ನೆನಪು- ಮೆಲುಕು

ನೆನಪು- ಮೆಲುಕು

ನೆನಪು- ಮೆಲುಕು

 

ಚಿಟಪಟ ಪಟ ಮಳೆಹನಿ ಪುಟಿದು ಬಾನಿಂದ ಜಾರಿದೆ
ಮನದ ದಡದಲಿ ಪ್ರೀತಿಯಲೆ ಬಡಿದು ನವ ಭಾವ ಜಿನುಗುತಿದೆ
ಕೇಳದ ರಾಗವ ಇಂದು ಮನ ಗುನುಗುನಿಸುತ್ತಿದೆ
ಇಷ್ಟುದಿನ ವಿರದ ಈ ನವ ನೋವು ಇಂದು ಹಿತ ತಂದಿದೆ

ಮೂಡಣದ ಅಂಚಲ್ಲಿ ಮೂಡಿದ ಕಾಮನಬಿಲ್ಲು ನವ ಬಣ್ಣ ತಂದಿದೆ ಕಂಡ ಕನಸಿಗೆ
ಪಡುವಣದಿ ಬಾಗುವ ರವಿಯು ವಾರಿಧಿ ಕೆನ್ನೆಗೆ ಮುತ್ತಿಕ್ಕಿದೆ
ತಣ್ಣನೆಯ ಬೀಸುವ ಗಾಳಿಲಿ ನಿನ್ನ ಮುಂಗುರುಳ ತಳಮಳ ಹೆಚ್ಚಾಗಿದೆ
ಅದ ನೋಡುತ ಸೋತ ನನ್ನೀಮನದ ಕಳವಳ ಅತಿಯಾಗಿದೆ

ಇರುಳಿನ ಪ್ರಭೆ ಶೋಭಿಸಲು ಗೂಡಸೇರಲು ಹೊರಟ ಪಕ್ಷಿಗಳು
ಮರಳಿನ ಆಟ ಮುಗಿಸಿ ಮನೆ ಕಡೆಗೆ ಹೊರಟ ಜೋಡಿ ಹೆಜ್ಜೆಗಳು
ನಿನ್ನೊಂದಿಗಿನ ಆ ವಿಹಾರದ ನೆನಪುಗಳೇ ನನ್ನ ಪ್ರತಿದಿನದ ಮೆಲುಕುಗಳು
ಮರೆಯಾದರು ಮರೆಯಲಾಗದ ಎದೆಯೊಳಗಿನ ಮಧುರ ಪುಳಕಗಳು


 

 

ನಿಮ್ಮ
ಕಾಮತ್ ಕುಂಬ್ಳೆ


Rating
No votes yet

Comments