗಿದೆ. ಅಲ್ಲದೆ ನಾನು ಮೊದಲೇ‌ ಹೇಳಿದಂತೆ ಅವರೆಲ್ಲೂ‌ ನನ್ನದೇ ಬ್ರಾಂಡಿನ ಉತ್ಪನ್ನಗಳನ್ನು ಮಾತ್ರ ಕೊಳ್ಲಿ ಎಂದು ಹೇಳಿಲ್ಲ.

 ಹಳ್ಳಿಯಲ್ಲಿರುವವರಿಗೆ ಬಾಬಾರ ಬೇವಿನ ಕಡ್ಡಿಪುಡಿ ಕೊಂಡುಕೊಳ್ಳುವಷ್ಟು ದುಡ್ಡೆಲ್ಲಿದೆ ಸ್ವಾಮಿ? ನಮ್ಮ ದೇಶದಲ್ಲೀಗ ಹೆಚ್ಚುಕಮ್ಮಿ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿದ್ದಾರೆ. ಅಂತಹವರಿಗೆ ಇರುವ ಮಾಲುಗಳು ಅವು. ಯುನಿಲಿವರ್ ನಂತಹ ಕಂಪೆನಿಗಳು ದುಡ್ಡುಮಾಡುವುದೇ ಇಂತಹ ಗ್ರಾಹಕರಿಂದ.

 

ಚರ್ಚೆಗೆ ಸ್ವಾಗತ.

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet