ಸತ್ಯದ ಇನ್ನೊಂದು ಮಗ್ಗುಲು
ಭುಗಿಲೇಳದ ಕನಸುಗಳಿಗೆ
ಬಂದೊದಗಿದೆ ಹೊಸ ಮಗ್ಗುಲು
ತನ್ನಷ್ಟಕ್ಕೇ ರೂಪುಗೊಳ್ಳುತ್ತಿದ್ದ
ಕನಸುಗಳಿಗೆ ಸತ್ಯದ ನಗ್ನ ದರ್ಶನ
ಸುಳ್ಳಾದರೂ ಸಾಕಿತ್ತು
ಹೊನಲಿನಲ್ಲೊಂದು
ಮರಿ ಕೂಸ ಬೆಳೆಸಲು
ಆದರೆ ಮಡಿದಿದ್ದ ದೇಹಗಳಿಗೀಗ
ತಾನಿನ್ನೂ ಅಸ್ತಿತ್ವದಲ್ಲಿರುವ ಬಯಕೆ
ಉರಿಸುತ್ತಿದೆ ಲಾವಾರಸ ಮನದ ಕಡಲನ್ನು
ಕಣ್ಣಲ್ಲಿ ಸುರಿಯುತ್ತಿದೆ ಕಣ್ಣೀರು
ಬೇಯುತ್ತಿದೆ ಮನದೊಳಗೆ ಕಾಡ್ಗಿಚ್ಚು
ನಾನೇಕೆ ಆಗಬೇಕಿತ್ತು
ಇದೆಲ್ಲದರ ಮೂಕ ಸಾಕ್ಷಿ
ಅರಗಿಸಲಾಗದ ಸತ್ಯಗಳನ್ನೆಲ್ಲಾ
ಇನ್ನೂ ನೋಡಬೇಕೆ ನನ್ನೆರಡು ಅಕ್ಷಿ
ಸತ್ಯವನರಿತು ಉರಿಯುವ ಜಗದೊಳಗೆ
ನಾನೂ ಉರಿಯುತ್ತಲೇ
ಇವನ್ನೆಲ್ಲಾ
ಅರಗಿಸಿಕೊಳ್ಳಲೇ
ಅದುಮಿಕೊಳ್ಳಲೇ
ರೋದಿಸಲೇ
ಅದರಲ್ಲೇ ಕಳೆದುಹೋಗಲೇ!!!
Rating
Comments
ಉ: ಸತ್ಯದ ಇನ್ನೊಂದು ಮಗ್ಗುಲು
In reply to ಉ: ಸತ್ಯದ ಇನ್ನೊಂದು ಮಗ್ಗುಲು by vani shetty
ಉ: ಸತ್ಯದ ಇನ್ನೊಂದು ಮಗ್ಗುಲು
ಉ: ಸತ್ಯದ ಇನ್ನೊಂದು ಮಗ್ಗುಲು
In reply to ಉ: ಸತ್ಯದ ಇನ್ನೊಂದು ಮಗ್ಗುಲು by ravi kumbar
ಉ: ಸತ್ಯದ ಇನ್ನೊಂದು ಮಗ್ಗುಲು