ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?
http://sampada.net/blog/asuhegde/24/12/2010/29672
ಮತ್ತು
http://sampada.net/blog/mpneerkaje/07/01/2011/29885
ಈ ಎರಡು ಲೇಖನಗಳು ಪ್ರಸ್ತುತ ಬರಹದ ಹಿನ್ನೆಲೆ.
ಸಂಪದಿಗರಲ್ಲಿ ಯಾರಾದರೂ (ಸ್ವತಹ ಅಥವಾ ಸಂಬಂಧಿಕರು, ಗೆಳೆಯರು, ಪರಿಚಯದವರು ಇತ್ಯಾದಿ) ಆಧುನಿಕ ವೈದ್ಯ ಪಧ್ಧತಿ ಬಿಟ್ಟು ಬೇರೆ ಚಿಕಿತ್ಸಾ ಕ್ರಮಗಳ ಮೊರೆ ಹೋಗಿದ್ದರೆ ಈ ಬರಹಕ್ಕೆ ಪ್ರತಿಕ್ರಿಯಿಸಿ ನಿಮ್ಮ ಅನುಭವ ತಿಳಿಸಿ. ಅದು ಕಹಿ ಅನುಭವ ಆಗಿರಬಹುದು ಅಥವಾ ಸಿಹಿ ಆಗಿರಬಹುದು. ಮತ್ತೆ ರಕ್ತ ಪರೀಕ್ಷೆ, ಮುಂತಾದ ರೋಗ ಪತ್ತೆ ಕಾರ್ಯಗಳನ್ನು ಸದ್ಯಕ್ಕೆ ದೂರವಿಡೋಣ. ರೋಗದ ಚಿಕಿತ್ಸೆಯ ಬಗ್ಗೆ ಮಾತ್ರ ಇಲ್ಲಿ ಚರ್ಚೆ. ಇಲ್ಲಿ ಬದಲಿ ವೈದ್ಯ ಪಧ್ಧತಿ ಎಂದರೆ :
ಆಯುರ್ವೇದ
ಯೋಗ/ಪ್ರಾಣಾಯಾಮ
ಸಿಧ್ಧ/ಯುನಾನಿ/ನಾಟಿ ಮದ್ದು
ಹೋಮಿಯೋಪಥಿ
ರೇಖೀ/ಆಕ್ಯುಪಂಕ್ಚರ್/ಅಥವಾ ಈ ಥರದ್ದು ಇನ್ನಾವುದಾದ್ರು
ಇನ್ನು ಹರಕೆ ಹೊತ್ತು ರೋಗ ಕಮ್ಮಿ ಆಗಿದ್ದು, ಎಂಜಲೆಲೆ ಮೇಲೆ ಉರುಳಿ ರೋಗ ವಾಸಿಯಾಗಿದ್ದು, ಕನಸಿನಲ್ಲಿ ಕಂಡಿದ್ದು ಇವೆಲ್ಲ ಬೇಡ :)
ಮೊದಲು ನನ್ನ ಅನುಭವ :
೧. ಚಿಕ್ಕ ವಯಸ್ಸಿನಲ್ಲೇ, ಅಂದರೆ ಪಿಯುಸಿ ಓದುತ್ತಿದ್ದ ಸಮಯದಲ್ಲಿ "ಅಸಿಡಿಟಿ" ಅನ್ನುವ, ಹೆಚ್ಚಾಗಿ ದೊಡ್ಡವರಿಗೆ ಬರುವ ಈಗ ಯಕಶ್ಚಿತ್ ಅನಿಸುವ, ಆದರೆ ಆ ಸಣ್ಣ ವಯಸ್ಸಿನಲ್ಲಿ ನನ್ನ ಜೀವ ಹಿಂಡಿದ ರೋಗ (?) ವೊಂದು ಅಂಟಿಕೊಂಡಿತ್ತು. ಕಾರಣವೇನೋ ಅರಿಯೆ. ಏನನ್ನೂ ತಿನ್ನಲಾಗದು. ಹಸಿವೆಯೇ ಅಡಗಿಹೋಗಿತ್ತು. ಯಾವ ವೈದ್ಯರ ಬಳಿಗೆ ಹೋದರೂ ಉಪಯೋಗವಾಗಲಿಲ್ಲ. ಮಣಿಪಾಲದಲ್ಲಿ "ದೊಡ್ಡ" ಡಾಕ್ಟರ ಬಳಿ ಹೋಗಿದ್ದಾಯಿತು. ಒಂದೇ ರೋಗಕ್ಕಿರುವ ಎರಡು ಔಷಧಗಳನ್ನು ಜೊತೆ ಜೊತೆಗೇ ತೆಗೆದುಕೊಳ್ಲಲು ಕೊಟ್ಟರು. ಆ ಔಷಧಿಗಳು ಯಾವುವೆಂದು ಈಗಲೂ ನೆನಪಿವೆ, ಅದರ ಬಗ್ಗೆ ಇಲ್ಲಿ ಬೇಡ. ಅವನ್ನು ತಿಂದು ಸ್ವಲ್ಪ ಕಮ್ಮಿ ಆಯಿತು, ಆದರೆ ಒಂದು ತಿಂಗಳೊಳಗಾಗಿ ದೇಹ ಮದ್ದಿಗೆ ಒಗ್ಗಿಕೊಂಡು ಬಿಟ್ಟಿತು. ಮದ್ದು ತಿಂದ ಮೇಲೂ ಅದೇ ಸಮಸ್ಯೆ. ಕೊನೆಗೆ ಪರಿಹಾರ ಸಿಕ್ಕಿದ್ದು ಮನೆಯ ಹತ್ತಿರವೇ ಇರುವ (ವಿಟ್ಲ) ಆಯುರ್ವೇದ ವೈದ್ಯರ ಬಳಿ. ಅವರು ಕೊಟ್ಟ ಗುಳಿಗೆಗಳನ್ನು ಎರಡು ತಿಂಗಳು ಸತತವಾಗಿ ತೆಗೆದುಕೊಂಡ ನಂತರ (ಮತ್ತು ಪಥ್ಯಗಳನ್ನು ಪಾಲಿಸಿದ ನಂತರ) ರೋಗ ನಿಧಾನವಾಗಿ ವಾಸಿಯಾಯಿತು. ಈಗಲೂ ಒಂದೊಂದು ಬಾರಿ ಅದು ಮರುಕಳಿಸುವುದಿದೆ, ಆದರೆ ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ ಆಹಾರ ತಿನ್ನುವುದರ ಮೂಲಕ ಮತ್ತು ಯೋಗ/ಪ್ರಾಣಾಯಾಮ ಮೂಲಕ ಹತೋಟಿಯಲ್ಲಿದೆ.
೨. ಅಮ್ಮನಿಗೆ ಇಳಿ ವಯಸ್ಸಿನಲ್ಲಿ ಗರ್ಭಕೋಶದ ಕಲ್ಲು ಕಾಣಿಸಿಕೊಂಡಿತ್ತು. ಮಣಿಪಾಲದಲ್ಲಿ ಪರೀಕ್ಷೆ ಮಾಡಿಸಿ ಆಪರೇಶನ್ ಮಾಡಿ ತೆಗೆಸಬೇಕೆಂದಿದ್ದರು. ಪುನಹ ಅದೇ ಆಯುರ್ವೇದ ವೈದ್ಯರ ಬಳಿ ಹೋಗಿ ಯಾವುದೋ ಲೇಹ ಕಟ್ಟಿಸಿಕೊಂಡು ಬಂದು ತಿಂದರು. ಕೆಲವು ತಿಂಗಳು ಬಿಟ್ಟು ಪರೀಕ್ಷೆ ಮರು ಪರೀಕ್ಷೆ ಮಾಡಿಸಿದಾಗ ಕಲ್ಲು ಕರಗಿತ್ತು.
Comments
ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?
In reply to ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ? by jokumar
ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?
ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?
In reply to ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ? by raghumuliya
ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?
ಉ: ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?