ಪ್ರಶಾಂತನಗರದಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮ!

ಪ್ರಶಾಂತನಗರದಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮ!

ಆತ್ಮೀಯರೆ!


ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೀವು ದೂರದರ್ಶನದಲ್ಲಿ ನೋಡುತ್ತಿರುತ್ತೀರಿ. ಅಂತಹುದೇ ಕಾರ್ಯಕ್ರಮಗಳನ್ನು ನಾನು ಅಲ್ಲಲ್ಲಿ ಸಾರ್ವಜನಿಕರಿಗೆ ವೈಯುಕ್ತಿಕ ಮಟ್ಟದಲ್ಲಿ ನಡೆಸುತ್ತಿರುತ್ತೇನೆ. ಕಳೆದ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೀಗೆ ಒಂದು ಕಾರ್ಯಕ್ರಮವನ್ನು ಕೈಗಾರಿಕಾ ಒಕ್ಕೂಟದವರ ಸಹಯೋಗದೊಡನೆ ನಡೆಸಿದೆ. ಸುಮಾರು ೧೦೦ ಜನರು ಆಯ್ಕೆಯ ಸುತ್ತಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ನಾಲ್ಕು ತಂಡಗಳು ಆಯ್ಕೆಯಾದವು. ಅವರಿಗೆ ಅಂತಿಮ ಕ್ವಿಜ಼್ ಸ್ಪರ್ಧೆಯನ್ನು ೧೦ ಸುತ್ತುಗಳಲ್ಲಿ ನಡೆಸಿದೆ. ಗೆದ್ದವರಿಗೆ ಬಹುಮಾನಗಳು ಪುಸ್ತಕರೂಪದಲ್ಲಿರುತ್ತವೆ ಎಂಬುದನ್ನು ನಾನು ವಿಶೇಷವಾಗಿ ಹೇಳಬೇಕಾಗಿಲ್ಲ. ಸ್ಪರ್ಧಿಗಳು ಉತ್ತರ ನೀಡದ ಕೆಲವು ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ಕೇಳಿದೆ. ಸರಿ ಉತ್ತರವನ್ನು ನೀಡಿದವರಿಗೆ ಅಲ್ಲಿಯೇ ಒಂದು ಪುಸ್ತಕವನ್ನು ಬಹುಮಾನವಾಗಿ ನೀಡಿದೆ.


 ಇಂತಹುದೇ ಒಂದು ಕಾರ್ಯಕ್ರಮವನ್ನು ಇದೇ ಭಾನುವಾರ ಪ್ರಶಾಂತನಗರದಲ್ಲಿ ಪ್ರಶಾಂತನಗರ ಬಡಾವಣೆ ಕ್ಷೇಮಾಭಿವ್ರುದ್ಧಿ ಸಂಘದವರ ಸಹಯೋಗದಲ್ಲಿ ನಡೆಸಲಿದ್ದೇನೆ. ಇಲ್ಲಿಯೂ ಸಹಾ ಒಂದು ಆಯ್ಕೆಯ ಸುತ್ತು ಇರುತ್ತದೆ. ಪ್ರಶಾಂತನಗರ ಬಡಾವಣೆ ಕ್ಷೇಮಾಭಿವ್ರುದ್ಧಿ ಸಂಘದ ಕಾರ್ಯಕರ್ತರು ಆಯ್ಕೆ ಸುತ್ತನ್ನು ನಡೆಸುವರು. ನಾನು ಸುಮಾರು ಆರು ಗಂಟೆಗೆ ಅಂತಿಮ ಮೌಖಿಕ ಸುತ್ತನ್ನು ನಡೆಸುತ್ತಿದ್ದೇನೆ. ನೀವು ದಯವಿಟ್ಟು ಬನ್ನಿ. ಸ್ಪರ್ಧಿಗಳಾಗಿ ಬಂದರೆ ಸಂತೋಷ. ಕೊನೆಯ ಪಕ್ಷ ಪ್ರೇಕ್ಷರಾಗಿಯಾದರೂ ಬರಬಹುದು. ವಿವರಗಳು ಈ ಕೆಳಕಂಡಂತಿವೆ.


 ದಿನಾಂಕ: ೦೯.೦೧.೧೧


ದಿನ: ಭಾನುವಾರ


ಸಮಯ: ಆಯ್ಕೆಯ ಸುತ್ತು ಸಂಜೆ ೪ ಗಂಟೆ


ಅಂತಿಮ ಮೌಖಿಕ ಸುತ್ತು ಸಂಜೆ ೬ ಗಂಟೆ


ಸ್ಥಳ: ಪ್ರಶಾಂತ ಗಣಪತಿ ದೇವಸ್ಥಾನದ ಮೈದಾನ, ಪ್ರಶಾಂತ ನಗರ, ಬೆಂಗಳೂರು


ಬಹುಮಾನ: ಉತ್ತಮ ಕನ್ನಡ ಪುಸ್ತಕಗಳು.


 ಸಂಘದ ಕಾರ್ಯಕರ್ತರಾದ ಶ್ರೀ ಅಶ್ವತ್ಥನಾರಾಯಣ ಅವರ ದೂರವಾಣಿ ಸಂಖ್ಯೆ: ೯೯೬೪೨ ೯೩೮೨೪. ಹೆಚ್ಚಿನ ವಿವರಗಳಿಗೆ ಅವರನ್ನು ಸಂಪರ್ಕಿಸಬಹುದು.


 


-ಡಾ|ನಾ.ಸೋಮೇಶ್ವರ


 

Comments