ದುಡ್ಡು ದುಡ್ಡು ದುಡ್ಡು
ಕವನ
ದುಡ್ಡು ದುಡ್ಡು ದುಡ್ಡು
ದುಡ್ಡಿದ್ದವನೇ ದೊಡ್ಡಪ್ಪ
ಇಲ್ಲವಾದರೆ ನೀ ಬೆಪ್ಪ
ಇದು ಸುತ್ತಲಿನಾ ಎಲ್ಲಕಡೆ
ನಿತ್ಯವು ನಡೆಯುವ ವಾಸ್ಥವತೆ
ಜಣ ಜಣಿಸುವ ಹಣ ನಿನ್ನೊಡನಿದ್ದರೆ
ಮನ್ನಣೆ ಸಿಗುವುದು ಹೋದ ಕಡೆ
ಹೊನ್ನಿಲ್ಲದೆ ಸದ್ಗುಣವೊಂದಿದ್ದರೆ
ಧನಿಕರ ಜಗದಲಿ ನೀನು ಕಡೆ
ಹಣವೆಂಬುದ ನೀ ಗಳಿಸಿದೆಯಾದರೆ
ತೊಳೆವುದು ನಿನ್ನಯ ಎಲ್ಲ ಕೊಳೆ
ನೀನೂ ಜನವೆಂದಾಗುವುದಿದ್ದರೆ
ಧನಗಳಿಸದೆ ಮತ್ತಿಲ್ಲ ಬೆಲೆ
ಯಾತಕೆ ಭಾರತ ಮಾತೆಯು ಇಂದು
ತಾಗಿಸಿಕೊಂಡಳೊಈ ಸೊಗಡು
ಜನರಿಗೆ ಮಣ್ಣಿನ ವಾಸನೆ ತಾಗದು
ಆಗಿಹೆ ನಾನು ಬಲು ಬೆರಗು
- ಸದಾನಂದ
ದುಡ್ಡಿದ್ದವನೇ ದೊಡ್ಡಪ್ಪ
ಇಲ್ಲವಾದರೆ ನೀ ಬೆಪ್ಪ
ಇದು ಸುತ್ತಲಿನಾ ಎಲ್ಲಕಡೆ
ನಿತ್ಯವು ನಡೆಯುವ ವಾಸ್ಥವತೆ
ಜಣ ಜಣಿಸುವ ಹಣ ನಿನ್ನೊಡನಿದ್ದರೆ
ಮನ್ನಣೆ ಸಿಗುವುದು ಹೋದ ಕಡೆ
ಹೊನ್ನಿಲ್ಲದೆ ಸದ್ಗುಣವೊಂದಿದ್ದರೆ
ಧನಿಕರ ಜಗದಲಿ ನೀನು ಕಡೆ
ಹಣವೆಂಬುದ ನೀ ಗಳಿಸಿದೆಯಾದರೆ
ತೊಳೆವುದು ನಿನ್ನಯ ಎಲ್ಲ ಕೊಳೆ
ನೀನೂ ಜನವೆಂದಾಗುವುದಿದ್ದರೆ
ಧನಗಳಿಸದೆ ಮತ್ತಿಲ್ಲ ಬೆಲೆ
ಯಾತಕೆ ಭಾರತ ಮಾತೆಯು ಇಂದು
ತಾಗಿಸಿಕೊಂಡಳೊಈ ಸೊಗಡು
ಜನರಿಗೆ ಮಣ್ಣಿನ ವಾಸನೆ ತಾಗದು
ಆಗಿಹೆ ನಾನು ಬಲು ಬೆರಗು
- ಸದಾನಂದ
Comments
ಉ: ದುಡ್ಡು ದುಡ್ಡು ದುಡ್ಡು
In reply to ಉ: ದುಡ್ಡು ದುಡ್ಡು ದುಡ್ಡು by raghumuliya
ಉ: ದುಡ್ಡು ದುಡ್ಡು ದುಡ್ಡು
ಉ: ದುಡ್ಡು ದುಡ್ಡು ದುಡ್ಡು
In reply to ಉ: ದುಡ್ಡು ದುಡ್ಡು ದುಡ್ಡು by Gonchalu
ಉ: ದುಡ್ಡು ದುಡ್ಡು ದುಡ್ಡು