ಹೆಣ್ಣೇ.. ನಿನಗಿದೊ ನನ್ನ ವಂದನೆ

ಹೆಣ್ಣೇ.. ನಿನಗಿದೊ ನನ್ನ ವಂದನೆ

 

ನಮಸ್ಕಾರ ಎಲ್ಲರಿಗೂ...
ಬಹಳ ದಿನಗಳಿಂದ ಈ ವಿಷಯದ ಬಗ್ಗೆ ಬರೆಯಬೇಕು ಎಂದೆಣಿಸಿದ್ದೆ, ಆದರೆ ಕಾಲಾವಕಾಶ ಸಿಕ್ಕಿರಲಿಲ್ಲ... 
ಇದು ಮದುವೆ ಅಗೆಬೇಕೆಂದಿರುವ ವರಮಹಾಶಯರಿಗೆ, ಮದುವೆಯಾಗಿರುವ ಸಭ್ಯ ಗೃಹಸ್ತರಿಗೆ, ಮದುವೆಯೆ ಬೇಡವೆಂದು ತೀರ್ಮಾನಿಸಿರುವ ಹುಡುಗರಿಗು ತಿಳಿದಿರಬೇಕಾದ ವಿಷಯವೆಂದು ಭಾವಿಸಿ, ಇಲ್ಲಿ ವ್ಯಕ್ತಪಡಿಸುತ್ತಿದ್ದೇನೆ.... 
ಒಬ್ಬ ಹೆಣ್ಣುಮಗಳನ್ನು ಮದುವೆಯಾಗುವ ಮುನ್ನ, ಈ ಎಲ್ಲಾ ವಸ್ತುಸ್ಥಿತಿಯನ್ನು ಅರಿತು ಮುಂದುವರಿಯಬೇಕಾಗುತ್ತದೆ.
1. ಆಕೆ ನಿಮ್ಮಷ್ಟೆ ವ್ಯಾಸಂಗ ಮಾಡಿರಬಹುದು ಮತ್ತು ನಿಮಷ್ಟೆ ಆದಾಯವನ್ನು ಗಳಿಸುತ್ತಿರಬಹುದು.
2. ನಿಮ್ಮಂತೆಯೆ ಸಾಕಷ್ಟು ಕನಸುಗಳು, ಆಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತು ಬಂದಿರುತ್ತಾಳೆ. (ಎಷ್ಟೇ ಆದರು ನಿಮ್ಮಂತೆಯೆ ಅವಳು ಮನುಷ್ಯಳಲ್ಲವೆ )
3. ಮಹಿಳೆಯ ಪಾಕಶಾಸ್ತ್ರದ ಪ್ರಬುಧ್ದತೆಗೆ ಯಾವ ವಿಷೇಶವಾದ ಬೆಲೆಯನ್ನು ಕೊಡದ ಈ ನಿರ್ದಯಿ ಸಮಾಜದಲ್ಲಿ, ಬುದ್ಧಿಮತ್ತೆಗಾಗಿ ಓದುತ್ತಾ, ಸ್ತಾನಮಾನಕ್ಕಾಗಿ ಪೈಪೋಟಿ ನಡೆಸುತ್ತಾ ಇರುವ ಸಮಯದಲ್ಲಿ, ನಿಮ್ಮಂತೆ ಅಥವಾ ನಿಮ್ಮ ಅಕ್ಕ ತಂಗಿಯರ ಹಾಗೆ ಅಡುಗೆಮನೆಯ ಒಳಹೊಕ್ಕು ಪಾಕಶಾಸ್ತ್ರ ಕಲಿಯದೇ ಇರಬಹುದು.
4. 20 25 ವರ್ಷಗಳವರೆಗೆ, ನಿಮ್ಮಂತೆಯೆ ತನ್ನ ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿಯನ್ನು ಪ್ರೀತೆಯ ಸುಧೆಯನ್ನು ಹರಿಸುತ್ತಾ ಮತ್ತು ಪ್ರತಿಯಾಗಿ ಪ್ರೀತಿಯನ್ನು ಪಡೆಯುತ್ತಾ, ನೆಮ್ಮದಿಯ ಜೀವನ ನಡೆಸಿರುತ್ತಾಳೆ.
5. ನಿಮ್ಮ ಮನೆ, ಸಂಸಾರ, ಮನೆತನದ ಹೆಸರಿಗಾಗಿ ತನ್ನೆಲ್ಲಾ ಪ್ರೀತಿಪಾತ್ರರನ್ನು ತೊರೆದು ಬರಲು ಮನಸ್ಸನ್ನು ಗಟ್ಟಿಮಾಡಿಕೊಳ್ಳುವ ನಿರ್ದಾರ ಮಾಡಿರುತ್ತಾಳೆ.
6. ನಿಮ್ಮಷ್ಟೆ ಅಥವಾ ನಿಮಗಿಂತ ಹೆಚ್ಚು ದಣಿದಿದ್ದರೂ, ಮುಂಜಾನೆಯ ಚಹಾ ತಯಾರಿಯಿಂದ ಮೊದಲ್ಗೊಂಡು ರಾತ್ರಿ ಭೋಜನ ಸಿಧ್ದಮಾಡುವವರೆವಿಗು ಅಚ್ಚುಕಟ್ಟಾಗಿ ಮಾಡಬೇಕು, ಆದರೂ ಎಂದಿಗೂ ನಿಮ್ಮನ್ನು ದೂರುವುದಿಲ್ಲ. ಆಕೆಗೆ ಸಮ್ಮತವಿಲ್ಲದ್ದಿದ್ದರೂ, ಒಬ್ಬ ಮಮತೆಯೆರೆಯುವ ತಾಯಿಯಾಗಿ, ಮನೆ ಕೆಲಸದವಳಾಗಿ, ಅಡುಗೆಯವಳಾಗಿ, ಹೆಂಡತಿಯಾಗಿ ತನ್ನೆಲ್ಲಾ ಸಾಮರ್ಥ್ಯವನ್ನು ಯಾವುದೆ ಅಪೇಕ್ಷೆಯಿಲ್ಲದೆ ಧಾರೆಯೆರೆಯುತ್ತಾಳೆ. ಕೆಲವೊಮ್ಮೆ ಒರಟಾಗಿ, ದಡ್ಡತನದಿಂದ ವರ್ತಿಸುತ್ತಾಳೆ. ನಿಮಗಿಂತ ಹೆಚ್ಚು ತಿಳುವಳಿಕೆ ಪ್ರದರ್ಶಿಸುವುದು ಮತ್ತು ಹಕ್ಕು ಚಲಾಯಿಸುವುದು, ನಿಮಗಿಷ್ಟವಿಲ್ಲವೆಂದು ಆಕೆಗೂ ಅರಿವಿದೆ.
7. ಬಹುಮ‍ಂದಿ ಸ್ನೇಹಿತ, ಸ್ನೇಹಿತೆಯರು, ಕೆಲಸದಲ್ಲಿನ ಪುರುಷ ಸಹೋದ್ಯೋಗಿಗಳು, ಬಾಲ್ಯ ಸ್ನೇಹಿತರು ಎಲ್ಲರನ್ನೂ ಒತ್ತಟ್ಟಿಗೆ ಇಡುತ್ತಾಳೆ. ಏಕೆಂದರೆ, ನಿಮ್ಮ ವಿಚಾರಹೀನ ಈರ್ಷ್ಯೆ, ಅರ್ಥರಹಿತ ಪೈಪೋಟಿ ಮತ್ತು ಹುಟ್ಟಿನಿಂದ ಬಂದ ಅಸುರಕ್ಷತೆಯ ಭಾವನೆಗಳಿಂದ ತಪ್ಪಿಸಿಕೊಳ್ಳಲು.
8. ನಿಮ್ಮಂತೆಯೆ ಆಕೆಯು ಕುಡಿದು ಕುಪ್ಪಳಿಸಬಹುದು, ಆದರೆ ನಿಮ್ಮ ಘನತೆ ಗೌರವಕ್ಕೆ ಧಕ್ಕೆಯಾಗಬಾರದೆಂದು ಮತ್ತು ಅದು ನಿಮಗೆ ಇಷ್ಟವಿಲ್ಲವೆಂದು ಸುಮ್ಮನಿರುತ್ತಾಳೆ.
9. ನಿಮಗಿರುವ ಹಾಗೆ ಆಕೆಗು ಕಛೇರಿಯಲ್ಲಿನ‌ ಕೆಲಸದ ಗಡುವುಗಳು ಇರುವುದರಿಂದ, ಕೆಲವೊಮ್ಮೆ ಮನೆಗೆ ತಡವಾಗಿ ಬರಬಹುದು.
10. ತನ್ನ ಈ ಸಂಬಂಧವನ್ನು, ಜೀವಿತಾವಧಿಯ ಮಹತ್ವವಾದದ್ದಾಗಿಸುವ ಪ್ರಾಮಾಣಿಕ ಪ್ರಯತ್ನ ಅವಳಿಂದ ಯಾವಗಲೂ ಇರುತ್ತದೆ, ನಿಮ್ಮ ಪ್ರೀತಿ ಮತ್ತು ನಂಬಿಕೆ ಇದ್ದಲ್ಲಿ.
11. ನಿಮ್ಮಿಂದ ಆಕೆಯ ನಿರೀಕ್ಷೆ ಕೇವಲ ನಿಮ್ಮ ಉದಾರ ಹೃದಯದ ಬೆಂಬಲ, ನಿಮ್ಮ  ಭಾವನಾತ್ಮಕ ಸಂವಹನೆ ಮತ್ತು ಅತಿಮುಖ್ಯವಾಗಿ ನಿಮ್ಮ ಅಚಲವಾದ ನಂಬಿಕೆ ಹಾಗು ಅಪ್ರತಿಮವಾದ ಪ್ರೇಮ..
ಆದರೆ ದುರದೃಷ್ಟವಶಾತ್ ಬಹಳಮಂದಿ ಪುರುಷರು ಇದನ್ನು ಅರ್ಥೈಸಿಕೊಳ್ಳುವುದಿಲ್ಲ.
ದಯವಿಟ್ಟು ಅವಳನ್ನು, ಆಕೆಯ ಶ್ರಮವನ್ನು ಪ್ರಶಂಶಿಸಿ ಮತ್ತು ಗೌರವಿಸಿ... 
ಮಾಡ್ತೀರಲ್ಲಾ.... ?? 
ಧನ್ಯವಾದಗಳು.... 

 

ನಮಸ್ಕಾರ ಎಲ್ಲರಿಗೂ...


ಬಹಳ ದಿನಗಳಿಂದ ಈ ವಿಷಯದ ಬಗ್ಗೆ ಬರೆಯಬೇಕು ಎಂದೆಣಿಸಿದ್ದೆ, ಆದರೆ ಕಾಲಾವಕಾಶ ಸಿಕ್ಕಿರಲಿಲ್ಲ... ಇದು ಮದುವೆ ಅಗೆಬೇಕೆಂದಿರುವ ವರಮಹಾಶಯರಿಗೆ, ಮದುವೆಯಾಗಿರುವ ಸಭ್ಯ ಗೃಹಸ್ತರಿಗೆ, ಮದುವೆಯೆ ಬೇಡವೆಂದು ತೀರ್ಮಾನಿಸಿರುವ ಹುಡುಗರಿಗು ತಿಳಿದಿರಬೇಕಾದ ವಿಷಯವೆಂದು ಭಾವಿಸಿ, ಇಲ್ಲಿ ವ್ಯಕ್ತಪಡಿಸುತ್ತಿದ್ದೇನೆ.... 


ಒಬ್ಬ ಹೆಣ್ಣುಮಗಳನ್ನು ಮದುವೆಯಾಗುವ ಮುನ್ನ, ಈ ಎಲ್ಲಾ ವಸ್ತುಸ್ಥಿತಿಯನ್ನು ಅರಿತು ಮುಂದುವರಿಯಬೇಕಾಗುತ್ತದೆ.

 

ಆಕೆ ನಿಮ್ಮಷ್ಟೆ ವ್ಯಾಸಂಗ ಮಾಡಿರಬಹುದು ಮತ್ತು ನಿಮಷ್ಟೆ ಆದಾಯವನ್ನು ಗಳಿಸುತ್ತಿರಬಹುದು.

 

ನಿಮ್ಮಂತೆಯೆ ಸಾಕಷ್ಟು ಕನಸುಗಳು, ಆಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತು ಬಂದಿರುತ್ತಾಳೆ. (ಎಷ್ಟೇ ಆದರು ನಿಮ್ಮಂತೆಯೆ ಅವಳು ಮನುಷ್ಯಳಲ್ಲವೆ )

 

ಮಹಿಳೆಯ ಪಾಕಶಾಸ್ತ್ರದ ಪ್ರಬುಧ್ದತೆಗೆ ಯಾವ ವಿಷೇಶವಾದ ಬೆಲೆಯನ್ನು ಕೊಡದ ಈ ನಿರ್ದಯಿ ಸಮಾಜದಲ್ಲಿ, ಬುದ್ಧಿಮತ್ತೆಗಾಗಿ ಓದುತ್ತಾ, ಸ್ತಾನಮಾನಕ್ಕಾಗಿ ಪೈಪೋಟಿ ನಡೆಸುತ್ತಾ ಇರುವ ಸಮಯದಲ್ಲಿ, ನಿಮ್ಮಂತೆ ಅಥವಾ ನಿಮ್ಮ ಅಕ್ಕ ತಂಗಿಯರ ಹಾಗೆ ಅಡುಗೆಮನೆಯ ಒಳಹೊಕ್ಕು ಪಾಕಶಾಸ್ತ್ರ ಕಲಿಯದೇ ಇರಬಹುದು.

 

 20- 25 ವರ್ಷಗಳವರೆಗೆ, ನಿಮ್ಮಂತೆಯೆ ತನ್ನ ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿಯನ್ನು ಪ್ರೀತೆಯ ಸುಧೆಯನ್ನು ಹರಿಸುತ್ತಾ ಮತ್ತು ಪ್ರತಿಯಾಗಿ ಪ್ರೀತಿಯನ್ನು ಪಡೆಯುತ್ತಾ, ನೆಮ್ಮದಿಯ ಜೀವನ ನಡೆಸಿರುತ್ತಾಳೆ.

 

ನಿಮ್ಮ ಮನೆ, ಸಂಸಾರ, ಮನೆತನದ ಹೆಸರಿಗಾಗಿ ತನ್ನೆಲ್ಲಾ ಪ್ರೀತಿಪಾತ್ರರನ್ನು ತೊರೆದು ಬರಲು ಮನಸ್ಸನ್ನು ಗಟ್ಟಿಮಾಡಿಕೊಳ್ಳುವ ನಿರ್ಧಾರ‌ ಮಾಡಿರುತ್ತಾಳೆ.

ನಿಮ್ಮಷ್ಟೆ ಅಥವಾ ನಿಮಗಿಂತ ಹೆಚ್ಚು ದಣಿದಿದ್ದರೂ, ಮುಂಜಾನೆಯ ಚಹಾ ತಯಾರಿಯಿಂದ ಮೊದಲ್ಗೊಂಡು ರಾತ್ರಿ ಭೋಜನ ಸಿಧ್ದಮಾಡುವವರೆವಿಗು ಅಚ್ಚುಕಟ್ಟಾಗಿ ಮಾಡಬೇಕು, ಆದರೂ ಎಂದಿಗೂ ನಿಮ್ಮನ್ನು ದೂರುವುದಿಲ್ಲ. ಆಕೆಗೆ ಸಮ್ಮತವಿಲ್ಲದ್ದಿದ್ದರೂ, ಒಬ್ಬ ಮಮತೆಯೆರೆಯುವ ತಾಯಿಯಾಗಿ, ಮನೆ ಕೆಲಸದವಳಾಗಿ, ಅಡುಗೆಯವಳಾಗಿ, ಹೆಂಡತಿಯಾಗಿ ತನ್ನೆಲ್ಲಾ ಸಾಮರ್ಥ್ಯವನ್ನು ಯಾವುದೆ ಅಪೇಕ್ಷೆಯಿಲ್ಲದೆ ಧಾರೆಯೆರೆಯುತ್ತಾಳೆ. ಕೆಲವೊಮ್ಮೆ ಒರಟಾಗಿ, ದಡ್ಡತನದಿಂದ ವರ್ತಿಸುತ್ತಾಳೆ. ನಿಮಗಿಂತ ಹೆಚ್ಚು ತಿಳುವಳಿಕೆ ಪ್ರದರ್ಶಿಸುವುದು ಮತ್ತು ಹಕ್ಕು ಚಲಾಯಿಸುವುದು, ನಿಮಗಿಷ್ಟವಿಲ್ಲವೆಂದು ಆಕೆಗೂ ಅರಿವಿದೆ.

 

ಬಹುಮ‍ಂದಿ ಸ್ನೇಹಿತ, ಸ್ನೇಹಿತೆಯರು, ಕೆಲಸದಲ್ಲಿನ ಪುರುಷ ಸಹೋದ್ಯೋಗಿಗಳು, ಬಾಲ್ಯ ಸ್ನೇಹಿತರು ಎಲ್ಲರನ್ನೂ ಒತ್ತಟ್ಟಿಗೆ ಇಡುತ್ತಾಳೆ. ಏಕೆಂದರೆ, ನಿಮ್ಮ ವಿಚಾರಹೀನ ಈರ್ಷ್ಯೆ, ಅರ್ಥರಹಿತ ಪೈಪೋಟಿ ಮತ್ತು ಹುಟ್ಟಿನಿಂದ ಬಂದ ಅಸುರಕ್ಷತೆಯ ಭಾವನೆಗಳಿಂದ ತಪ್ಪಿಸಿಕೊಳ್ಳಲು.

 

ನಿಮ್ಮಂತೆಯೆ ಆಕೆಯು ಕುಡಿದು ಕುಪ್ಪಳಿಸಬಹುದು, ಆದರೆ ನಿಮ್ಮ ಘನತೆ ಗೌರವಕ್ಕೆ ಧಕ್ಕೆಯಾಗಬಾರದೆಂದು ಮತ್ತು ಅದು ನಿಮಗೆ ಇಷ್ಟವಿಲ್ಲವೆಂದು ಸುಮ್ಮನಿರುತ್ತಾಳೆ.

 

ನಿಮಗಿರುವ ಹಾಗೆ ಆಕೆಗು ಕಛೇರಿಯಲ್ಲಿನ‌ ಕೆಲಸದ ಗಡುವುಗಳು ಇರುವುದರಿಂದ, ಕೆಲವೊಮ್ಮೆ ಮನೆಗೆ ತಡವಾಗಿ ಬರಬಹುದು.

 

ತನ್ನ ಈ ಸಂಬಂಧವನ್ನು, ಜೀವಿತಾವಧಿಯ ಮಹತ್ವವಾದದ್ದಾಗಿಸುವ ಪ್ರಾಮಾಣಿಕ ಪ್ರಯತ್ನ ಅವಳಿಂದ ಯಾವಗಲೂ ಇರುತ್ತದೆ, ನಿಮ್ಮ ಪ್ರೀತಿ ಮತ್ತು ನಂಬಿಕೆ ಇದ್ದಲ್ಲಿ.

 

ನಿಮ್ಮಿಂದ ಆಕೆಯ ನಿರೀಕ್ಷೆ ಕೇವಲ ನಿಮ್ಮ ಉದಾರ ಹೃದಯದ ಬೆಂಬಲ, ನಿಮ್ಮ  ಭಾವನಾತ್ಮಕ ಸಂವಹನೆ ಮತ್ತು ಅತಿಮುಖ್ಯವಾಗಿ ನಿಮ್ಮ ಅಚಲವಾದ ನಂಬಿಕೆ ಹಾಗು ಅಪ್ರತಿಮವಾದ ಪ್ರೇಮ..


ಆದರೆ ದುರದೃಷ್ಟವಶಾತ್ ಬಹಳಮಂದಿ ಪುರುಷರು ಇದನ್ನು ಅರ್ಥೈಸಿಕೊಳ್ಳುವುದಿಲ್ಲ.
ದಯವಿಟ್ಟು ಅವಳನ್ನು, ಆಕೆಯ ಶ್ರಮವನ್ನು ಪ್ರಶಂಶಿಸಿ ಮತ್ತು ಗೌರವಿಸಿ... 
ಮಾಡ್ತೀರಲ್ಲಾ.... ?? 


ಧನ್ಯವಾದಗಳು.... 

Rating
No votes yet

Comments