ಪಾನಿ ಪುರಿ ಮಾಡಲು ನಾನು ಕಂಡುಕೊಂಡ ವಿಧಾನ!

ಪಾನಿ ಪುರಿ ಮಾಡಲು ನಾನು ಕಂಡುಕೊಂಡ ವಿಧಾನ!

ಚಿತ್ರ ಕೃಪೆ : ರಾಮಕೃಷ್ಣ ರೆಡ್ಡಿ

 

ಬೇಕಾಗುವ ಸಾಮನು:
ಬೆಲ್ಲ, ಹುಣಸೆ, ಜೀರಿಗೆ, ಜಲಜೀರ ಪುಡಿ, ಬೆಳ್ಳುಳ್ಳಿ, ಹಸಿರು ಮೆಣಸು, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಲಿಂಬೆ, ಉಪ್ಪು, ಕಾರೆಟ್, ನೀರುಳ್ಳಿ, ಆಲೂ ಗೆಡ್ಡೆ, ಬಟಾಣಿ, ಅಂಗಡಿಯಿಂದ ತಂದ ಪೂರಿ.

೧. ಸ್ವೀಟ್ ಮಾಡುವುದು ಹೇಗೆ?
    ೧ ಕಪ್ ಬೆಲ್ಲ ಹಾಗು ೧/೨ ಕಪ್ ಹುಣಸೆ,ಎರಡನ್ನು ಸೇರಿಸಿ, ತಕ್ಕ ಮಟ್ಟಿಗೆ ನೀರು ಹಾಕಿ ಕುದಿಸುವುದು.  
೨. ಪಾನಿ ಮಾಡುವುದು ಹೇಗೆ?
    ೧ ೧/೨ ಚಮಚ ಜಲಜೀರ ಪುಡಿ( ಮನೆಯಲ್ಲಿ ತಯರಿಸಿದ್ದಾದರೆ ಉತ್ತಮ)
    ೧ ಚಮಚ ಜೀರಿಗೆ
    ೪ ಹಸಿರು ಮೆಣಸು
    ೧ ಕಪ್ ಕೊತ್ತಂಬರಿ ಸೊಪ್ಪು
    ೫ ಬೆಳ್ಳುಳ್ಳಿ
    ೧ ಚಮಚ ನಿಂಬೆ ರಸ
    ೧/೨ ಚಮಚ ಕಾಳು ಮೆಣಸು
    ಉಪ್ಪು ರುಚಿಗೆ ತಕ್ಕಷ್ಟು.
ಈ ಮೇಲಿನವುಗಳನ್ನು mixerನಲ್ಲಿ ತಿರುವಿ, ೭-೮ ಕಪ್ ನೀರು ಸೇರಿಸಿ, ಬಡಿಸುವ ೩ ಗಂಟೆ ಮುಂಚಿತವಾಗಿ ತಯಾರಿಸುವುದು.
೩. ೨ ದೊಡ್ಡ ಗಾತ್ರದ ಆಲೂ ಗೆಡ್ಡೆ ಹಾಗು ೧ ಕಪ್ ಬಟಾಣಿ - ಇವುಗಳನ್ನು cookerನಲ್ಲಿ ಬೇಯಿಸುವುದು.
೪. ೨ ಈರುಳ್ಳಿ, ೨ ಕ್ಯಾರೆಟ್(ತುರಿಯಬೇಕು) , ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಕೊರೆಯಬೇಕು.

{ಇಬ್ಬರಿಗೆ ಸಾಕಾಗುವಷ್ಟು}
ಈ ಮೇಲಿನವುಗಳನ್ನು  ರೆಡಿ ಮಾಡಿಟ್ಟುಕೊಳ್ಳಿ. ಆನಂತರ, ಪೂರಿಯಲ್ಲಿ ಇವುಗಳನ್ನು ಒಂದೊಂದಾಗಿ stuff ಮಾಡಿ, ಸ್ವೀಟ್ ಹಾಗು ಪಾನಿ ಜೊತೆ ಬಡಿಸಿ.  






Rating
No votes yet

Comments