ರಂಗಸ್ವಾಮಿ 'ಸಾಮಿ'

ರಂಗಸ್ವಾಮಿ 'ಸಾಮಿ'

ಆಸೀತ್ ಪುರಾ ಬೆಂಗಳೂರು ಮಹಾನಗರೇ ರಂಗಸ್ವಾಮಿ ನಾಮ ಪುಂಡಪ್ರಚಂಡ:


ರಂಗಸ್ವಾಮಿ ಅಲಯಾಸ್ ರಂಗ ಅಲಯಾಸ್ ಸ್ಪಾಟ್ ರಂಗ ಒಬ್ಬ ಸು'ಸ್ಲಂ'ಸ್ಕೃತ ಹುಡುಗ, ಇಡೀ area ಬೆಚ್ಚಿ ಬೀಳುವ ಮಚ್ಚು ಹುಡುಗ.ಇವನ ಕಥೆ ಹೇಳ್ತಾಹೊದ್ರೆ too ಮಚ್ಚು  ಆಗತ್ತೆ ಅಂತ ಒಂದು episode ಮಾತ್ರ ಹೇಳ್ತೀನಿ.

 

ಇತ್ತೀಚಿನ ದಿನಗಳಲ್ಲಿ ಬರ್ತಿರೋ ಮಚ್ಚು ಲಾಂಗು ಕನ್ನಡ ಚಿತ್ರಗಳಿಗೆ ಇವನು SME (subject matter expert ).ರಿಯಲ್ ಎಸ್ಟೇಟ್ , ಕಳ್ಳದಂಧೆ ನಲ್ಲಿ ದುಡ್ಡು ಮಾಡಿ, ಹೆಸರು ಮಾಡೋಕ್ಕೊಸ್ಕರ ಕನ್ನಡ ಸಿನಿಮಾ produce ಮಾಡ್ತಿರೋ ಫಿಲ್ಮ್ producers ಗಳಿಗೆ ಇವನ ಸಲಹೆ ಅತ್ಯಗತ್ಯ , ಮಚ್ಚು ಹೇಗೆ ಬೀಸೋದು , ಪೆಟ್ರೋಲ್ ಬಾಂಬ್ ಹೇಗೆ ಮಾಡೋದು ಎಲ್ಲ ನೈಜ ವಾಗಿ ಮೂಡಲು ಇವನ ಸಲಹೆ ಬೇಕೇಬೇಕು.


ಒಂದು ಸಲಿ ಎಲೆಕ್ಷನ್ ಕಾರ್ಡ್ ಫೋಟೋ session ನಲ್ಲಿ ಕ್ಯಾಮೆರಾ ಮುಂದೆ ಬಂದಾಗ "ಸರ್ ಸ್ಲೇಟ್ ಇಲ್ವಾ ? " ಅಂತ ಕೇಳಿದ್ದುಂಟು. ಲೈಫ್ history ನಲ್ಲಿ ಸ್ಲೇಟ್ ಇಲ್ದೆ ಫೋಟೋ ತೆಗಿಸ್ಕೊಂಡಿದ್ದು ತುಂಬಾ ಕಡಿಮೆ , ಕ್ಯಾಮೆರಾ ಮುಂದೆ ಇದ್ದರೆ ಸಾಕು ಎರಡು ಕೈಗಳು ಎದೆ ತನಕ ಹೋಗ್ತಿತ್ತು.

ಪ್ರತಿ ತಿಂಗಳು ಪೋಲಿಸ್ ಸ್ಟೇಷನ್ನಲ್ಲಿ ಇವನ ವಿಚಾರಣೆ ಇದ್ದೇ ಇರ್ತಿತ್ತು. ಇದರಿಂದ ತುಂಬಾ ಬೇಸತ್ತ ರಂಗ ಪೋಲಿಸ್ ರಿಂದ ಸ್ವಲ್ಪ ದಿನ ತಪ್ಪಿಸ್ಕೊಂದಿರೋಕ್ಕೆ ಒಂದು idea ಕೊಡು ಅಂತ ಇನ್ನೊಬ್ಬ ಪಂಟರ್ ಆಗಿದ್ದ ಡಿಂಗ್ ಚಿಕ್  ಗೋಯಿಂದನ ಕೇಳ್ದ.

ರಂಗ: ಮಚ್ಚಿ ! ಮಾಮಾಗಳಿಂದ ಪುಲ್ಲು ಪ್ರಾಬ್ಲಮ್ ಸ್ವಲ್ಪ ದಿನ ಎಂಗಾದರೋ ಮಾಡಿ escape  ಆಗ್ಬೇಕು , ಒಂದು idea ಕೊಡು.
ಗೋಯಿಂದ: ಮಗ ! ಯಾಕೆ ಇಸ್ಷ್ಟೊಂದು ಪೀಲಿ೦ಗು, ಏನ್ ಯೋಚನೆ ಮಾಡಬೇಡ , ನನ್ತಾವ ಒಳ್ಳೆ ಐಡಿಯಾ  ಐತೆ. ಇಸ್ಟೊಂದು

                 ದಿನ ಬೇಕ್ಕಿತ್ತ  ಮಗ.
ರಂಗ : ಎಲ್ಲೋ ಮಚ್ಚಿ !  ಲೈಪು ಪುಲ್ ಅಂದರ್ ಅಲ್ವಾ , ನ%$#@$%  ಟೈಮೇ ಇಲ್ಲ ಇವೆಲ್ಲ ಯೋಚನೆ ಮಾಡೋಕ್ಕೆ, ಏನ್

          ಐಡಿಯಾ ಮಚ್ಚಿ ಅದು.
ಗೋಯಿಂದ: ಮಗ! ಡಿಸೆಂಬರ್ ಸೀಸನ್ ಅಲ್ವ ಈಗ,  ನಡಿ ಓಗಿ ಮಾಲೆ ಹಾಕ್ಕೊಂಡುಬಿಡೋಣ, ಮಾಲೆ ಹಕ್ದವರನ್ನ ಮಾಮಾಗಳು

                 ಮುಟ್ಟಕಿಲ್ಲ, ಪುಲ್ ಜನ ಮರ್ಯಾದೆ ಕೊಡ್ತಾರೆ ಮಗ.
ರಂಗ: ಹೌದಾ ! ಮಚ್ಚಿ.
ಗೋಯಿಂದ: ಬೆಟ್ಟಕ್ಕೆ ಹೋಗೋಕ್ಕೆ ಏನಿಲ್ಲ ಅಂದು 30 ದಿನ ಬೇಕು , ಆಊರು ಇಊರು ಅಂತ ಸುತ್ತಾಡಕೊಂಡುಬರಬಹುದು,

                ನಮ್ಮ ಒಂಟೆ ಸೀನ , ಚಪ್ಪರ್ ನಾಗ ಎಲ್ಲ ಒಯಿತವ್ರೆ, ಇನ್ನಾ ಸೀಟು ಐತೆ ಅಂತ ಹೇಳ್ತಿದ್ರು.
ರಂಗ:ಎಷ್ಟು ಐತಾದೆ ಮಚ್ಚಿ !
ಗೋಯಿಂದ: Rs.7000 , ಏನು ಯೆದ್ರುಕೊಬೇಡ. ಸೇಟು ಅವನಲ್ಲ ನ@#$%^ ಒಂದು ಅವಾಜ್ ಬಿಟ್ರೆ ಸಾಕು ದುಡ್ಡು ಕೊಡ್ತಾನೆ,
               ಇಲ್ದೆದ್ರೆ ಮಾಲೆ ಹಾಕೋಕ್ಕೆ ಮುಂಚೆ ನಮ್ಮ ಏರಿಯ ಸಾಪ್ಟ್ ವರ್ ಹುಡುಗ್ರುಗೆ   ಎಲ್ಡು ಬೀಸಿ ದುಡ್ಡು ಎತ್ತಣ , ಮಾಲೆ

               ಆಕಿದ್ಮೇಲೆ ಅವೆಲ್ಲ ಮಾಡೋಅಂಗೆ ಇಲ್ಲ, ಮಗ !

ಇಬ್ರು ಮನೆ ಹತ್ರ ಇದ್ದ ಪೆಂಡಾಲ್ ಕಡೇ ಹೋದರು.ನಿಷ್ಠೆಯಿಂದ ಪೂಜೆ ಮಾಡುತ್ತಿದ್ದ ವಯಸ್ಸಾದ ತಮಿಳು ಮಾತನಾಡುವ ವ್ಯಕ್ತಿ ಇದ್ದರು, ಎಲ್ಲರು ಅವರನ್ನು 'ಗುರು ಸಾಮಿ ' ಎಂದು ಸಂಭೋದಿಸುತ್ತಿದ್ದರು.ಅಲ್ಲೇ ಕೂತ್ತಿದ್ದ ಚಪ್ಪರ್ ನಾಗ, ಇಬ್ಬರನ್ನು ನೋಡಿ ಗುರು ಸಾಮಿ ಗೆ ಪರಿಚಯ ಮಾಡಿಸಿದನು. ಪಾಪ ಗುರುಸಾಮಿ ನಾಗ,ರಂಗ ಹಾಗು ಗೊಯಿಂದರನ್ನು ಸಭ್ಯರೆಂದು ತಿಳಿದಿದ್ದರೂ.

ಒಂದು ಒಳ್ಳೆಯ ಸಮಯ ನೋಡಿ ಗೋಯಿಂದ ಮತ್ತು ರಂಗ ನಿಗೆ ಮಾಲೆ ಹಾಕಿದರು.ನಂತರ ವ್ರತದ ನಿಯಮಾವಳಿಗಳನ್ನು ತಿಳಿಸಿದರು.

ಗುರು ಸಾಮಿ: ನೋಡಿ ಚಾಮಿ !  ಈಗ ವ೦ದು ನೀವಿಬ್ಬರು ಚಾಮಿಗಳು, ನೀನು ವ೦ದು  ಯೆಲ್ಲಾರುಕ್ಕು ಚಾಮಿ ಅಂತ ಕೂಪುಡ್ನು,

                  ಬೆಳಕೆ ಎದ್ದು, ತನ್ನಿರಲ್ಲೇ ಚಾನ ಮಾಡ್ಬೇಕು, ಚಾಮಿ ಅಂತ ಎಲ್ತಾ ಇರ್ಬೇಕು , ಬೀಡಿ, ಸಿಗರೇಟ್ , ಪಾನ್ ಎಣ್ಣೆ ಎಲ್ಲ

                  ಪನ್ನು ಕೂಡಾದು. ಕಾಲಗೆ ಸಪ್ಲಿ ಆಕ್ಬಾರ್ದು.ಹೆಂಗಸಿರು   ಜೊತೆ  ಪೆಸುಕೊಡಾದ್. ಆಡುಕೆ ನೀಂಗ್ಅಲೆ ಪನ್ನುನು.


ರಂಗ: ನ-@#$%^ ಇಸ್ಟೆಲ್ಲಾ ಮಾಡಬೇಕ ಸಾಮಿ.
ಗುರು ಸಾಮಿ: ಕೆಟ್ಟು ಮಾತು ಪೆಸುಕೊಡಾದ್.
ರಂಗ: ಸರಿ ಸಾಮಿ


 ಬಹಳ ಕಷ್ಟವಾದ ವ್ರತ ! ರಂಗ ತುಂಬಾ ಒದ್ದಾಡ್ತಾ ಇದ್ದ .ದೇವಸ್ತಾನಕ್ಕೆ ಹೋದ್ರೆ ಸಾಕು , ಎಲ್ಲಾ ಹೆಣ್ಣು ಮಕ್ಳು ಇವನ ಕಾಲ್ಗೆ ಡ್ರೈವ್ ಹೊಡಿತಾಇದ್ರು , ಅದೇನು ಪಾಪ ಅವ್ರು ಮಾಡಿದ್ರೋ , ಇವನು ಏನ್ ಪುಣ್ಯ ಮಾಡಿದ್ನೋ ದೇವರೇ ಬಲ್ಲ. ಮನಸಿನಲ್ಲಿ ಒಂಥರಾ ಖುಷಿ ಪಡ್ತಿದ್ದ. ಹೀಗೆ ಒಮ್ಮೆ ಹೆಡ್ ಕಾನ್ಸ್ಟೇಬಲ್ ಹನುಮಪ್ಪ ಸಿಕ್ಕಿದ.


ರಂಗ: ನಮಸ್ಕಾರ ಸಾಮಿ !
ಹನುಮಪ್ಪ: ಓಓ...ಏನೋ ಬೋ#$%#@ ಮಾಲೆ ಹಾಕೊಂಡಿದ್ಯಾ . ಡಿಸೆಂಬರ್ ನಿಂದ ಜನುವರಿ ಗಂಟಾ ನಮಗೆ ಸ್ವಲ್ಪ ಕೆಲಸ

               ಕಮ್ಮಿ , ಎಲ್ಲ ನಿಮ್ಮಂತಹ  ನನ್ ಮಕ್ಳು ಕೂಡ  ಬೆಟ್ಟಕ್ಕೆ ಒಯ್ತಾರಲ್ಲ, ಒಂತರ ಒಳ್ಳೇದೆ. ನೀವುಗಳೇ ಜ್ಯಾಸ್ತಿ ಆಗಿ ಪಾಪ

              ನಿಷ್ಠೆ ಯಿಂದ ಹೊಗೊವ್ರಿಗೂ ಕೆಟ್ಟಹೆಸರು.
ರಂಗ: ಸಾಮಿ ! ಸಾಮಿಗಳಿಗೆ ಹಂಗೆಲ್ಲಾ ಬೈಬಾರ್ದು ಸಾಮಿ ( ಅಂತ ಹೇಳಿ ಗೋಡೆ ಹಿಂದೆ ಅವಿತುಕೊಳ್ಳಲು ಹೋಗ್ತಾನೆ )
ಹನುಮಪ್ಪ: ಯಾಕೋ ! ಏನಾಯ್ತು ?
ರಂಗ: ಸಾಮಿ ! ನಮ್ ಡೋವ್ ಸಾಮಿ ಬರ್ತಿದೆ, ನಿಮ್ ಜ್ಯೋತೆ ನನ್ನ ನೋಡಿದ್ರೆ ನನ್ ಬಗ್ಗೆ ಏನೋ ತಿಳ್ಕೊಂಡ್ ಬಿಡ್ತಾಳೆ.
ಹನುಮಪ್ಪ:ಅದ್ಸರಿ ! ಎಲ್ಲೋ ತೆಂಗಿನ ಸಸಿ ?
ರಂಗ: ಸಾಮಿ ತೋಟಕ್ಕೆ ಹೋಗೋಣ ಅಂತ ಅನ್ನಕೊಂಡಿದ್ದೆ , ಮಾಲೆ ಹಾಕ್ಕೊಂಡ್ ನಲ್ಲಾ ಕದಿಯೊಂಗಇಲ್ಲ ಸಾಮಿ ! ಮಾಲೆ
        ತೆಗಿದ್ಮೇಲೆ ತಂದು ಕೊಡ್ತೀನಿ.

ಹನುಮಪ್ಪ: ನೀನು ಇವತ್ತು ಸಿಕ್ಕಿದ್ರೆ ಇನ್ ಯಾವ್ದಾದ್ರೋ ಕೇಸ್ ಇದ್ದರೆ ಟೇಶೇನ್ ಕಡೇ ಬರ್ತೀಯ ? ಬರೋದೇನು ನಾನೇ ನಿನ್

               ಹುಡ್ಕೊಂಡು ಬರಬೇಕು.
ರಂಗ: ಇಲ್ಲ ಸಾಮಿ ಮಾಲೆ ಹಾಕಿದಮೇಲೆ ಸುಳ್ಳು ಹೇಳಕ್ಕಿಲ್ಲ, ಹೆಂಗಿದ್ರು ನಿಮ್ಮ ತಾಯಿ ಸಾಮಿ ನಿಮ್ಮ ನಾಯಿ ಸಾಮಿನ ವಾಕಿಂಗ್

         ಕರ್ಕೊಂಡು ನಮ್ಮ ಮನೆ ಮುಂದೆ  ಹೋಗೋದು, ಅವ್ರಿಗೆ ಕೊಡ್ತೀನಿ.

ಹೀಗೆ ದಿನಗಳು ಕಳೆದು ಬೆಟ್ಟಕ್ಕೆ ಹೋಗೋ ಟೈಮ್ ಬಂತು, ಗುರು ಸಾಮಿ ಎಲ್ಲಾರಿಗು ಪೆಂಡಾಲ್ ನಲ್ಲೆ ರಾತ್ರೆ ಉಳಿದು ಬೆಳಿಗ್ಗೆ

ಹೊರಡೋಕ್ಕೆರೆಡಿಯಾಗಿರಿ ಅಂತ ಹೇಳಿದ್ರು.ಬೆಳಿಗ್ಗೆ ಆಯಿತು ಸುಮಾರು ಭಕ್ತರ ಪಸ್೯  ಮಿಸ್ಸಿಂಗ್ ಆಗಿತ್ತು, ಗುರು ಸಾಮಿದು ಚಿನ್ನದಲ್ಲಿ ಸುತ್ತಿದ್ದ ಮಾಲೆ ಕೂಡ ಮಿಸ್ಸಿಂಗ್ ಆಗಿತ್ತು.ದೇವರ ಹೆಸರು ಕೂಗೋ ಟೈಮ್ ನಲ್ಲಿ ಎಲ್ಲಾ ಬಾಯಿ ಬಡ್ಕೊಂದ್ತಿದ್ರು, ಸ್ವಲ್ಪ ಜ್ಯೋರಾಗೆ ಬಾಯಿ ಬಡ್ಕೊಂಡು ವ್ಯಾನ್ ನಿನ ಡ್ರೈವರ್ ಓಡಿ ಬಂದ.


ಡ್ರೈವರ್: ಸಾಮಿ ! ನನ್ ಗಾಡಿ ಬರೀ ಕಲ್ ಮೇಲೆ ನಿಂತೈತೆ ! ನಾಲ್ಕು ಚಕ್ರ ಮಿಸ್ಸಿಂಗ್ ಸಾಮಿ !

ಅಷ್ಟರಲ್ಲಿ ಪೋಲಿಸ್ ಹನುಮಪ್ಪ ಅಂಡ್ ಟೀಂ ಜೀಪ್ ನಿಂದ ಮೂರು ಸಾಮಿಗಳ್ನ ಕರ್ಕೊಂಡು ಬಂದ್ರು, ಗುರುಸಾಮಿ ಎದ್ರುಗೆ ರಂಗ, ನಾಗ ಅಂಡ್ ಗೋಯಿಂದ ಸೇರಿ ಎಲ್ಲಾ ಮಾಯ ಮಾಡಿರೋ ವಿಷಯ ತಿಳಿಸಿದರು.

ಗುರು ಸಾಮಿ: ಎನ್ನಪ್ಪ ನೀನ್ಗಳು ಯಿಂಗೆಲ್ಲ ಮಾಡ ಬಹುದಾ?
ರಂಗ: ಸಾಮಿ , ಒಂದು ದಿನ ಆದ್ರೆ ಪರವಾಗಿಲ್ಲ ವ್ರತ ಮಾಡೋದು ! 30 40 ದಿನ ಸ್ವಲ್ಪ ಕಷ್ಟ ಸಾಮಿ.
ಗುರು ಸಾಮಿ: ಥೂ ! ಮಾಲೆ ಹಾಕೊಂಡು ಇಪ್ಪಡಿ ಎಲ್ಲಾ ಮಾಡಬಾರದು.
ರಂಗ: ಗೊತ್ತು ಸಾಮಿ ! ನೆನ್ನೆ ರಾತ್ರಿ ಮಾಲೆ ತೆಗೆದೇ ಮಾಡಿದ್ದು ಸಾಮಿ.

ಈ  ಮಾತು ಕೇಳಿದ ಗುರು ಸಾಮಿ ಮಲೆ ಹೋಗೋದು ಬದ್ಲು  ಮೇಲೆ ಹೋಗ್ಬಿಟ್ರು !



Comments