ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
ಶಾಪ್ಪಿಂಗ್ ಗೆಂದು ಮೊನ್ನೆ ಹೈಪರ್ ಮಾರ್ಕೆಟ್ ಗೆ ಹೋದೆವು. ಬೇಕಾದ ಸಾಮಾನುಗಳನ್ನು ತೆಗೆದುಕೊಂಡ ನಂತರ ನನ್ನ ಮಗಳು ಚಾಕಲೇಟ್ ಸೆಕ್ಷನ್ ಕಡೆ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು ಸುಮಾರು ೨೦೦ ಮೀಟರ್ ಉದ್ದದ ಚಾಕಲೇಟ್ ಶೆಲ್ಫ್ ಗಳಲ್ಲಿ ಇಟ್ಟಿದ್ದ ತರಾವರಿ ಚಾಕಲೇಟ್ ಗಳನ್ನು ನೋಡುತ್ತಾ ಇದ್ದಾಗ ಒಂದು ಆಫರ್ ಕಣ್ಣಿಗೆ ಬಿತ್ತು. ಆಫರ್ ಇದ್ದದ್ದು ‘ಸ್ನಿಕ್ಕರ್ಸ್’ ಚಾಕಲೇಟ್ ಮೇಲೆ. ಒಂದು ಚಾಕಲೇಟ್ ಬಾರ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ. ಹತ್ತಿರ ನಿಂತಿದ್ದ ನನ್ನ ಪತ್ನಿ ಹೇಳಿದಳು ಪಾಪ, ಅಲ್ಲಿ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಸಿದ್ದಾರೆ ಎಂದು ಜನ ಸಂಕಟ ಪಡುತ್ತಿದ್ದರೆ ಇಲ್ಲಿ ಅಗ್ಗದ ಪೆಟ್ರೋಲ್ ಸಾಲದು ಎಂದು ಫ್ರೀ ಬೇರೆ ಕೊಡುತ್ತಿದ್ದಾರೆ ಎಂದು ಕನಿಕರ ಪಟ್ಟಳು. ಆದರೆ ಈ ಕೊಡುಗೆಯನ್ನ ಜನ ಉಪಯೋಗಿಸಿ ಕೊಳ್ಳಲಾರರು. ಏಕೆಂದರೆ ಇಲ್ಲಿ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ ಇಲ್ಲಿನ ೫೦ ಪೈಸ. ಅಂದರೆ ಹೆಚ್ಚು ಕಡಿಮೆ ಆರು ರೂಪಾಯಿಗಳು. ಚಾಕಲೇಟ್ ತಿಂದ ನಂತರ ಅದರ ಕವಚವನ್ನು ಜೋಪಾನವಾಗಿ ಇಟ್ಟುಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಜಾಯಮಾನದವರಲ್ಲ ಅರಬರು. ಕವಚ ಹಿಡಿದು ಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಅವಶ್ಯಕತೆ ನನಗಂತೂ ಇಲ್ಲ. ಕಂಪೆನಿಯ ಕಾರು, ಕಂಪೆನಿಯದೆ ಪೆಟ್ರೋಲು. ಯಾರದೋ ದುಡ್ಡು, ಎಲ್ಲಮನ್ ಜಾತ್ರೆ ಥರ. ಹಾಗಾಗಿ ಕವಚ ಸಲೀಸಾಗಿ ತಿಪ್ಪೆ ಸೇರುತ್ತದೆ.
ಪೆಟ್ರೋಲ್ ಗೆ ಮೊದಲು ಒಂದು ಲೀಟರಿಗೆ ಇಲ್ಲಿನ ಒಂದು ರಿಯಾಲ್ ಇತ್ತು. ಅಂದರೆ ೧೨ ರೂಪಾಯಿ. ಕಳೆದ ವರ್ಷಗಳ ಹಿಂದೆ ದರ ಕಡಿತ ಮಾಡಿ ಆರು ರೂಪಾಯಿಗೆ ಇಳಿಸಿದರು. ಭಾರತದಲ್ಲಿ ‘ದರ ಕಡಿತ’ ಖಾದಿ ಭಂಡಾರ ಬಿಟ್ಟು ಬೇರೆಲ್ಲಾದರೂ ಕಂಡಿದ್ದೀರಾ?
ಈಗ ಕರುಬದಿರಿ ನನ್ನ ಅದೃಷ್ಟಕ್ಕೆ. ನನ್ನ ‘ಟ್ರಾಲಿ’ ಯಲ್ಲಿರುವ ಒಂದು ಕೆಜಿ ಟೊಮೆಟೋ ಹಣ್ಣಿಗೆ ಭಾರತದ ಎಪ್ಪತ್ತು ರೂಪಾಯಿ ಪೀಕ್ತಾ ಇದ್ದೀನಿ. ಅಕ್ಕಿ ಕೆಜಿಗೆ ನಲವತ್ತಾರು ರೂಪಾಯಿ. ಸಮಾಧಾನ ಆಯಿತೆ?
Comments
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
In reply to ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ by manju787
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
In reply to ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ by manju787
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
In reply to ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ by Shrikantkalkoti
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ
ಉ: ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ