ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
ಆಗ ತಾನೆ ಅಮೇರಿಕಾಗೆ ಬಂದು ಇಳಿದಿದ್ದೆ, ಹೊಸ ಜಾಗ, ಕಂಪನಿಯಿಂದ ಸ್ವಲ್ಪ ದಿನದ ಮಟ್ಟಿಗೆ ತುರ್ತು ಕೆಲಸ ಎಂದು ಕಳುಹಿಸಿಕೊಟ್ಟಿದ್ದರು. ಮೊದಲಬಾರಿಯಾಗಿದ್ದರಿಂದ ಹಾಗು ವಸತಿ ಸೌಕರ್ಯ ಇಲ್ಲಿ ಬಂದು ನಾವೇ ಹುಡುಕಿಕೊಳ್ಳಬೇಕಾದ್ದರಿಂದ ಕಂಪನಿಯವರಿಗೆ ಹಿಡಿ ಶಾಪ ಹಾಕಿಕೊಂಡೆ ರಿಪೋರ್ಟ್ ಮಾಡಿಕೊಂಡಿದ್ದೆ.
ಹೇಗೋ ಸಾಹಸ ಮಾಡೀ ಊಳಿದುಕೊಳ್ಳಲಿಕ್ಕೆ ತಾತ್ಕಾಲಿಕ ವ್ಯವಸ್ತೆ ಮಾಡಿಕೊಂಡೆ.
ಇಲ್ಲಿನ ತೆಲುಗು ಭಾಷಿಕರ ಸಂಖ್ಯೆ ಕಂಡು ನಿಜಕ್ಕೂ ಆಶ್ಚರ್ಯ ಆಯಿತು ಹೈದರಾಬಾದ್ನಲ್ಲಿ ಇದ್ದ ಅನುಭವ ಆಯಿತು,
ನನಗೆ ಇದ್ದ ಸ್ನೇಹಿತರೆಲ್ಲ ತೆಲುಗಿನವರೇ, ಆಗಾಗ ತೆಲುಗು ಪಿಕ್ಚರ್ ನೋಡುತ್ತಾ ಇದ್ಹದ್ದು ಸ್ವಲ್ಪ ಸಹಾಯಕ್ಕೆ ಬಂತು.
ಅಲ್ಲೆಲ್ಲು ಕನ್ನಡಿಗರ ಸುಳಿವೇ ಇರಲ್ಲಿಲ್ಲ, ಕನ್ನಡ ಪದಗಳನ್ನು ಕೇಳಲು ನನ್ನ ಕೀವಿ ಕಾತರಿಸುತಿತ್ತು.
ಕೆಲಸ ಶುರುವಾಯಿತು, ಕ್ರಮೇಣ ಅಮೇರಿಕಾ ಹಳೆಯದಾಯಿತು, ಸಾವಿರಾರು ಜನ ಕೆಲಸ ಮಾಡುವ ಸ್ಥಳ, ಅನೇಕರ ಪರಿಚಯವಾಯಿತು. ಆದರು ಕನ್ನಡದವರು ಯಾರು ಸಿಗಲೇ ಇಲ್ವಲ್ಲ ಅನ್ನುವ ಬೇಸರವಂತು ಇದ್ದೆ ಇತ್ತು.
ನಾನು ಕುಳಿತುಕೊಳ್ಳುತಿದ್ದ ಪಕ್ಕದ ಬ್ಲಾಕ್ ನಲ್ಲೆ ಒಂದು ಇಂಡಿಯನ್ ಹುಡುಗಿ ಇತ್ತು, ನೋಡಿದ ತಕ್ಷಣ ಸುಂದರಿ ಎಂದು ಅನಿಸುವ ಚೆಲುವು ಅಕೆಯದು, ತಾನಾಯಿತು ತನ್ನ ಕೆಲಸವಾಯಿತು ಅಂತ ತನ್ನ ಪಾಡಿಗೆ ಇರುತಿದ್ದಳು, ಯಾರ ಜೊತೆಗೂ ಮಾತನಾಡಿದ್ದನ್ನು ನೋಡಿರಲಿಲ್ಲ, ನನ್ನ ತೆಲುಗು ಮಿತ್ರರೆಲ್ಲ ತುಂಬಾ "decent" ಹುಡುಗಿ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟಿದ್ದರು.
ಹೀಗೆ ಒಂದು ದಿನ ಎಲ್ಲೋ ಮೂಲೆಯಿಂದ ಕನ್ನಡ ಪದಗಳು ಕಿವಿಗೆ ಬಿದ್ದವು, ನಿಜವಾಗಲು ಕನ್ನಡನೇನ ಅಥವಾ ಜಾಸ್ತಿ ಕನ್ನಡದ ಬಗ್ಗೆ ಯೋಚಿಸುತಿದುದ್ದಕ್ಕೆ ಭ್ರಮೆ ಏನಾದ್ರು ಆಗ್ತಾಯಿದಿಯ ಅಂದುಕೊಂಡು ಶಬ್ದದ ಮೂಲ ಹುಡುಕಿಕೊಂಡು ಹೋದೆ. ಅರೆ ಅದೇ "decent" ಹುಡುಗಿ, ಇವಳು ನಮ್ಮವಳು ನಮ್ಮ ಕನ್ನಡದ ಹುಡುಗಿ !! ತುಂಬಾ ಖುಶಿಯಾಯಿತು.
ಮಾತಾನ್ನಾಡಿಸೋಣ ಅಂದುಕೊಂಡೆ, ನಾನೇನೋ ಕನ್ನಡದವರು ಅಂತ ಮಾತನಾಡಿಸಿ ಆಮೇಲೆ ಆ ಹುಡುಗಿ ಬೇರೆ ಏನೋ ಅಂದುಕೊಂಡು ಯಾಕೆ ಬೇಕು ಸುಮ್ಮನೆ, ಜೊತೆಗೆ ಹುಡುಗಿ ಬೇರೆ ಚೆನ್ನಾಗಿದ್ದಾಳೆ, ಅನ್ಯಾಯವಾಗಿ ಒಂದು ಹುಡುಗಿ ನನ್ನ ಮುಂದೆ "scope" ತಗೊಳ್ಳೋದಕ್ಕೆ ಅವಕಾಶ ಕೊಡಬಾರದು ಅಂದುಕೊಂಡು ( ಕಾಲೇಜ್ ದಿನಗಳಿಂದಲೂ ಪಾಲಿಸಿಕೊಂಡು ಬಂದ ನಿಯಮ !!) ಸುಮ್ಮನಾದೆ.
ಅದರೂ ಅತಿ ಶೀಘ್ರದಲ್ಲೇ ಆ ಹುಡುಗಿಯನ್ನು ಮಾತನಾಡಿಸುವ ಅವಕಾಶ ಸಿಕ್ಕಿತು, ನಾನು ಅಂದುಕೊಂಡ ಹಾಗೆ ಏನು ಆಗಲಿಲ್ಲ, ಆ ಹುಡುಗಿನೂ ಕನ್ನಡದ ಅಭಿಮಾನಿಯಾಗಿದ್ದುದು ನನಗೆ ಸ್ವಲ್ಪ ಸಮಾದಾನವಾಗಿತ್ತು.
ನಿಜಕ್ಕೂ ಆಕೆ ಸುಸಂಸ್ಕೃತ ಹುಡುಗಿ, ವಿದ್ಯೆ,ವಿನಯ,ಸೌ೦ದರ್ಯ,ಐಶ್ವರ್ಯ ಎಲ್ಲವು ಇರುವ, ನೋಡಿದ ತಕ್ಷಣ ಗೌರವ ಮೂಡಿಸುವ ಹುಡುಗಿಯಾಗಿದ್ದಳು.
ನಮ್ಮ ಕನ್ನಡದ ಹೆಣ್ಣು ಮಕ್ಕಳು ಎಲ್ಲಿ ಬಂದ್ರು ಒಳ್ಳೆ ಹೆಸರು ತಕೊಳ್ತಾರಲ್ಲ ಅಂತ ಯೋಚಿಸುತ್ತಿರಬೇಕಾದರೆ ನನಗೆ ಅನಿಸಿದ್ದು ಹೌದಲ್ಲ, ನಮ್ಮ ಕನ್ನಡದ ಹುಡುಗಿಯರು ನಿಜವಾಗಿಯೂ ತೀರಾ ಹದಗೆಟ್ಟಿಲ, ಕಾಲೇಜ್ ನ ದಿನಗಳಿರಬಹುದು ಅಥವಾ ನಮ್ಮ ಹಳೆಯ ಕಂಪನಿಯಲ್ಲಿ ಕೆಲಸ ಮಾಡುತಿದ್ದ ಹುಡುಗಿಯರಿರಬಹುದು ಅಲ್ಲೆಲ್ಲ ಕನ್ನಡದ ಹುಡುಗಿಯರದೇ ಒಂದು ಗುಂಪು ಇರುತಿತ್ತು, ತಮ್ಮ ಪಾಡಿಗೆ ಓದು/ಕೆಲಸ ಮಾಡಿಕೊಂಡು, ಪಾರ್ಕು, ಬೈಕು ಅಂತ ಸುತ್ತದೆ, ನಾರ್ತೀಸ್ ಹುಡುಗಿಯರ ಮುಂದೆ ಮಿಂಚಬೇಕು ಅಂತ ಅಸೆ ಇದ್ದರೂ, ತೀರಾ ಅವರನ್ನ ಕಾಪಿ ಮಾಡದೇ ತಮ್ಮ ಸ್ವಂತಿಕೆಯನ್ನು ಇನ್ನು ಊಳಿಸಿಕೊಂಡಿದ್ದಾರೆ ಅಂತಲೇ ಅನ್ನಬಹುದು.
ಬೇರೆ ಬೇರೆ ರಾಜ್ಯ, ದೇಶ ಸುತ್ತಿ ಹಲವಾರು ತರಹದ ಜನ/ಹುಡುಗಿಯರನ್ನು ನೋಡಿದವರಿಗೆ ಖಂಡಿತ ನಮ್ಮ ಕನ್ನಡದ ಹುಡುಗಿಯರ ಬೆಲೆ ತಿಳಿದಿರುತ್ತದೆ. ಇರುವುದರಲ್ಲೇ ನಮ್ಮ ಕನ್ನಡ ಹುಡುಗಿರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳುವ, ನಯ, ವಿನಯ ಇರುವಂಥಹ ಹಾಗು ಪ್ರಮುಖವಾಗಿ ಗಂಡುಬಿರಿಗಳಲ್ಲ ಅನ್ನುವ ವಿಷಯವೇ ಸ್ವಲ್ಪ ಸಮಾದಾನ ಕೊಡುತ್ತೆ. (ಸ್ವಲ್ಪ ಹೆಚ್ಚು ಕಮ್ಮಿ ಇರಬಹುದು ಅಂತಹವು ಸಿಕ್ಕಾಗ ಅನಿವಾರ್ಯವಾಗಿ ನಮ್ಮ ಕನ್ನಡದ ಹುಡುಗರು ಅಡ್ಜಸ್ಟ್ ಮಾಡಿಕೊಂಡು ಹೋಗೋದನ್ನು ಕಲಿತಿದ್ದಾರೆ !!)
ಸಂಪದದಲ್ಲಿರುವ ಬ್ಯಾಚಲರ್ ಹುಡುಗರಿಗೆ ಹೇಳುವುದೇನೆಂದರೆ, ಎಲ್ಲೇ ಇರಿ, ಏನೇ ಮಾಡುತ್ತಿರಿ, ನಮ್ಮ ಕನ್ನಡದ ಹುಡುಗಿಯರನ್ನೇ (ಧ್ಯೆರ್ಯವಾಗಿ) ಮದುವೆಯಾಗಿರಿ !!!.
ಅಂದ ಹಾಗೆ ಮೇಲೆ ಹೇಳಿದ ಮುದ್ದು ಹುಡುಗಿಗೆ ಮದ್ವೆಯಾಗಿದೇ, ತನ್ನ ಪತಿಯೊಡನೆ ಅಮೆರಿಕಾದಲ್ಲೇ ನೆಲಸಿದ್ದಾರೆ. (ನಾನು ಕನ್ನಡದ ಹುಡುಗಿನೇ ಮದ್ವೆಯಾಗಿ ಅಂದರೆ, ನಮ್ಮ ಹುಡುಗರುಗಳು ಅಮೆರಿಕನ್ನಡ ಹುಡುಗಿ ಅದರೆ ಆಗಬಹುದ ಅಂತ ಕೇಳಬಾರದು ಅಂತ !!!)
Rating
Comments
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by c.hareesha
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by gopaljsr
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by rajgowda
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by manju787
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by rajgowda
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by mpneerkaje
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...
In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by bhaashapriya

In reply to ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು... by malathi shimoga
ಉ: ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...