ಗಂಗೆ ನೀ ಏಕೆ ಹರಿಯುತ್ತಿ?
ಹೀಗೆಯೇ ಕ್ಯಾಬ್ನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುತ್ತಿದ್ದಾಗ, ಯಾವುದೋ ಹಾಡು ಕ್ಯಾಬ್ನಲ್ಲಿ ಮೊಳಗುತ್ತಿತ್ತು. ಆಕಸ್ಮಿಕವಾಗಿ, ಈ ಹಿಂದೆ ಕೇಳಿದ್ದ ಭೂಪೇನ್ ಹಜಾರಿಕ ರ "ಗಂಗಾ ಬೆಹೆತಿಹೋ ಕ್ಯೂ" ಹಾಡು, ಅರಿಯದಂತೆಯೇ ನಾಲಿಗೆಯ ಮೇಲೆ ಹರಿದಾಡಲು ಮೊದಲಾಯಿತು. ನಂತರ ಆ ಹಾಡನ್ನು ಹಾಡಿಕೊಂಡ ಮೇಲೆ ನನಗೆ ಅನಿಸಿದ್ದು, ಇಂದಿಗೂ ಈ ಹಾಡು ಎಷ್ಟು ಪ್ರಸ್ತುತವಾಗಿದೆ ಎಂಬುದು.
ಈ ಹಾಡಿನ ಸಾಲುಗಳು ಎಷ್ಟು ಮನೋಗ್ನವಾಗಿವೆ ಎಂದರೆ, ಕೇಳಿದೊಡನೆಯೇ, ಹೌದಲ್ಲವೇ, ಈಗ ನಡೆಯುತ್ತಿರುವುದು ನಿಜವಲ್ಲವೆ ಎಂದು ಅನಿಸದೆ ಇರಲಾರದು.
ಈ ಹಾಡು ಹಿಂದಿಯದಾದರೂ ಈ ಸಾಲುಗಳನ್ನು ಇಲ್ಲಿ ಹಾಕದೆ ಇರಲಾಗಲಿಲ್ಲ:
"ವಿಸ್ತಾರ್ ಹೈ ಅಪಾರ್
ಪ್ರಜಾ ದೋನೋ ಪಾರ್
ಕರೆ ಹಾ ಹಾ ಕಾರ್
ನಿಷ್ಯಬ್ದ್ಹ್ ಸದಾ
ಒಹ್ ಗಂಗಾ ತುಂ ಒಹ್ ಗಂಗಾ ಬೆಹೆತಿಹೋ ಕ್ಯು?
ನೈತಿಕತ ನಶ್ತ್ ಹುಯಿ
ಮಾನವತ ಭ್ರಷ್ಟ ಹುಯಿ
ನಿರ್ಲಜ್ಜ ಭಾವ ಸೆ ಬೆಹೆತಿಹೋ ಕ್ಯೂ
ಇತಿಹಾಸ್ ಕಿ ಪುಕಾರ್ ಕರೆ ಹೂನ್ಕಾರ್
ಒಹ್ ಗಂಗಾ ಕಿ ಧಾರ್ ನಿರ್ಬಲ್ ಜನ ಕೋ
ಸಬಲ್ ಸಂಗ್ರಾಮಿ, ಸಮಗ್ರೋಗಾಮಿ
ಬನಾತಿ ನಹಿ ಹೋ ಕ್ಯು?"
ಗಂಗೆಯು ಭಾರತೀಯರ ಪಾಲಿಗೆ ಒಂದು ಪವಿತ್ರವಾದ , ದೇವತುಲ್ಯವಾದ ನದಿ ಈ ಗಂಗೆಯ ವಿಸ್ತಾರವು ಬಹಳಷ್ಟು ವಿಶಾಲವಾದದ್ದು. ಅಂತೆಯೇ ಈ ಗಂಗೆಯ ಜೊತೆಯಲಿ, ಗಂಗೆಯನ್ನು ಅವಲಂಬಿಸಿರುವ ಜನರೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಗಂಗೆಯಂತಹ ಒಂದು ಪವಿತ್ರ ನದಿಯ ದಡದಲ್ಲಿದ್ದೂ ನೀರಿಲ್ಲದೆ ಹಾ ಹಾ ಕಾರ ಉಂಟಾಗಿರುವ ಸ್ಥಿತಿ ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಇಷ್ಟೆಲ್ಲಾ ಜನರ ಅರಣ್ಯರೋದನ ಯಾರ ಕಿವಿಗೂ ಬೀಳದೆ ನಿಷ್ಯಬ್ದವಾಗಿದೆ.
ಹೀಗಿದ್ದೂ ನೀನೇಕೆ ಹರಿಯುತ್ತೀ ಗಂಗೆ ಎಂದು ಕೇಳುತ್ತಾರೆ.
ಇಂದು ಭಾರತದಲ್ಲಿ ನೈತಿಕತೆ ನಷ್ಟವಾಗಿದೆ, ಇಡಿಯ ಮಾನವೀಯತೆಯೇ ಭ್ರಷ್ಟವಾಗಿದೆ, ನೀನಿದ್ದೂ ಹೀಗಾಗಿರುವ ಈ ಸ್ಥಿತಿಯಲ್ಲಿ ಲಜ್ಜೆಯಿಲ್ಲದೆ ಹರಿಯುತ್ತಿದ್ದೀಯಲ್ಲವೇ ಎಂದು ಗಂಗೆಯನ್ನು ಪ್ರಶ್ನಿಸುತ್ತಾರೆ.ಈ ಎಲ್ಲಕ್ಕೂ ಇಂದು ಇತಿಹಾಸ ಉದಾಹರಣೆಯಾಗಿ ನಿಲ್ಲುತ್ತದೆ ಅಲ್ಲದೆ ಇಲ್ಲಿ ನಡೆಯುವ ಪ್ರತಿಯೊಂದು ಅನಾಹುತವೂ, ಅನ್ಯಾಯವೂ, ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿಗೆ ಸಾಕ್ಷಿಯಂತೆ ಹೂಂಕರಿಸುತ್ತಲೇ ಇದೆ ಇಷ್ಟೆಲ್ಲಾ ಇದ್ದೂ, ಇದನ್ನೆಲ್ಲಾ ಕಂಡೂ ಕೂಡ ಸುಮ್ಮನೆ ಇರುವೆಯಲ್ಲ ಗಂಗೆ, ನಮ್ಮ ಜನರನ್ನು, ನಿರ್ಬಲರನ್ನು, ಸಬಲ ಯೋಧರನ್ನಾಗಿ, ಒಳ್ಳೆಯ ಕಾರ್ಯವೊಂದರ ಪ್ರೇರಣಾಶಕ್ತಿಯಾಗಿ, ಒಳ್ಳೆಯ ಕಾರ್ಯಕ್ಕಾಗಿ ಅವರನ್ನು ಉಗ್ರಗಾಮಿಗಳನ್ನಾಗಿ ಯಾಕೆ ಮಾಡುತ್ತಿಲ್ಲ. ಇಂತಹ ವೀರರ ದೇಶದಲ್ಲಿ, ಜನ ಏಕೆ ನಿರ್ವೀರ್ಯರಂತೆ ವರ್ತಿಸುತ್ತಿದ್ದಾರೆ ಎಂದು ಗಂಗೆಯನ್ನು ಕೇಳುತ್ತಾರೆ.
ಈ ಹಾಡನ್ನು ಕೇಳಿದೊಡನೆಯೇ, ಮೈಮನ ರೋಮಾಂಚನವಾಯಿತು, ಪೂರ್ತಿ ಹಾಡಿನ ಸಾಲುಗಳನ್ನು ಇಲ್ಲಿ ಹಾಕಿಲ್ಲ. ಸಾಂಕೇತಿಕವಾಗಿ ಈ ಹಾಡಿನ ಕೆಲವು ಸಾಲುಗಳನ್ನು ಮಾತ್ರ ಹಾಕಿದ್ದೇನೆ. ಈ ಹಾಡನ್ನು ಒಮ್ಮೆ ಕೇಳಿ ನಂತರ ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ. ನಿಜಕ್ಕೂ ಗುಲ್ಜಾರ್ರಿಗೆ ಈ ಹಾಡಿನ ಸಾಲುಗಳಿಗಾಗಿ, ಮತ್ತು ಭೂಪೇನ್ ಹಜಾರಿಕಾರ ಆ ಕಂಠಕ್ಕೆ ಸಾವಿರ ನಮನಗಳು.
Comments
ಉ: ಗಂಗೆ ನೀ ಏಕೆ ಹರಿಯುತ್ತಿ?
In reply to ಉ: ಗಂಗೆ ನೀ ಏಕೆ ಹರಿಯುತ್ತಿ? by ksraghavendranavada
ಉ: ಗಂಗೆ ನೀ ಏಕೆ ಹರಿಯುತ್ತಿ?
ಉ: ಗಂಗೆ ನೀ ಏಕೆ ಹರಿಯುತ್ತಿ?
In reply to ಉ: ಗಂಗೆ ನೀ ಏಕೆ ಹರಿಯುತ್ತಿ? by drmulgund
ಉ: ಗಂಗೆ ನೀ ಏಕೆ ಹರಿಯುತ್ತಿ?
In reply to ಉ: ಗಂಗೆ ನೀ ಏಕೆ ಹರಿಯುತ್ತಿ? by karthi
ಉ: ಗಂಗೆ ನೀ ಏಕೆ ಹರಿಯುತ್ತಿ?
In reply to ಉ: ಗಂಗೆ ನೀ ಏಕೆ ಹರಿಯುತ್ತಿ? by drmulgund
ಉ: ಗಂಗೆ ನೀ ಏಕೆ ಹರಿಯುತ್ತಿ?