ಹೊಸದೊಂದು ಪರಿಚಯಕೆ
ಕವನ
ಹೊಸದೊಂದು ಪರಿಚಯಕೆ
ಹಸನಾದ ಮನದಿಂದ
ಸ್ವಾಗತವ ಕೋರುವೆ
ಎದೆಯಾಳದೊಲವಿಂದ
ಎದೆಯ ಬನದ
ಕೇದಗೆಯ ಕಾದಿರಿಸಿ
ಕಾಯುವೆ ನೀ ಬರುವ ಘಳಿಗೆಗಾಗಿ
ಬಿರಿದ ಮಲ್ಲಿಗೆ ಮೊಗ್ಗ
ದಾರಿಯಲಿ ಹರಡಿಸಿ
ಕಾಯುವೆ ನೀ ಬರುವ ಘಳಿಗೆಗಾಗಿ
ಗಂಧ ಸೂಸುವ
ಚಂದನದ ಮರಗಳನು
ಇಕ್ಕೆಲದಿ ನೆಡಿಸಿ
ಕಾಯುವೆ ದಾರಿಯಲಿ ನೀ ಬರುವ ವೇಳೆಗಾಗಿ
ನನ್ನೆಲ್ಲ ಕನಸುಗಳ
ಮುಡಿಪಿಡುವೆ ನಿನಗಾಗಿ
ಇರುವೆಲ್ಲ ಪ್ರೀತಿಯನು
ಕಾಪಿಡುವೆ ನಿನಗಾಗಿ
ಹಗಲು ಇರುಳುಗಳಲ್ಲಿ
ಬಾಳ ಪಯಣದ ಏರಿಳಿತಗಳಲ್ಲಿ
ಜೊತೆಗಿರುವೆ ನೆರಳಾಗಿ
ನಿನ್ನೊಲವ ಕೊರಳಾಗಿ
ನೀನುಡಿವ ಎಲ್ಲ ಮಾತಿನ
ಮಾತು ನಾನಾಗುವೆನು
ನೀ ಬರೆವ ರಂಗವಲ್ಲಿಯ
ಪ್ರತಿ ಚುಕ್ಕಿಯಾಗುವೆನು
ನೀ ಬರೆವ ಚಿತ್ರಕ್ಕೆ
ಬಣ್ಣ-ಭಿತ್ತಿ-ಭಾವ ನಾನಾಗುವೆನು
ಹೊಂಬೆಳಗ ಸೂಸುವ ನಿನ್ನ
ಜೋಡಿ ನಯನ ನಕ್ಷತ್ರಗಳು
ಎಂದೆಂದಿಗೂ ನಗುತಿರಲೂ
ನೀಡುವೆನು ಎನ್ನ ಬಾಳ ಬಾಂದಳವನು
ಹಗಲು-ಇರುಳುಗಳಲ್ಲಿ
ಮುಂಬೆಳಗು-ಬೈಗಿನಲು
ಸೂರ್ಯ-ಚಂದ್ರ-ತಾರೆಗಳ ಹಾಗೆ
ನಾನಿರುವೆ ನಿನ್ನೊಡನೆ
ನಿನ್ನ ಎದೆಯ ಬಂಧಿಯಾಗಿ
- ಜಯಪ್ರಕಾಶ ನೇ ಶಿವಕವಿ
Comments
ಉ: ಹೊಸದೊಂದು ಪರಿಚಯಕೆ
In reply to ಉ: ಹೊಸದೊಂದು ಪರಿಚಯಕೆ by Jayanth Ramachar
ಉ: ಹೊಸದೊಂದು ಪರಿಚಯಕೆ
ಉ: ಹೊಸದೊಂದು ಪರಿಚಯಕೆ
In reply to ಉ: ಹೊಸದೊಂದು ಪರಿಚಯಕೆ by Tejaswi_ac
ಉ: ಹೊಸದೊಂದು ಪರಿಚಯಕೆ