ಸಂಪದ ಗಾನ
ಸಂಪದ ಗಾನ
ನಲ್ಬೆಳಗಿನೊಳು ಅಖಿಲ ಸಂಪದವನ್ನು ನೆನೆದು |
ಸಂಪದಕ್ಕೊಡೆಯ ಆ ಹರೀಶನ ನೆನೆವುದು |
ಮುಕ್ತ ಸ್ವತಂತ್ರ ತಂತ್ರಾಂಶ ರಹಸ್ಯವ || 2 ಸಲ ||
ಹಂಸಾನನ್ದಿಯೊಳ್ ಹಾಡುವರಿಲ್ಲಿ |
ಸಂಸ್ಕೃತದಲ್ಲಿ ಸುಭಾಷಿತವ ಬರೆದರೂ |
ತಿರುಳ್ಗನ್ನಡದೊಳ್ ತಿಳಿಯಾಗಿಸುವರು |
ಯೂನೀಕ್ ಸುಪ್ರಿಯ ತತ್ತ್ವವಿಚಾರ |
ಯೂನಿಕ್ಸ್-ಲಿನಕ್ಸ್-ಎಕ್ಸ್-ಪಿ ಓಂ ಶಿವ-ಶಂಕರ ನಾದ |
ನಲ್ಬೆಳಗಿನೊಳೀ ಸಂಪದ ಗಾನ |
ಸಂಪದನಾಥ ಹರೀಶನ ಧ್ಯಾನ |
ಆ-ಆ-ಆ-|smoothen & taper |
ಗಿರೀಶರ ಚಿನ್ತನ-ಮಂಥನ-ಚರ್ಚೆ|| 2 ಸಲ ||
ಅಬ್ದುಲ್ ಬರೆವರು ಮರುದ್ವೀಪದ ಗಾಥೆ |
ಕೋಮಲ್ ಕುಮಾರನ ಗೌಡಪ್ಪನ್ ಗೋಳ್ಗುಳು |
ಸಾಟಿಯೇ ಇಲ್ಲದ ನಗೆಗಳ ಹೊನಲ್ಗಳು |
ಕವಿನಾಗರಾಜರ ಹೋರಾಟದ ಕಥನ |
ಕಣ್ಣಿಗೆ ಕಟ್ಟುವ ಜೀವಿತ ಕದನ |
ನಲ್ಬೆಳಗಿನೊಳೀ ಸಂಪದ ಗಾನ |
ಸಂಪದನಾಥ ಹರೀಶನ ಧ್ಯಾನ |
ಆ-ಆ-ಆ-|smoothen & taper |
ಆ(pause) ಸುರೇಶರ ಮನದಾಳದ ಮಾತುಗಳು || 2 ಸಲ ||
ರಾಘವೇಂದ್ರರ ಬೆಟ್ಟದ ತುದಿಗಳ ಪಟಗಳು |
ವೈಭವ-ಸಂಗರ ಅಣ್ಣೆಗನ್ನಡದುಲಿಕೆ |
ಬೆನಕರ ಸಂಸ್ಕೃತ-ಚೆಂಗನ್ನಡ ಭಾಷೆ |
ಕನ್ನಡ ಕಂದರ ರೇಫಾಕ್ಷರಂಗಳ್ |
ಱರಭೇದಂಗಳನ್ನಱುಹುವ ನೆಗೞ್ತೆಗಳ್ |
ನಲ್ಬೆಳಗಿನೊಳೀ ಸಂಪದ ಗಾನ |
ಸಂಪದನಾಥ ಹರೀಶನ ಧ್ಯಾನ |
ಆ-ಆ-ಆ-|smoothen & taper |
ಮಯ್ಸೂರಿನ ಹಕಾರದ ಗೆರೆಯ || 2 ಸಲ ||
ಶಂಕರ ಭಟ್ಟರ ಙಞಣಮ ರಗಳೆಯ|
ಎದುರಿಸಲ್ ಇಲ್ಲಿವೆ ಮಾತಿನ ಮೊನೆಗಳು |
ಅದ ಖಂಡಿಸಲ್ ಇನ್ನೂ ಹಱಿತದ ತುದಿಗಳು |
ಉಳಿದನ್ತೆ ರಾ(sustain)ಜಕೀಯದ ಒಲವು |
ಸಿಎಸ್ಎಲ್ಸಿಯ ಸಂಸ್ಕೃತಿಯಱಿವು |
ನಲ್ಬೆಳಗಿನೊಳೀ ಸಂಪದ ಗಾನ |
ಸಂಪದನಾಥ ಹರೀಶನ ಧ್ಯಾನ |
ಆ-ಆ-ಆ-|smoothen & taper |
ನನ್ದಿಯ ನುಡಿವರು ಒಬ್ಬರಿಗೊಬ್ಬರು || 2 ಸಲ ||
ನನ್ನಿಯ ಮಾಮ ಸುನೀಲನ ದಯೆಯೊಳ್ |
ಬಲು ಹಱಿತದ ಕಮೆಣ್ಟನ್ನೀವರು |
ನಿರ್ವಾಹಕರ ಗಮನವ ಸೆಳೆವರು |
ಇನ್ನೂ ಹಲವಿವೆ ವಿಚಾರದ ಕಡಲ್ಗಳು |
ಬಲು ಚೆನ್ನಿದ್ದರೂ ಎನ್ನ ಕಾಣ್ಕೆಯ ಮೀಱಿದವು|
ನಲ್ಬೆಳಗಿನೊಳೀ ಸಂಪದ ಗಾನ |
ಸಂಪದನಾಥ ಹರೀಶನ ಧ್ಯಾನ |
ಆ-ಆ-ಆ-|smoothen & taper |
Comments
ಉ: ಸಂಪದ ಗಾನ
ಉ: ಸಂಪದ ಗಾನ
ಉ: ಸಂಪದ ಗಾನ
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by ಗಣೇಶ
ಉ: ಸಂಪದ ಗಾನ
ಸಂಪದ ಗಾನೊ ತುಳುಟ್ಟು
In reply to ಸಂಪದ ಗಾನೊ ತುಳುಟ್ಟು by kpbolumbu
ಉ: ಸಂಪದ ಗಾನೊ ತುಳುಟ್ಟು
ಉ: ಸಂಪದ ಗಾನ
In reply to ಉ: ಸಂಪದ ಗಾನ by hamsanandi
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by asuhegde
ಉ: ಸಂಪದ ಗಾನ
ಸಂಪದ ಗಾನ ಮಲೆಯಾಳದಲ್ಲಿ
ಸಂಪದ ಗಾನ ಇಂಗ್ಲೀಷಿನಲ್ಲಿ
ಸಂಪದ ಗಾನ ತಮಿೞಿನಲ್ಲಿ
In reply to ಸಂಪದ ಗಾನ ತಮಿೞಿನಲ್ಲಿ by kpbolumbu
ಉ: ಸಂಪದ ಗಾನ ತಮಿೞಿನಲ್ಲಿ
In reply to ಉ: ಸಂಪದ ಗಾನ ತಮಿೞಿನಲ್ಲಿ by Iynanda Prabhukumar
ಉ: ಸಂಪದ ಗಾನ ತಮಿೞಿನಲ್ಲಿ
ಸಂಪದ ಗಾನ ತೆಲುಗಿನಲ್ಲಿ
ಸಂಪದಿಗ ಮಿತ್ರರ ಗಮನಕ್ಕೆ:
ಉ: ಸಂಪದ ಗಾನ
In reply to ಉ: ಸಂಪದ ಗಾನ by kpbolumbu
ಉ: ಸಂಪದ ಗಾನ
In reply to ಉ: ಸಂಪದ ಗಾನ by kpbolumbu
ಉ: ಸಂಪದ ಗಾನ
In reply to ಉ: ಸಂಪದ ಗಾನ by asuhegde
ಉ: ಸಂಪದ ಗಾನ