ನಗುವ ಹಾಗೆ ನಟಿಸಬೇಡ

ನಗುವ ಹಾಗೆ ನಟಿಸಬೇಡ

ಕವನ

ನಗುವ ಹಾಗೆ ನಟಿಸಬೇಡ ಗೆಳತಿ ನೀನು

ನಿನ್ನ ಕಣ್ಣುಗಳು ನಿಜವ ನುಡಿಯುತಿದೆ 

ನಿನ್ನ ನಗುವು ಸುಳ್ಳೆಂದು ಹೇಳುತಿದೆ..

 

ಚಂದ್ರವದನೆ ನಿನಗೆ ಶೋಭೆಯಲ್ಲ ಈ ಹುಸಿನಗು

ಮನಸಿನ ಮೂಲೆಯಲ್ಲಿ ದುಗುಡವ ತುಂಬಿಕೊಂಡು

ಮಂದಹಾಸವ ಬೀರಲು ನೀ ಸೋಲುತಿರುವೆ..

 

ನೂರೆಂಟು ಯೋಚನೆಯ ಮನದಲ್ಲಿ ತುಂಬಿಕೊಂಡು

ನನ್ನೊಡನೆ ಹಂಚಿಕೊಳ್ಳಲು ಆಲೋಚನೆ ಏಕೆ?

ನಿನಗೆ ನೀ ಮೋಸವ ಮಾಡಿಕೊಳ್ಳುವೆ ಏಕೆ ಗೆಳತಿ..

 

ನೀ ನಕ್ಕಾಗ ಅರಳಿದ್ದ ಕಮಲದಂತಿದ್ದ ನಿನ್ನ ನಗುವು

ಒಣಗಿದ ಹೂವಿನಂತಾಗಿದೆ ನಿನ್ನ ಈಗಿನ ನಗುವು

ನಗುವ ಹಾಗೆ ನಟಿಸಬೇಡ ನೀನು ಗೆಳತಿ..

Comments