ನಾಗರಾಜನ ದ್ವೇಷ ಭಾಗ - ೨

ನಾಗರಾಜನ ದ್ವೇಷ ಭಾಗ - ೨

ನಾಗರಾಜನ ದ್ವೇಷ


ಪಾರ್ಥಸಾರಥಿ ಯವರು ಬರೆದಿರುವ ಮೇಲೆ ಹೆಸರಿಸಿರುವ ಲೇಖನ ಓದಿದೆ ಕುತೂಹಲ ಉಂಟುಮಾಡುವಲ್ಲಿ ಕಂಡಿತ ಯಶಸ್ವಿಯಾಗಿದೆ. ಈ ಹಿಂದಿನ ಅವರ ಬರಹ ವಿಕ್ಷಿಪ್ತ ಕೂಡ ಹೊಸ ಪ್ರಯೋಗ. ಈ ಎರಡೂ ಪ್ರಯೋಗಗಳಲ್ಲಿ ಅನಿಯನ್ತ್ರಿತ ಮನಸ್ಸಿನ ವಿಶ್ಲೇಷಣೆ ವ್ಯಕ್ತಗೊಂಡಿದೆ. ಸಾಮಾನ್ಯವಾಗಿ ಇಂತಹ ಭಾವನೆಗಳ ಮನಸ್ಸಿನ ತೊಳಲಾಟಗಳು ಈ ನಡುವೆ ಕೊಂಚ ಹೆಚ್ಚಾಗಿದೆ ಎಂದರೂ ಭಹುಷ; ತಪ್ಪೆನಿಸಲಾರದು. ಪಾರ್ಥಸಾರಥಿಯವರ ಎರಡನೆ ಪ್ರಸಂಗ ‘ನಾಗರಾಜನ ದ್ವೇಷ ‘ ಇದಕ್ಕೆ ಪೂರಕವಾಗಿ ನಾನು ಎರುಡು ಅಂತ್ಯಗಳನ್ನು ಕೊಡಬಯಸುತ್ತೇನೆ, ಅವರ ಅಪ್ಪಣೆಯನ್ನು ಕೇಳಿ,.


ಅಂತ್ಯ - ೧ ದೇವರ ಪಾಠ.


ಆದ ಅಪಘಾತಕ್ಕೆ ಮೂಲ ಕಾರಣ ತಾನೆ ಎಂದು ಗೊತ್ತಿದ್ದ ನಾಗರಾಜ ಹಿಂತಿರುಗಿ ನೋಡದೆ ತನ್ನ ಪಾಡಿಗೆ ತಾನು ಹೊರಟ. ಕಾಲ ಗರ್ಭದಲ್ಲಿ ಹುದುಗಿಹೋದ ಈ ಘಟನೆ ನಾಗರಾಜನ ಮನಸ್ಸಿನಿಂದಲೂ ದೂರವಾಯಿತು. ದಿನನಿತ್ಯದ ಕರ್ಮದಲ್ಲಿ ಮುಳುಗಿದ್ದ ನಾಗರಾಜನಿಗೆ ೭-೮ ತಿಂಗಳು ಕಳೆದ್ದಿದ್ದು ತಿಳಿಯಲೆ ಇಲ್ಲ.


ಇತ್ತೀಚೆಗೆ ಏಕೋ ಏನೋ ಯಾವ ಕೆಲಸದಲ್ಲೂ ಆಸಕ್ತಿಯೇ ಇಲ್ಲವಾಯಿತು. ಯಾವಾಗಲೂ ಏನೊ ಸುಸ್ತು ತಳಮಳ. ತೀರ ತಡೆಯದಾದಾಗ, ಕೊನೆಗೆ ಡಾಕ್ಟರ್ ಬಳಿ ಸಲಹೆ ಪಡೆಯೋಣವೆಂದುಕೊಂಡ.


ಆಫ಼ೀಸ್ಗೆ ರಜಾ ಹಾಕಿ, ಇನ್ನು ಹೆಂಡತಿಗೆ ಹೇಳಿದರೆ ಹೆದರಿಬಿಟ್ಟಾಳೆಂದು, ತಾನೊಬ್ಬನೆ ಕುಟುಂಬದ ವೈದ್ಯರಬಳಿ ಹೊರಟ.


ಸಂಪೂರ್ಣ ಪರೀಕ್ಷಿಸಿದ ವೈದ್ಯರು ಹೇಳಿದ್ದು,‘ ಮೇಲ್ನೋಟಕ್ಕೆ ಏನೂ ಕಾಣಿಸುತ್ತಿಲ್ಲ ನಾಗರಾಜ್, ಆದರೂ ಈ ರೀತಿ ಒಳ ಜ್ವರ ಒಳ್ಳೆಯದಲ್ಲ, ಜೊತೆಗೆ ಬಳಲಿಕೆ ಅನ್ನುತ್ತಿದ್ದೀರ ಹ್ಯಾಗದರೂ ಆಗಲಿ ಒಮ್ಮೆ ರಕ್ತ ಪರೀಕ್ಷೆ ಮಾಡಿಸಿಬಿಡಿ ನನ್ನ ಅನುಮಾನ ಪರಿಹಾರವಾಗಿಬಿಡಲಿ ‘ ಅಂದರು.


ಎರಡು ದಿನದ ನಂತರ ರಕ್ತ ಪರೀಕ್ಷೆಯ ಪಲಿತಾಂಶ ಕೈಯಲ್ಲಿಹಿಡಿದು ಡಾಕ್ಟರ್ ಬಳಿ ಬಂದ ನಾಗರಾಜ ಪಲಿತಾಂಶದ ಹಾಳೆಯನ್ನು ಡಾಕ್ಟರ್ ಗೆ ಒಪ್ಪಿಸಿ ಕೌತುಕದಿಂದ ಅವರನ್ನೆ ನೋಡುತ್ತಿದ್ದ.


ರಿಪೋಟ್ ನೋಡಿದ ಡಾಕ್ಟರ್ ಕುರ್ಚಿಯ ಬೆನ್ನಿಗೆ ಒರಗಿ ದೀರ್ಘವಾದ ಶ್ವಾಸವನ್ನು ಹೊರಗೆ ಹಾಕಿ ‘ ನಾಗರಾಜ್ ಯಾವಗ್ಲಿಂದ ನಿಮಗೆ ಹೀಗೆ ತೊಂಸರೆ ಇದೆ? ‘


‘ ಆರಾಮಾಗೆ ಇತ್ತು ಸಾರ್ ಈಗ ಒಂದೆರಡು ತಿಂಗಳಿಂದ ಹೀಗೆ ಸುಸ್ತು ಸಂಕಟ ‘


‘ನೋಡಿ ನಾಗರಾಜ್ ನಿಮ್ಮನ್ನ ಒಂದು ಪ್ರಶ್ನೆ ಕೇಳ್ತೀನಿ ಬೇಸರಮಾಡ್ಕೋಬೇಡಿ, ನೀವು ಏನು ಅಂತ ನಂಗೆ ಗೊತ್ತು, ಆದ್ರೂ ಡಾಕ್ತರ್ ಆದ್ರಿಂದ ಈ ವಿಷಯಗಳನ್ನ ಕೇಳ್ಲೇಬೇಕಾಗುತ್ತೆ ‘


ಈಗ ನಾಗರಾಜನಿಗೆ ನಿಜವಾದ ಗಾಬರಿ ಪ್ರಾರಂಭ ಆಯ್ತು.


‘ ಏಕೆ ಡಾಕ್ತರ್ ಎನಿ ಸೀರಿಯಸ್ ಪ್ರಾಬ್ಲಂ ‘


ಆಫ಼್ ಕೋರ್ಸ್ ನಾಗರಾಜ್ ಮ್ಯಾಟರ್ ಈಸ್ ವೆರಿ ಸೀರಿಯಸ್, ನಿಜ ಹೇಳಿ ನೀವು ಇತ್ತೀಚೆಗೆ ಅನ್ಯ ಹೆಂಗಸಿನ ಸಂಪರ್ಕ ಏನಾದರೂ.......?


ಡಾಕ್ತರ್ ಏನು ಹೇಳ್ತಿದ್ದೀರ ನೀವು ?  ಹೌದು ನಾಗರಾಜ್ ಈ ಖಾಯಲೆ ನಿಮ್ಗೆ ಹೇಗೆ ಬಂತು ಅಂತ ?.


ಅಂದ್ರೆ ಡಾಕ್ಟರ್ ನೀವು ಹೇಳೊದು ನಂಗೆ.... ‘ ಯೆಸ್ ಮಿಸ್ಟರ್ ನಾಗರಾಜ್ ನಿಮಗೆ ಏಡ್ಸ್ ಅಟ್ಯಾಕ್ ಆಗಿದೆ, ಸಾಮಾನ್ಯವಾಗಿ ಇದು ಬರಲಿಕ್ಕೆ ಇರುವ ಕಾರಣ ನಿಮಗೆ ಗೊತ್ತು, ಒಂದು ಪರ ಸ್ತ್ರೀ ಸಂಗ ಇಲ್ಲವೆ ಸೊಂಕು ಇರುವ ಸೂಜಿ ನಿಮ್ಮ ಶರೀರಕ್ಕೆ ಚುಚ್ಚಿದ್ದರೆ ಅಥವ ಸೊಂಕು ಇರುವ ರಕ್ತವನ್ನೇನಾದರು ನೀವು ಪಡೆದ್ದಿದ್ದರೆ ಮಾತ್ರ ಇದು ಸಾದ್ಯ. ಸರಿಯಾಗಿ ನೆನಪು ಮಾದಿಕೊಳ್ಳಿ ನಾಗರಾಜ್ ‘


ಅಪಘಾತವಾದ ಆ ದಿನವನ್ನು ನಾಗರಾಜ ನಿದಾನವಾಗಿ ನೆನಪಿಸಿಕೊಂಡ.


ಆದಿನ ಜನರೆಲ್ಲ ಹೊ ಹೊ...... ಆಮನುಷ್ಯ ಬಸ್ಸಿಗ ಸಿಕ್ಕಿಬಿಟ್ಟ ಸತ್ತೇ ಹೋದ ಅಂತ ಕಾಣುತ್ತೆ ಅಂದುಕೊಂಡು ಇಳಿಯುವಾಗ ನೂಕು ನುಗ್ಗಲು ಉಂಟಾಯಿತು, ಆ ಗಲಾಟೆಯಲ್ಲಿ ಹಿಂದೆ ಯಾರೊ ನನ್ನ ತೊಡೆಗೆ ಸೂಜಿ ಚುಚ್ಚಿ ಎಳೆದುಕೊಂಡಂತೆ ಅನಿಸ್ಸಿದರೂ, ಸೇಡು ತೀರಿಸಿಕೊಂಡ ಮನೊಭಾವನೆಯಲ್ಲಿ ಇದು ಗೌಣವೆನ್ನಿಸಿತ್ತು. ತದ ನಂತರ ದಿನಪತ್ರಿಕೆಯಲ್ಲಿ ಪ್ರಕಟಣೆಗೊಂಡಿದ್ದ ‘ ಇತ್ತೀಚೆಗೆ ಕೆಲವು ವಿಕೃತ ಮನಸ್ಸಿನ ಜನರು ಏಡ್ಸ್ ಸೊಂಕಿರುವ ಸೂಜಿಯನ್ನು ಜನಸಮೂಹ ಇರುವ ಕಡೆ ಯಾರೆಂದರವರಿಗೆ ಚುಚ್ಚಿ ಸೋಂಕನ್ನು ಹರಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಈ ಬಗ್ಗೆ ಪೋಲೀಸರಿಗೂ ಮಾಹಿತಿ ಇದ್ದು ಸೂಕ್ತ ಕ್ರನ ಕೈಗೊಳ್ಳಲಾಗಿದೆ ಆದರೂ ಜನಗಳು ಎಚ್ಚರಿಕೆಯಿಂದಿರಬೇಕೆಂದು ಆರೋಗ್ಯ ಇಲಾಖೆ ತಿಳಿಸುತ್ತದೆ ‘ - ಎಂಬ ಪ್ರಕಟಣೆ. ಇದೆಲ್ಲ ನೆನಪಾದದ್ದೆ ತಡ, ಬುಡ ಕತ್ತರಿಸಿದ ಬಾಳೆಯ ಮರದಂತೆ ಹಿಂದಿದ್ದ ಕುರ್ಚಿಯ ಮೇಲೆ ದೊಪ್ಪೆಂದು ಬಿದ್ದ ನಾಗರಾಜ.


‘ ತಾನು ಕಂಡುಕೊಂಡ ಸೂಜಿಯ ಮೊನೆ ಒಂದು ಜೀವ ತೆಗೆದಿದ್ದರೆ, ಮತ್ತೊಬ್ಬನ ಕೈಲಿ ಸಿಕ್ಕ ಅದೆ ಸೂಜಿಯ ಮೊನೆ ತನ್ನ ಜೀವನವನ್ನೇ ತೆಗೆದುಕೊಂಡಿತ್ತು ನಾಗರಾಜನ ಬದುಕಿನಲ್ಲಿ ‘


 “ ಇದಲ್ಲವೆ ವಿದಿಯ ಆಟ - ದೇವರ ಪಾಠ “


 


ಅಂತ್ಯ - ೨ ............ ? 


......ಮತ್ತೆ ಬರುತ್ತೇನೆ ಆಯ್ತಾ  

Comments