ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು

ಕವನ

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು
ಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..

ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳು
ಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳು
ಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.
ಪ್ರೀತಿ ಕಂಡೆ ನಿನ್ನ ಪುಟ್ಟ ಬಟ್ಟಲು ಕಂಗಳಲಿ..

ಪ್ರೀತಿ ಎಂದರೆ ಏನೆಂದು ಅರಿಯದ ನನ್ನ ಬಾಳಲ್ಲಿ
ನೀ ಬಿಡಿಸಿದೆ ನನ್ನ ಮನದಲಿ ಪ್ರೀತಿಯ ರಂಗವಲ್ಲಿ.
ನನ್ನ ಪ್ರೀತಿಯ ನಿವೇದನೆ ನಾ ನಿನಗೆ ಮಾಡುವ ಮೊದಲೆ.
ಹೊರಟುಬಿಟ್ಟೆ ನೀ ಎಲ್ಲರನ್ನಗಲಿ..

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು
ಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು

Comments