ಹೊಟ್ಟೆ ನೋವಿನ ಪ್ರಸಂಗ

ಹೊಟ್ಟೆ ನೋವಿನ ಪ್ರಸಂಗ


ಹೊಟ್ಟೆನೋವಿನ ಪ್ರಸಂಗ



ಅವತ್ತು ಸೀನೂಗೆ ಬೆಳ್ಬೆಳಿಗ್ಗೆನೆ ಸಿಕ್ಕಾಪಟ್ಟೆ ಹೊಟ್ಟೆನೋವು ಶುರ್ವಾಗ್ಬಿಡ್ತು. ಬಿಸಿನೀರು ಕುಡ್ದಿದ್ದಾಯ್ತು, ೨-೩ ಸಲ ಹಿತ್ತಲಕಡೆ ಹೋಗಿ ಬಂದಿದ್ದೂ ಆಯ್ತು, ಮನೇಲಿ ದೊಡ್ಡಜ್ಜಿ ಹೇಳಿದ್ರು ಅಂತ ಬಿಸಿ ನೀರಿಗೆ ಮೆಂತ್ಯ ಹಾಕಿ ಕುಡ್ದಿದ್ದೊ ಆಯ್ತು, ಏನೆ ಆದ್ರೂ ಹಾಳಾದ್ದು ಹೊಟ್ಟೆ ನೋವು ಮಾತ್ರ ಕಿರುಕುಳ ಕೊಡ್ತಾನೆ ಇದೆ.


ಸರಿ ಬೇರೆ ದಾರಿನೆ ಇಲ್ಲವಾದಾಗ ಸ್ನೇಹಿತ ಸುಬ್ಬುಗೆ ಕರೆಮಾಡಿ ಹೆಂಡ್ತಿನೂ ಜ್ಯೊತೆಲಿ ಕರ್ಕೊಂಡು
ಹತ್ತಿರದ ಆಸ್ಪತ್ರೆಗೆ ಬರ್ಲೇಬೇಕಾಯ್ತು.


ಆಸ್ಪತ್ರೆನಲ್ಲಿ ಡಾಕ್ಟ್ರು ಎಲ್ಲ ಪರೀಕ್ಷೆ ಮಾಡಿ ಕೊನೆಗೆ ನಿರ್ದಾರ ಮಾಡಿದ್ದು ಆಪರೇಶನ್ ಆಗಬೇಕು ಅಂತ.


ಸೀನುಗೆ ಇಂಜಕ್ಷನ್ ತಗೂಳೂದು ಅಂದ್ರೇನೆ ಭಯ ಅಂತದ್ರಲ್ಲಿ ಆಪರೇಶನ್ ಅಂದ್ರೆ... ನಡುಗಿಹೋದ.


ಕೊನೆಗೆ ಸ್ನೇಹಿತನ ಸಾಂತ್ವಾನ, ಹೆಂಡತಿಯ ಮುಖ ನೋಡಿ ವಿದಿ ಇಲ್ಲದೆ ಆಪರೇಶನ್ಗೆ ಒಪ್ಪಿಗೆ ಕೊಟ್ಟ.


ಮಾರನೆಯ ದಿನ ಆಪರೇಶನ್ ಥಿಯೇಟರ್ ಒಳಕ್ಕೆ ಸೀನುನ ಕರ್ಕೊಂಡು ಹೋದ್ರು, ಹೊರಗಡೆ ಸ್ನೇಹಿತ ಸುಬ್ಬು ಮತ್ತು ಸೀನನ ಹೆಂಡತಿ ಕಾತರತೆಯಿಂದ ಕಾಯ್ತಾ ಇದ್ದಾರೆ. ಥಿಯೆಟರ್ ಒಳಗೆ ಹೋಗಿ ೧೫ ನಿಮಿಷ ಆಗಿಲ್ಲ, ಸೀನು ದಡಗುತ್ಕೊಂಡು ಹೊರಗೆ ಓಡಿ ಬಂದ. ಬಂದೋನೆ ನಡಿರಿ ಮನೆಗೆ ಹೋಗೋಣ ಅಂದ. ಸ್ನೇಹಿತ ಕೇಳ್ದ ‘ ಏನು ಆಗ್ಲೆ ಆಪರೇಶನ್ ಆಗೋಯ್ತಾ, ಇಷ್ಟು ಬೇಗ, ನೋಡಿದ್ಯೇನಪ್ಪ ಇಷ್ಟಕ್ಕೆ ಆ ಪಾಟಿ ಒದ್ದಾಡ್ದೆ‘ ಅಂದ.
 ಅದಕ್ಕೆ ಸೀನು ಹೇಳಿದ್ದು  ‘ ಇನ್ನೂ ಆಗಿಲ್ಲ ಆದ್ರೆ ನಂಗೆ ಆಪರೇಶನ್ ಬೇಡ ಮನೆಗೆ ಹೋಗೋಣ ನಡಿರಿ ‘ ಅಂದ.


ಈ ಮಾತು ಕೇಳಿ ಸುಬ್ಬು ಕೆಂಡ ಮಂಡಲವಾಗಿ ಬಿಟ್ಟ. ‘ ಮುಚ್ಚಯ್ಯ ಬಾಯಿ ಡಾಕ್ಟ್ರು ಅಷ್ಟು ಹೇಳಿದ್ದಾರೆ, ತಕ್ಷಣ ಆಪರೇಶನ್ ಆಗ್ದೆಹೋದ್ರೆ ತುಂಬಾ ಕಷ್ಟ ಅಂತ ನೀನೊಳ್ಳೆ ಎಳೆ ಮಗು ತರ ಆಡ್ತಿಯ, ಜೊತೆಗೆ ಆಪರೇಶನ್ ಥಿಯೇಟರ್ ಒಳಗಿಂದ ಆ ನರ್ಸಮ್ಮ ಬೇರೆ-“ ನೀವೇನೂ ಹೆದ್ರುಕೋಬೇಡಿ, ಅನೆಶ್ತೀಯ ಕೊಟ್ಟಿರುತ್ತೆ, ನಾವೆಲ್ಲ ಇಲ್ಲೇ ಇರ್ತಿವಿ, ದೈರ್ಯವಾಗಿರಿ ಅಂತ ಹೇಳ್ತಾ ಇರೋದು ಆಚೆ ಕಡೆ ಇರೋ ನಮಗೆ ಕೇಳಿಸ್ತಿದೆ “ ಅಂತದ್ರಲ್ಲಿ ನಿಂದೇನೊ ತಲೆ ಹರಟೆ ‘ ಅಂದ. ಈಮಾತಿಗೆ ಸೀನು ಹೇಳಿದ್ದು ಕೇಳಿ ಸುಬ್ಬು ಸುಸ್ತಾಗಿಬಿಟ್ಟ.


‘ ಹೌದು ಕಣಯ್ಯ ಆ ನರ್ಸಮ್ಮ ಹೆದ್ರುಕೊ ಬೇಡಿ, ಏನೂ ಆಗೊಲ್ಲ, ನಾವೆಲ್ಲ ಇಲ್ಲೆ ಇರ್ತಿವಿ ದೈರ್ಯವಾಗಿರಿ ಅಂತ ಹೇಳ್ತಿರೊದು ನಿಜ, ಆದ್ರೆ ಆ ಮಾತುಗಳನ್ನ ಆಕೆ ಹೇಳ್ತಿಓದು ನನಗಲ್ಲ- “ ಸರ್ಜರಿ ಮಾಡೊ ಡಾಕ್ಟ್ರುಗೆ “ ಅಂದ 

Comments