ಪವಿತ್ರ ಪ್ರೇಮ (ಕಥೆ)

ಪವಿತ್ರ ಪ್ರೇಮ (ಕಥೆ)

ಮೊದಲಿನಿಂದಲೂ ಹುಡುಗಿಯ ಅಪ್ಪ ಅಮ್ಮನಿಗೆ ತಮ್ಮ ಮಗಳು ಆ ಹುಡುಗನನ್ನು ಪ್ರೀತಿಸುವುದು ಇಷ್ಟವಿರಲಿಲ್ಲ. ತಮ್ಮ ಮಗಳು ಜೀವನಪೂರ್ತಿ ಜವಾಬ್ದಾರಿ ಇಲ್ಲದ ಆ ಹುಡುಗನ ಜೊತೆ ಸಂಸಾರ ಮಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಅಪ್ಪ ಅಮ್ಮನ ಒತ್ತಡದಲ್ಲಿ ಆ ಜೋಡಿಗಳು ಅವಾಗವಾಗ ಜಗಳವಾಡುತ್ತಿದ್ದರು. ಹುಡುಗಿ ಆತನನ್ನು ಎಷ್ಟೇ ಪ್ರೀತಿಸುತ್ತಿದ್ದರು ಹುಡುಗನನ್ನು ಪದೇ ಪದೇ ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯ ಎಂದು ಕೇಳುತ್ತಿದ್ದಳು.

ಹುಡುಗನಿಗೆ ಅಷ್ಟಾಗಿ ಪ್ರೀತಿಯ ಮಾತುಗಳನ್ನು ಆಡಲು ಬರುತ್ತಿರಲಿಲ್ಲ. ಹೀಗಾಗಿ ಹುಡುಗಿ ಬಲು ಬೇಗನೆ ಬೇಸರಗೊಳುತ್ತಿದ್ದಳು. ಜೊತೆಗೆ ಕೋಪಗೊಂಡು ಹುಡುಗನನ್ನು ಏನಾದರೂ ಕೇಳಿದರೆ ಆತ ಮೌನವಾಗಿದ್ದುಬಿಡುತ್ತಿದ್ದ. ಒಂದು ವರ್ಷದ ನಂತರ ಹುಡುಗನ ಪದವಿ ಮುಗಿಯಿತು. ಹುಡುಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ತೀರ್ಮಾನಿಸಿದ. ಹೊರಡುವ ಮುನ್ನ ಹುಡುಗಿಗೆ ತನ್ನ ಮಸಲ್ಲಿ ಇದ್ದದ್ದನ್ನು ಹೇಳಿದ. ನೋಡು ನನಗೆ ಪ್ರೀತಿಯ ಮಾತುಗಳನ್ನು ಆಡಲು ಬರುವುದಿಲ್ಲ. ಆದರೆ ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ನಿನಗೆ ಇಷ್ಟವಿದ್ದರೆ ಜೀವನ ಪೂರ್ತಿ ನಿನ್ನನ್ನು ಸಂತೋಷವಾಗಿ ನೋಡಿಕೊಳ್ಳುತ್ತೇನೆ. ಹುಡುಗಿ ಕೂಡ ನಗುಮುಖದಿಂದ ಸಮ್ಮತಿಸಿದಳು. 

ಹುಡುಗ ಹುಡುಗಿಯ ಅಪ್ಪನನ್ನು ಮದುವೆಗೆ ಒಪ್ಪಿಸಿ ವಿದೇಶಕ್ಕೆ ಹೊರಡುವ ಮುನ್ನ  ನಿಶ್ಚಿತಾರ್ಥ ಮಾಡಿಕೊಂಡನು.

ಅತ್ತ ಹುಡುಗ ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೊರಟರೆ ಇತ್ತ ಹುಡುಗಿ ಕೆಲಸಕ್ಕೆ ಹೊರಟಳು. ಅವರಿಬ್ಬರೂ ತಮ್ಮ ಪ್ರೇಮವನ್ನು ಇಮೇಲ್ ಹಾಗೂ ಫೋನ್ ಗಳ ಮೂಲಕ ನಿವೇದಿಸಿ ಕೊಳ್ಳುತ್ತಿದ್ದರು.

ಒಂದು ದಿನ ಬೆಳಿಗ್ಗೆ ಹುಡುಗಿ ಕೆಲಸಕ್ಕೆಂದು ಹೊರಟಿದ್ದಾಗ ನಿಯಂತ್ರಣ ತಪ್ಪಿದ ಕಾರೊಂದು ಬಂದು ಡಿಕ್ಕಿ ಹೊಡೆಯಿತು. ಹುಡುಗಿ ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಳು. ಸುತ್ತಲೂ ಅವರ ಅಪ್ಪ ಅಮ್ಮ ಬಂಧುಗಳು ನಿಂತಿದ್ದರು. ಅವಳಿಗೆ ಬಹಳ ಪೆಟ್ಟಾಗಿದೆ ಎಂದು ಅಳುತ್ತಿದ್ದ ಅವರ ತಾಯಿಯನ್ನು ನೋಡಿ ಅರಿವಾಗಿ ಆಕೆಯನ್ನು ಸಂತೈಸಲು ಬಾಯಿ ತೆಗೆದರೆ ಮಾತು ಬಾರದೆ ಬರೀ ಕೈ ಸನ್ನೆಯಲ್ಲಿ ಸಮಾಧಾನವಾಗಿರು ಎನ್ನಳಷ್ಟೇ ಸಾಧ್ಯವಾಯಿತು. ಆ ಹುಡುಗಿ ತನ್ನ ಮಾತನ್ನು ಕಳೆದುಕೊಂಡಿದ್ದಳು. ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆಕೆ ತನ್ನ ಮಾತನ್ನು ಕಳೆದುಕೊಂಡಿದ್ದಾಳೆ ಎಂದು  ಡಾಕ್ಟರ ಹೇಳಿದರು. ಆಕೆಯ ಅಪ್ಪ ಅಮ್ಮ ಅವಳನ್ನು ಸಂತೈಸಲು ಬಂದಾಗ ತಡೆಯಲು ಆಗದೆ ಹುಡುಗಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು.

ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಅವಳಿಗೆ ಮೌನ ರೋದನೆಯೇ ಉಳಿದಿತ್ತು. ಮನೆಗೆ ಬಂದಾಗ ಎಲ್ಲವೂ ಇದ್ದ ಹಾಗೆ ಅನಿಸಿದರೂ, ತನ್ನ ಹುಡುಗನಿಂದ ಫೋನ್ ರಿಂಗಣಿಸಿದಾಗ ಎಲ್ಲ ಬದಲಾಗಿದೆಯೆಂದು ಅಳಹತ್ತಿದಳು. ತನ್ನ ಹುಡುಗನಿಗೆ ಈ ವಿಷಯ ತಿಳಿಸಿ ಅವನ ಮನಸಿಗೆ ನೋವನ್ನು ಉಂಟುಮಾಡಬಾರದೆಂದು ಯೋಚಿಸಿ ಹುಡುಗನಿಗೆ ಒಂದು ಪತ್ರ ಬರೆದಳು. ಇನ್ನು ಹೆಚ್ಚು ದಿನ ಕಾಯಲು ಆಗುವುದಿಲ್ಲ ನನ್ನನ್ನು ಕ್ಷಮಿಸು ಎಂದು ನಿಶ್ಚಿತಾರ್ಥದ ಉಂಗುರವನ್ನು ಜೊತೆಯಲ್ಲಿ ಕಳುಹಿಸಿಬಿಟ್ಟಲು. ಅದಕ್ಕೆ ಪ್ರತಿಯಾಗಿ ಹುಡುಗ ಎಷ್ಟೋ ಉತ್ತರಗಳನ್ನು ಬರೆದರೂ, ಫೋನ್ ಗಳನ್ನೂ ಮಾಡಿದರೂ ಹುಡುಗಿ ಅಳುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ.  ಹುಡುಗಿಯ ಅಪ್ಪ ಅಮ್ಮ ಅವಳನ್ನು ಅವಳ ಗೆಳತಿಯ ಮನೆಯಲ್ಲಿ ಸ್ವಲ್ಪ ದಿನ ಬಿಡಲು ನಿರ್ಧರಿಸಿದರು. ಇದರಿಂದ ವಾತಾವರಣ ಬದಲಾಗಿ ಹಳೆಯದನ್ನೆಲ್ಲ ಮರೆಯಬಹುದೆಂದು ಈ ನಿರ್ಧಾರಕ್ಕೆ ಬಂದಿದ್ದರು. 

ಹುಡುಗಿ ವಾತಾವರಣ ಬದಲಾದಂತೆ ದಿನ ದಿನ ಚೇತರಿಸಿಕೊಳ್ಳುತ್ತಿದ್ದಳು, ಸನ್ನೆಗಳ ಮೂಲಕ ಮಾತಾಡಲು ಕಲೆತಳು, ಹಾಗೆ ಆ ಹುಡುಗನನ್ನು ಮರೆಯಲು ಪ್ರಯತ್ನಿಸುತ್ತಿರುವಾಗ ಹುಡುಗಿಯ ಗೆಳತಿ ಬಂದು ಅವನು ವಾಪಸ್ ಬಂದಿದ್ದಾನೆ ಎಂದು ಹೇಳಲು, ತನ್ನ ವಿಷಯವನ್ನು ಹುಡುಗನಿಗೆ ತಿಳಿಸಬಾರದೆಂದು ಹುಡುಗಿ ಹೇಳಿದಳು. ಅದಾದ ಮೇಲೆ ಹುಡುಗನ ಕಡೆಯಿಂದ ಯಾವುದೇ ಸುದ್ದಿ ಇರಲಿಲ್ಲ.

ಒಂದು ವರ್ಷ ಕಳೆದು ಹೋಯಿತು. ಒಂದು ದಿನ ಹುಡುಗಿಯ ಗೆಳತಿ ಕೈಯಲ್ಲಿ ಒಂದು ಆಹ್ವಾನ ಪತ್ರಿಕೆ ತಂದು ಹುಡುಗಿಯ ಕೈಗೆ ಕೊಟ್ಟಳು. ಅದು ಆ ಹುಡುಗನ ಮದುವೆಯ ಆಹ್ವಾನ ಪತ್ರಿಕೆಯಾಗಿತ್ತು. ಮೇಲಿನ ಹಾಳೆ ತಿರುಗಿಸುತ್ತಿದ್ದ ಹಾಗೆ ಹುಡುಗಿ ಆಶ್ಚರ್ಯಚಕಿತಳಾದಳು. ಯಾಕೆಂದರೆ ಹುಡುಗಿಯ ಹೆಸರಿನ ಜಾಗದಲ್ಲಿ ಈಕೆಯ ಹೆಸರು ಕಂಡು. ತನ್ನ ಗೆಳತಿಯತ್ತ ತಿರುಗಿ ಏನು ನಡೆಯುತ್ತಿದೆ ಎಂದು ಕೇಳಲು ಆ ಹುಡುಗನೇ ಎದುರಿಗೆ ಬಂದು ಸನ್ನೆಯ ಮೂಲಕ ಆಕೆಗೆ ಹೇಳಿದ, ನಾನು ಕಳೆದ ಬಾರಿ ಇಲ್ಲಿಗೆ ಬಂದಾಗ ನಿನ್ನ ಬಗ್ಗೆ ತಿಳಿದು ಒಂದು ವರ್ಷ ಸನ್ನೆಯ ಮೂಲಕ ಮಾತಾಡಲು ಕಲಿತು ಈಗ ಬಂದಿದ್ದೇನೆ. ಇನ್ನು ಮುಂದೆ ನಾನು ನಿನ್ನ ಮಾತಾಗಿರುತ್ತೇನೆ ಎಂದು ಮತ್ತೆ ಉಂಗುರವನ್ನು ಆಕೆಯ ಬೆರಳಿಗೆ ತೊಡಿಸಿದ. 

Comments