ನಮ್ಮ ನಿಜವಾದ ಶತೃ ಯಾರು?

ನಮ್ಮ ನಿಜವಾದ ಶತೃ ಯಾರು?

Comments

ಬರಹ

ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ.

ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ. ಅಧಿಕಾರದಲ್ಲಿದ್ದಾಗ ತಾವೇ ಶುರು ಮಾಡಿದ ಕಾರ್ಯವನ್ನು ವಿರೋಧಿಸಲು ಸಾಕಷ್ಟು ಒದ್ದಾಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರ ಮಾತುಗಳು ಕೇವಲ ವಿರೋಧ ಪಕ್ಷದ ದುರ್ಬಲ ಅನಿಸಿಕೆಗಳಾಗಿ ಕಂಡು ಬರುತ್ತಿದೆ. ಮತ್ತೆ, ಅವರ ಮಾತುಗಳನ್ನು ಯಾರೂ ಹೆಚ್ಚು ಗಂಭೀರವಾಗಿ ಕೂಡ ತೆಗೆದುಕೊಳ್ಳುತ್ತಿಲ್ಲ. ನನಗೆ ಅನ್ನಿಸುವ ಹಾಗೆ, ಬಿಜೆಪಿಯ ಉದ್ದೇಶ UPA ಮತ್ತು ಎಡರಂಗಗಳ ಮಧ್ಯೆ ಒಡಕನ್ನುಂಟು ಮಾಡುವುದೇ ಆಗಿದೆ.

ಆದರೆ ವಿರೋಧದ ಮುಂಚೂಣಿಯಲ್ಲಿರುವ ಎಡರಂಗ ಈ ವಿಷಯವನ್ನು ಕೇವಲ ತತ್ವ ಬದ್ಧ ಕಾರಣಗಳಿಗಾಗಿ ಮಾತ್ರವಲ್ಲದೆ, UPA ಸರ್ಕಾರವನ್ನು ಹದ್ದಿನಲ್ಲಿಡುವ ತರ್ಕ ಬದ್ಧ ಕಾರಣಗಳೇ ಮುಖ್ಯವಾಗಿದೆ. ದೇಶದ 'ಹಿತ'ದೃಷ್ಟಿಯಿಂದ ಈ ಸಂಧಾನವನ್ನು ವಿರೋಧಿಸುತ್ತಿರುವುದಾಗಿ ಹೇಳುತ್ತಿರುವ ಎಡರಂಗದ ಮಾತು ಹಾಸ್ಯಾಸ್ಪದ ಎನಿಸುತ್ತಿದೆ. ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ.

ಪರಮಾಣು ಸಂಧಾನದ ಬಗ್ಗೆ ಅವರಿಗೆ ಏಕೆ ವಿರೋಧವೆಂದು ಖುದ್ದು ಅವರಿಗೇ ಗೊತ್ತಿಲ್ಲ. ಇದು ಅಮೆರಿಕದೊಡಗಿನ ವ್ಯವಹಾರವಾದ್ಧರಿಂದ ತಮಗೆ ವಿರೋಧಿಸುವ ಜನ್ಮ ಸಿದ್ಧ ಹಕ್ಕನ್ನು ಚಲಾಯಿಸುತ್ತಿದ್ದಾರೆ. ದೇಶದ ಬಗ್ಗೆ ಕಳಕಳಿ ಇರುವವರು, ಏರುತ್ತಿರುವ ನಿತ್ಯ ವಸ್ತುಗಳ ಬೆಲೆಯ ಬಗ್ಗೆ, ಹೆಚ್ಚುತ್ತಿರುವ ಉಗ್ರರ ಚಟುವಟಿಕೆ ಬಗ್ಗೆ, ಬಂಗ್ಲಾ ದೇಶದಿಂದ ನುಸುಳುತ್ತಿರುವ ಮುಸ್ಲಿಮರ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ?

ಬ್ರಿಟಿಶರ ಜೊತೆ ಕೈಗೂಡಿದವರು, ಚೀನಿಯರು ನಮ್ಮ ಮೇಲೆ ದಾಳಿ ಮಾಡಿದಾಗ ನಮ್ಮ ದೇಶದ ಹಿತವನ್ನು ಮಾರಿದವರು ಹೇಗೆ ದೇಶದ ಬಗ್ಗೆ ಯೋಚಿಸಲು ಸಾಧ್ಯ? ನೀವೆ ನೋಡಿ. ಕಾಶ್ಮೀರದಲ್ಲಿ ೧೫ ವರ್ಷದಿಂದ ಉಗ್ರರು ನಮ್ಮ ಮೇಲೆ ಹೋರಾಡುತ್ತಿದ್ದಾರೆ. ಒಮ್ಮೆಯಾದರೂ, ಎಡರಂಗದ ಯಾವುದೇ ಹೈದ ಉಗ್ರರನ್ನು ವಿರೋಧಿಸಿದ್ದಾನ. ಅಲ್ಲಿನ ಹಿಂದೂಗಳ ಮಾರಣ ಹೋಮ ನಡೆಯುತ್ತಿರುವಾಗ, ಅವರ ಬಗ್ಗೆ ಒಬ್ಬ 'ಎಡವಿ' ಕೂಡ ಬಾಯಿ ಬಿಟ್ಟಿದ್ದಾನ?

ವರ್ಷಕ್ಕೆ ಮೂರು ಬಾರಿ ಇವರು ಏಕೆ ಚೀನಾದಲ್ಲಿ ಕೂತು ಕೆಂಪು ಛಾಪಿನ ನಾಯಕರೊಡನೆ ಮಾತನಾಡಿ ಬರುತ್ತಾರೆ?ಮಲೇಶಿಯಾ, ಪಾಕಿಸ್ತಾನ ದೇಶಗಳು ತಮ್ಮ ದೇಶೀಯರಿಗೆ ಗುರುತು ಚೀಟಿ ಕೊಟ್ಟಿರುವಾಗ ನಮ್ಮಲ್ಲಿ ಅದೇ ಮಾಡಲು ಹೊರಟರೆ ಇವರಿಗೆ ಏಕೆ ಉರಿಯುತ್ತದೆ? ಚೀನದಲ್ಲಿ, ರಶಿಯಾದಲ್ಲಿ Uniform Civil Code ಇರುವಾಗ, ನಾವ್ಯಾಕೆ ಇಲ್ಲಿ ಆ ಕಾನೂನನ್ನು ತರಬಾರದು?

ಇದೆಲ್ಲ ಯೋಚಿಸಿದಾಗ ಎಡರಂಗದ ಢೋಂಗಿತನ ಗೊತ್ತಾಗುತ್ತದೆ? ಇವರಿಗೆ ಯಾವ ಪ್ರಜಾಪ್ರಭುತ್ವ ಇರುವ ದೇಶದಲ್ಲೂ ಬಹುಸಂಖ್ಯಾತ ಜನರ ಯಾವುದೂ ಸರಿ ಹೋಗಲ್ಲ. ಕಾರಣ? ಬಹುಸಂಖ್ಯಾತರಿಂದ ಇವರ ಬೇಳೆ ಬೇಯುವುದಿಲ್ಲ. ಅಲ್ಲಿ ಬಹುಸಂಖ್ಯಾತರು ಪ್ರಜಾಪ್ರಭುತ್ವವನ್ನು ನಂಬಿ ನಡೆಸುತ್ತಿರುತ್ತಾರೆ. ಅಲ್ಪಸಂಖ್ಯಾತರನ್ನು ತಮ್ಮ ಕಡೆ ಸೆಳೆಯಲು ಸುಲಭೋಪಾಯ ಅಂದರೆ ಅವರನ್ನು ಬಹುಸಂಖ್ಯಾತರ ವಿರೋಧಿಗಳನ್ನಾಗಿಸುವುದು. ಅದಕ್ಕೆ ಅವರಲ್ಲಿ ಸಂಶಯವನ್ನುಂಟು ಮಾಡುವುದು. ಅದಕ್ಕೆ ಬೇಕಾದ ಕಿಡಿ ಹತ್ತಿಸಲು ಮೊದಲು ಅವರನ್ನು ಹೆದರಿಸುವುದು-'ನಿಮ್ಮ ಗುಂಪು ಅಪಾಯದ ಸ್ಥಿತಿಯಲ್ಲಿದೆ; ಇನ್ನೇನು ಬಹುಸಂಖ್ಯಾತರು ಬಂದು ನಿಮ್ಮನ್ನು ಮುಗಿಸುತ್ತಾರೆ'. ಯಾವಾಗ ಕಿಡಿ ಹತ್ತುವುದೋ ಆಮೇಲೆ ತುಪ್ಪ ಹಾಕುವುದು; 'ಬಹುಸಂಖ್ಯಾತರು ಏನು ಮಾಡಿದರೂ ವಿರೋಧಿಸಿ; ನಿಮ್ಮ ಹಿಂದೆ ನಾವಿದ್ದೇವೆ'.

ಸಹಜವಾಗಿ ಇದು ಅಲ್ಪಸಂಖ್ಯಾತರನ್ನು ಇನ್ನಷ್ಟು ಹುರುದುಂಬಿಸುತ್ತದೆ. ಅವರ ಅಪನಂಬಿಕೆಗೆ 'ಎಡವಿ'ಗಳು ಸರಿಯಾಗಿ ಗಾಳಿ ಹಾಕುತ್ತ ಹೋಗುತ್ತಾರೆ.

ಆಮೆರಿಕದ ಈ ಸಂಧಾನವನ್ನು ವಿರೋಧಿಸುತ್ತಿರುವುದು, ಎಡವಿಗಳ ಕಾರ್ಯಕ್ರಮದ ಅನುಸಾರವಾಗಿಯೇ! ಹೇಗೂ ಅಮೆರಿಕನ್ನರು ಇರಾಕನ್ನು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ; ಅದನ್ನು ಧರ್ಮ ವಿರೋಧಿ ಕಾರ್ಯ ಎಂದು ಆಗಲೆ ಪಟ್ಟಿ ಮಾಡಿಯಾಗಿದೆ; ಭಾರತದಂತಹ ದೇಶದ ಅಲ್ಪಸಂಖ್ಯಾತರನ್ನು ಮತ್ತಷ್ಟು ಎತ್ತಿಕಟ್ಟುವುದಕ್ಕೆ ಈ ಪರಮಾಣು ಸಂಧಾನ ಅನುಕೂಲವಾಗಿದೆ. ಅಲ್ಪಸಂಖ್ಯಾತರಿಗೆ ಸರಿಯಾದ ಹೆದರಿಕೆ ತಂದಿದ್ದಾರೆ - 'ಅಮೆರಿಕವನ್ನು ಭಾರತದೊಡನೆ ಬಿಟ್ಟರೆ ಅದು ಅಲ್ಪಸಂಖ್ಯಾತರಿಗೆ ಘಾತಕವಾಗುತ್ತದೆ. ಈಗ ನಾವು ನಿಮ್ಮ ಪರವಾಗಿ ವಿರೋಧಿಸುತ್ತೇವೆ. ನೀವು ನಿಮ್ಮ ಜನರ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ಕೊಡಿ; ಸರ್ಕಾರ ಮುಂಬರುವ ಚುನಾವಣೆಗೋಸ್ಕರ ನಿಮ್ಮ ಮಾತು ಕೇಳುತ್ತಾರೆ'.

ಈ ಚಿತಾವಣಿ ಕೆಲಸ ಮಾಡಿದೆ. ಸರ್ಕಾರ ಸಂಧಾನವನ್ನು ಹಿಂದಕ್ಕಿಟ್ಟಿದೆ. ಮನಮೋಹನ ಸಿಂಹರಂತಹ ಪ್ರಧಾನಿ ಕೂಡ ಇವರ ಬಗ್ಗು ಬಡಿತಕ್ಕೆ ಶರಣಾಗಿದ್ದಾರೆ. ದೇಶದ ಪ್ರತಿಯೊಬ್ಬ ಪತ್ರಿಕೆಯೂ ಈ ವಿರೋಧವನ್ನು ಟೀಕಿಸಿದೆ. ಜನ ಸಾಮಾನ್ಯರಿಗೆ ಈ ಸಂಧಾನ ಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ಪರಮಾಣು ಇಂಧನ ನಮ್ಮ ದೇಶಕ್ಕೆ ಅತ್ಯಗತ್ಯ ಎಂದು ಎಲ್ಲರಿಗೂ ಗೊತ್ತಿದೆ.

ಇಂಥಹ ಸಂಧರ್ಭದಲ್ಲಿ ನನ್ನ ಅನಿಸಿಕೆ ಸರಿಯೋ ತಪ್ಪೋ ಹೇಗೆ ನೀವೇ ಹೇಳಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet