ಸ್ನೇಹ-ಪ್ರೀತಿ

ಸ್ನೇಹ-ಪ್ರೀತಿ

ಕವನ

ಪ್ರೀತಿ ಎಷ್ಟು ಮಧುರ ಎಂದು ಬಣ್ಣಿಸಲಾರೆನು
ಸ್ನೇಹ ಎಷ್ಟು ಒಳಿತು ಎಂದು ಹೇಳಲಾರೆನು
ಚಿನ್ನದಂತ ಸಂಬಂಧವೇ ಈ ಸ್ನೇಹ - ಪ್ರೀತಿಯು
ಒಲವಿನ ಅಕ್ಕರೆಯೇ ಬಾಳಿನ ಗುರುತಿಗೂ ..
ಮಾನಸ ಸರೋವರದ ಸೌಂದರ್ಯ 
ಮನಸಲ್ಲಿ ಕಾಣೆನು
ಚಿಗುರುವ ಎಲೆಗಳ ಗುಣ 
ಮಕ್ಕಳಲ್ಲಿ ನೋಡೆನು
ಕಾಮನಬಿಲ್ಲಿನ ರಂಗು 
ನಿಜಪ್ರೀತಿಯಲ್ಲಿ ತೋರೆನು
ಹೂವಿನ ಸಂಬಂಧ ಸ್ನೇಹವೆಂದು ಹೇಳೆನು
ಕೋಗಿಲೆಯ ಇಂಪಾದ ಕೂಗನ್ನು ವಾದ್ಯವೆಂದು ಕೇಳೆನು
ಮೋಡಗಳ ಮೌನವೇ ಆತ್ಮವೆಂದು ತಿಳಿದೆನು
ಹೊಳೆಯುವ ಚುಕ್ಕಿಗಳೇ ಖುಷಿಯೆಂದು ಆನಂದಿಸಿದೆನು
ಮುಸ್ಸಂಜೆಯ ತಂಪಿಗೆ ತನು ಮನ ನಾಚಿ ಕುಳಿತೆನು

Comments