ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..
೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..
ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾ
ಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್ಯ ಏನಪ್ಪಾ ವಿಸ್ಯ...
ಅಪ್ಪ : ಏನಿಲ್ಲ ಶಂಕ್ರಣ್ಣ, ನಾನು ಮೊದಲು ಅಂಗೇ ಅಂದುಕೊಂಡಿದ್ದೆ. ಶಾಲೆ ದೂರ ಐತೆ ಅದೂ ಅಲ್ದೆ ಹೆಣ್ ಮಗ ಬೇರೆ. ಆದ್ರೆ ನಮ್ ಬಿ.ಜೆ.ಪಿ ಸರ್ಕಾರ ಬಂದ್ ಮ್ಯಾಕೆ ಶಾಲೆಗೆ ಹೋಗೋ ಹೆಣ್ ಮಕ್ಳಿಗೆ ಉಚಿತವಾಗಿ ಸೈಕಲ್ ಕೊಟ್ಟಿದೆ. ಅದಕ್ಕೆ ಮಗೀನ ಶಾಲೆಗೆ ಕಳಿಸ್ತಾ ಇದೀನಿ ಶಂಕ್ರಣ್ಣ.
ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ.
೨) ಏನ್ ರಾಮಣ್ಣ ಯಾವಾಗಲೂ ಕಟ್ಟೆ ಮೇಲೆ ಕೂರ್ತಾ ಇದ್ದೆ, ಈಗ ನೋಡಿದ್ರೆ ಹೊಲದ ಕಡೆ ಹೊರಟಿದ್ಯ
ಹೌದು ಕೃಷ್ಣಣ್ಣ ನಮ್ ಬಿಜೆಪಿ ಸರ್ಕಾರ ಬಂದ್ ಮ್ಯಾಕೆ ರೈತರಿಗೆ ಉಳಕ್ಕೆ ಬೀಜ ಕೊಡ್ತೈತೆ, ರಸಗೊಬ್ರ ಕೊಡ್ತೈತೆ ಅಷ್ಟೇ ಅಲ್ಲ ಶೇಕಡಾ ೩ ರೂ ಬಡ್ಡಿಯ ಹಾಗೆ ರೈತರಿಗೆ ಸಾಲ ಕೊಡ್ತೈತೆ..ಇಷ್ಟೆಲ್ಲಾ ನಮ್ ಬಿಜೆಪಿ ಸರ್ಕಾರ ರೈತರಿಗೆ ಸಹಾಯ ಮಾಡಬೇಕಾದರೆ ನಾವು ಯಾಕೆ ಸುಮ್ನೆ ಕೂರಬೇಕು ಅಂತ ಹೊಲದ ಕಡೆ ಹೊರಟಿದ್ದೀನಿ.
ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ
೩) ಏನ್ ಶಾಂತಕ್ಕ ಬಟ್ಟೆ ತೊಳ್ಯಕ್ಕೆ ಕೆರೆತಾವ ನೀನೆ ಬಂದಿದ್ದೀಯ...ಎಲ್ಲಿ ನಿನ್ ಸೊಸೆ.
ಲಕ್ಷ್ಮಕ್ಕ ನನ್ ಸೊಸೆ ಬಾಣಂತಿ ಅಲ್ವೆನಮ್ಮಿ, ಅದೂ ಅಲ್ದೆ ಹೆಣ್ ಮಗೀನ ಹೆತ್ತವಳೇ.
ಓ ಅದಕ್ಕೆ ಶಾಂತಕ್ಕ ಬೊ ಖುಸಿ ಆಗಿದ್ದೀಯ...ಹೌದು ಲಕ್ಷ್ಮಕ್ಕ ನಮ್ ಬಿಜೆಪಿ ಸರ್ಕಾರ ಬಂದ್ ಮ್ಯಾಕೆ ಹೆಣ್ ಮಕ್ಳಿಗೆ ೧೮ ವರ್ಸ ಆದ ಮ್ಯಾಕೆ ೧ ಲಕ್ಷ ಕೊಡತ್ತೆ ಕಣಮ್ಮೀ..ಅಷ್ಟೇ ಅಲ್ಲ ಓದೋ ಹೆಣ್ ಮಕ್ಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಾನೂ ಕೊಡತ್ತೆ ಕಣಮ್ಮೀ..
ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ
೪) ಏನ್ ರಾಮಣ್ಣ ಇಲ್ಲಿ ನಿಂತಿದ್ದೀಯ...
ಹಾ ಕೃಷ್ಣಣ್ಣ ಬಸ್ ಗೆ ನಿಂತಿದ್ದೀನಿ...ಎರಡೂವರೆ ವರ್ಷದ ಮುಂಚೆ ಇಲ್ಲಿ ರಸ್ತೆ ಎಲ್ಲಿತ್ತು...ಅದೇ ನಮ್ ಬಿಜೆಪಿ ಸರ್ಕಾರ ಬಂದ್ ಮ್ಯಾಕೆ ರಸ್ತೆ ಬಂತು, ಬಸ್ ಬಂತು...ನಮ್ ಬಿಜೆಪಿ ಸರ್ಕಾರ ಬಂದ್ ಮ್ಯಾಕೆ ಬೊ ಅಭಿವೃದ್ದಿ ಆಗೈತೆ ಕಣಣ್ಣ ನಮ್ ಹಳ್ಳಿ..
ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ
೫) ಏನ್ ಲಕ್ಷ್ಮಕ್ಕ ಕಪ್ಪಿಟ್ಟಿದ್ದ ಮಕದಾಗೆ ಲಕ್ಷ್ಮಿ ಕುಣಿತಾ ಅವಳೇ ಏನ್ ವಿಸ್ಯ..
ಹೂ ಕಣಣ್ಣ , ನಮ್ಮ ಮನ್ಯಾಗೆ ಐದು ಹಸಾ ಐತೆ ಅವಕ್ಕೆ ಹುಲ್ಲು, ಹಿಂಡಿ, ಬೂಸಾ ಇದೆಲ್ಲ ಹಾಕಿ ಹಾಲು ಕರೆದು ಮಾರಿದ್ರೂ ನಮಗೆ ಏನೂ ಉಳಿತಾ ಇರ್ಲಿಲ್ಲ..ಅದೇ ನಮ್ ಬಿಜೆಪಿ ಸರ್ಕಾರ ಬಂದ್ ಮ್ಯಾಕೆ ಡೈರಿ ಅವರು ಕೊಡೊ ದರಕ್ಕಿಂತ ಪ್ರತಿ ಲೀಟರ್ ಗೆ ೨ ರೂ ಹಾಗೆ ಹೆಚ್ಚಿಗೆ ಕೊಡ್ತಾವ್ರೆ..ಈಗ ನಾವು ಕೂಡ ಬೊ ಸಂತೋಷದಿಂದ ಇದೀವಿ ಕಣಣ್ಣ..
ಅಶರೀರ ವಾಣಿ : ಬನ್ನಿ ಕರ್ನಾಟಕವನ್ನು ಮತ್ತಷ್ಟು ಮುಂದುವರೆಸೋಣ ಅಭಿವೃದ್ಧಿಯ ಮಳೆಗಾಗಿ ಬಿಜೆಪಿ ಗೆ ಮತ ನೀಡಿ
ಏನಿದೆಲ್ಲ ಎಂದು ಆಶ್ಚರ್ಯ ಪಡುತ್ತಿದ್ದೀರಾ...ಇದು ನಾನು ಮಾಡುತ್ತಿರುವ ಪ್ರಚಾರ ಅಲ್ಲ. ಜಿಲ್ಲ ಪಂಚಾಯತ್ ಚುನಾವಣಾ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಸರ್ಕಾರ ರೇಡಿಯೋ ಹಾಗೂ ಟಿವಿ ಯಲ್ಲಿ ಕೊಡುತ್ತಿರುವ ಪ್ರಚಾರದ ತುಣುಕುಗಳು. ಎಷ್ಟೇ ಭ್ರಷ್ಟಾಚಾರ ಅವ್ಯವಹಾರ ಮಾಡಿದರೂ ಚುನಾವಣಾ ಸಮಯದಲ್ಲಿ ನಿಷ್ಟಾವಂತರ ಹಾಗೆ ಸೋಗು ಹಾಕಿಕೊಂಡು ಪ್ರಚಾರ ಕೊಡುವ ಇವರಿಗೆಲ್ಲ ನಾಚಿಕೆ, ಮಾನ, ಮರ್ಯಾದೆ ಅನ್ನುವುದು ಏನಾದರೂ ಉಂಟೆ??
Comments
ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..
In reply to ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ.. by MADVESH K.S
ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..
ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..
In reply to ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ.. by Iynanda Prabhukumar
ಉ: ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರ..