ಹೀಗೊಂದು ಕವನ ಸಂಪದದಂಗಳಕೆ ಕಾಲಿಡುವ ಮುನ್ನ

ಹೀಗೊಂದು ಕವನ ಸಂಪದದಂಗಳಕೆ ಕಾಲಿಡುವ ಮುನ್ನ

ಕವನ

ನಾನು ಕವಿಯಲ್ಲ


ಆದರೂ  ಬರೆಯಲು ತೊಡಗಿರುವೆನು


ಕವಿತೆಯ ಮರ್ಮ ಅರಿಯೆನು


ಆದರೂ ಅಕ್ಷರ ಜ್ಞಾನ  ತಿಳಿದಿರುವೆನು


 


ಕವನದ ಬಗ್ಗೆ ಎಂದೂ ಯೋಚಿಸದ ನಾನು


ಇಂದೇಕೋ ಲೇಖನಿ ಹಿಡಿದಿರುವೆನು


ಮನದ ಭಾವನೆಗಳು ಹೆಚ್ಚಾಗಲು


ಕಾಗದದ ಮೇಲೆ ಬರೆದಿರುವೆನು


 


ಶುರು ಮಾಡಿದೆನು ಒಂದು ಪದದಿಂದ


ಕೊನೆಗೂ ಅಕ್ಷರ ಮಾಲೆಯನು ಮಾಡಿರುವೆನು


ಪದ ಪದ ಜೊತೆ ಸೇರಿಸಿ


ಸಾಲುಗಳ ರಚಿಸಿರುವೆನು


 


ನಾನು ಕವಿಯಲ್ಲ


ಆದರೂ  ಬರೆಯಲು ತೊಡಗಿರುವೆನು


ಕವಿತೆಯ ಮರ್ಮ ಅರಿಯೆನು


ಆದರೂ ಅಕ್ಷರ ಜ್ಞಾನ  ತಿಳಿದಿರುವೆನು


 


ಯಾರಿಗೆ ತೋರಿಸಲಿ ಇದನೆಂದು ಯೋಚಿಸಲು


ಗೆಳೆಯ ಸಂಪದನನ್ನು ನೆನಪಿಸಿರುವೆನು


ನನ್ನ ಪ್ರೋತ್ಸಾಹಿಸಲು ಸದಾ ಕಾದಿರುವ


ಗೆಳೆಯ ಗೆಳತಿಯರನು ನೆನಪು ಮಾಡಿರುವೆನು


 


ಈ ಕವನದ ಮೂಲಕ ಸಂಪದದಂಗಳಕೆ 


ಹೆಜ್ಜೆ ಇಟ್ಟಿರುವೆನು


ಮುಂದೆಂದೂ ಈ ಸ್ಫೂರ್ತಿ ಇರಲೆಂದು


ಆ ಭಗವಂತನನ್ನು ಬೇಡಿರುವೆನು


 


ನಾನು ಕವಿಯಲ್ಲ


ಆದರೂ  ಬರೆಯಲು ತೊಡಗಿರುವೆನು


ಕವಿತೆಯ ಮರ್ಮ ಅರಿಯೆನು


ಆದರೂ ಅಕ್ಷರ ಜ್ಞಾನ  ತಿಳಿದಿರುವೆನು


 

Comments