ನಿನ್ನೆದುರು ನಾನೇನಿಲ್ಲ!

ನಿನ್ನೆದುರು ನಾನೇನಿಲ್ಲ!

ಅಗಾಧ ಬೆಳಕು ಸೂಸುವ ಸೂರ್ಯನಿಗೂ
ಇರುವುದು ಮೋಡದ ಕರಿ ಛಾಯೆ
ಕುಂದದ ಬೆಳಕು
ಕಾಣುವ ಕತ್ತಲು, ಮಾಯೆ!
ಬೆಳಕಿದೋ ಮರೆಯಾಯಿತೆನ್ನುವ
ನೋವಿನಲಿ ಗುಡುಗುವುದು ಬಾನು
ಬೀಸುವುದು ಗಾಳಿ
ಸುರಿಯುವುದು ಮಳೆ
ಹಸಿರಾಗುವುದು ಧರೆ
ಹಸಿರಾಗಿ ಮೊಳೆಯಲು
ಮತ್ತೆ ಬೆಳಗುವನು ರವಿ
ಪಡುವಣ ಕೆಂಪು
ಕರಿ ಕತ್ತಲು
ಬದುಕಿನ ಮುಗಿಯದ ಸ್ತ್ರೋತ
ಕಾಡುವ ಕತ್ತಲೆಯಲ್ಲೂ
ಅರಳುವುದು ಬ್ರಹ್ಮ ಕಮಲ
ನಡೆಯುವುದು ಬೇಟೆ
ಬದುಕು ತೆರೆಯುವ ಮಾರ್ಗ
ನೀ ಕಲಿಸಿಕೊಟ್ಟ ರೀತಿ
ಸಕಲ ಸೃಷ್ಟಿಗೆ
ಪಾಲನೆಗೆ ಲಯಕ್ಕೆ!
ಸೋಲೆಂಬುದಿಲ್ಲ ಗೆಲುವೆಂಬುದಿಲ್ಲ
ನಿನಗೆ ಆಸೆ, ಪ್ರೀತಿ, ನಿಯಮಗಳಿಲ್ಲ
ಮನಸ್ಸಿನ್ನೂ ನಿನ್ನ ಅರಿತಿಲ್ಲ
ಆದರೂ ಮುಗ್ಧ ಮನ ಉಲಿಯುವುದು
ನಿನ್ನೆದುರು ನಾನೇನಿಲ್ಲ!

Rating
No votes yet

Comments