ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ
ಒಂದೆರೆಡು ವಾರದ ಹಿಂದೆ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ ಸೂಪರ್ ಸಿನಿಮಾ ನೋಡುವ ಆಸೆ ಹುಟ್ಟಿತು. ಗೆಳೆಯರೆಲ್ಲ ಸೂಪರ್ ನೋಡಿದ್ರೆ ಯಾವುದಾದರು ಮಾಲ್-ನಲ್ಲೆ ನೋಡಿ ಅಂತ ಹೇಳಿದ್ರು- ಚಿತ್ರದ ದೃಶ್ಯ ಮತ್ತು ಶ್ರವ್ಯ ಪ್ರಭಾವಗಳನ್ನು ಅನುಭವಿಸುವುದಕ್ಕಾಗಿ ಮಾಲ್-ಗಳಲ್ಲಿ ಒಳ್ಳೆಯ ಧ್ವನಿ ವರ್ಧಕಗಳನ್ನ ಅಳವಡಿಸಿರುತ್ತಾರೆ ಎಂಬ ಸಮಾಧಾನಕ್ಕಾಗಿ. ಸರೀ ಭಾನುವಾರ ಸಂಜೆಯ ೬.೨೫ ರ ಶೋ ಗೆ ಚೀಟಿ ಪಡೆದು ಹೊರಡುವ ತಯಾರಿ ನಡೆಸಿದೆವು. ಹೇಗಿದ್ದರೂ ಮಾಲ್-ಗೆ ತಾನೇ ಹೋಗೋದು, ಗಾಡಿ ಇಡಲು ಸಮಸ್ಯೆ ಇರುವುದಿಲ್ಲವೆಂದು ಸ್ವಲ್ಪ ತಡವಾಗಿಯೇ ಹೊರೆಟೆವು. ೬.೧೦ ರ ಹೊತ್ತಿಗೆ ಮಾಲ್-ನ ಮುಂದೆ ಹೋಗಿ ನಿಂತರೆ ದ್ವಿ-ಚಕ್ರ ವಾಹನಗಳ ನಿಲುಗಡೆ ಜಾಗ ಭರ್ತಿಯಾಗಿದೆ, ನೀವು ಹೊರಗೆ ನಿಲ್ಲಿಸಿ ಎಂದ ಕಾವಲುಗಾರ! ಚಿತ್ರ ನೋಡುವ ಚೀಟಿ ಮುಂಗಡ ಕಾದಿರಿಸಿದೆ ಅಂದರೆ ಕೇಳಲೊಲ್ಲ ಆ ಭೂಪ. ಇದ್ದದ್ದು ಹತ್ತೇ ನಿಮಿಷ; ಒಳಗೆ ಮೂರನೇ ಮಹಡಿಗೆ ಹೋಗಲು. ಸರೀ... ಜಗಳವಾಡುವುದು ತರವಲ್ಲ ಎಂದು ಸುತ್ತ ಮುತ್ತ ಹುಡುಕಾಡಿ ಎಲ್ಲೋ ಒಂದು ಮನೆಯ ಮುಂದೆ ಗಾಡಿ ನಿಲ್ಲಿಸಿ ಸಿನಿಮಾ ಮಂದಿರದೊಳಕ್ಕೆ ಹೋದೆವು. ಗಾಡಿ ನಿಲ್ಲಿಸಿದ್ದನ್ನೇ ಗುರಾಯಿಸುತ್ತಿದ್ದರು ಸಂಚಾರಿ ಕಾವಲು ಯೋಧರು! ನೋಡಿದರೂ ಪರವಾಗಿಲ್ಲ ಎಂದು ಧೈರ್ಯ ಮಾಡಿ ಮಾಲ್-ನ ಕಡೆಗೆ ನಡಿಗೆ ಹಾಕಿಯೇ ಬಿಟ್ಟೆವು. ಸಿನಿಮಾ ನೋಡ ನೋಡುತ್ತಿದ್ದಂತೆಯೇ ಮುಗಿದೂ ಹೋಯಿತು!
ಸಿನಿಮಾ ನೋಡಿದ ಖುಷಿ ಸಿಗಲಿಲ್ಲ - ಮನಸ್ಸಿನ ತುಂಬಾ ಕಳವಳ .... ಗಾಡಿ ಏನಾಗಿಬಿಡುತ್ತದೋ , ಎಲ್ಲಿ ಪೋಲಿಸ್ ಮಾಮಂದಿರು ನೋ ಪಾರ್ಕಿಂಗ್ ಏರಿಯ ಅಂತ ಗಾಡಿಯನ್ನ ಎತ್ತಿಕೊಂಡು ಹೊರಟು ಹೋಗುವರೋ ಎಂದು. ಒಟ್ಟಿನಲ್ಲಿ ಒಳ್ಳೆ ಕಾಟ ಆಯಿತಲ್ಲ ಎಂದುಕೊಂಡೆ. ದುಡ್ಡು ಕೊಟ್ಟು ದುಃಖ ಕೊಂಡು ಕೊಂಡ ಅನುಭವ ನನ್ನದು - ನನ್ನಂತೆಯೇ ಅಲ್ಲಿಗೆ ದ್ವಿ-ಚಕ್ರ ವಾಹನದಲ್ಲಿ ಬಂದಿದ್ದ ಎಲ್ಲರದ್ದು ಎಂಬುದು ನನ್ನ ಊಹೆ.
ಮಿತ್ರರೆಲ್ಲರಿಗೂ ಹೇಳಬೇಕೆಂದಿರುವುದು ಇಷ್ಟೇ... ಮಾಲ್ ನಲ್ಲಿ ಸಿನಿಮಾ ನೋಡುವುದನ್ನ ವಾರಾಂತ್ಯಗಳಲ್ಲಿ ಆದಷ್ಟು ಕಡಿಮೆ ಮಾಡಿ ಇಲ್ಲವೇ ಒಂದೆರಡು ಮೂರು ಘಂಟೆ ಮೊದಲೇ ಮಾಲ್ ನ ಒಳಗೆ ಹೋಗಿ ಏನಾದರು ಕೆಲಸವಿದ್ದರೆ ಮುಗಿಸಿಕೊಳ್ಳಿ.
Comments
ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ
In reply to ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ by kadalabhaargava
ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ
ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ
ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ
In reply to ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ by karthi
ಉ: ಮಾಲ್-ಗಳಲ್ಲಿ ಚಿತ್ರ ವೀಕ್ಷಿಸುವವರ ಗಮನಕ್ಕೆ