ಭಾರತದ ಯುವಜನತೆ ಏಕೆ ಹೀಗಿದ್ದಾರೆ?
ಭಾರತದ ಯುವಜನತೆ ಏಕೆ ಹೀಗಿದ್ದಾರೆ?
ಆತ್ರಾಡಿ ಸುರೇಶ್ರವರ ’ವಿವೇಕಾನಂದರೆ ಸ್ಪೂರ್ತಿ ನೀಡಲಿ" ಬ್ಲಾಗ್ ಬರಹದ ಪ್ರತಿಕ್ರಿಯೆಗಳಲ್ಲಿ ಇಂದಿನ ಯುವಜನಾಂಗದ ಮನೋಸ್ಥಿಥಿಯನ್ನು ಕುರಿತು ಕೆಲವು ಚಿಂತನೆಗಳಿವೆ. ವಿವೇಕಾನಂದರು ಅವರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಲಾಗಿದೆ. ನನ್ನ ಮನವು ಹಲವು ಬಾರಿ ಈ ದಿಕ್ಕಿನಲ್ಲಿ ಕುರಿತು ಚಿಂತನೆ ಮಾಡಿದೆ. ಆದರೆ ಇಂದಿನ ಯುವಜನತೆಯು ದಾರಿ ತಪ್ಪಿದಾರೆಯೆ ಅಥವ ತಪ್ಪುತ್ತಿದ್ದಾರೆಯೆ ಎಂದು ನಿರ್ದರಿಸುವುದು ಹೇಗೆ?.
ಒಂದು ವೇಳೆ ಅವರು ಹೋಗುತ್ತಿರುವ ದಾರಿ ಸರಿಯಲ್ಲ ಎನ್ನುವದಾದರೆ ಅದಕ್ಕೆ ಕಾರಣಾರಾರು?
ಮಕ್ಕಳಿಗೆ ಹಾಗು ಯುವಜನತೆಗೆ ಬದುಕಿನಲ್ಲಿ ಯಾವಾಗಲು ಒಂದು ಗುರಿ ಆದರ್ಶ ಇದ್ದೆ ಇರುತ್ತದೆ. ಆದರೆ ಆ ಗುರಿ ಆದರ್ಶವನ್ನು ಅವರ ಮುಂದೆ ಇಡುವ ಜವಾಬ್ದಾರಿ ಸದಾ ಅವರ ಹಿರಿಯರೆನಿಸುವವರ ಮೇಲಿರುತ್ತದೆ.
ನಾವದರೊ ಇಂದಿನ ಯುವಕರನ್ನು ಸದಾ ಸ್ವತಂತ್ರಪೂರ್ವದ ಯುವಜನತೆಯೊಂದಿಗೆ ತುಲನೆ ಮಾಡುತ್ತೇವೆ ಅವರಲ್ಲಿ ಎಷ್ಟು ದೇಶಭಕ್ತಿಯಿತ್ತು ಅವರ ನಡವಳಿಕೆ ಎಷ್ಟು ಸುಸಂಸ್ಕೃತವಾಗಿತ್ತು ಎಂದು ಹಳಿಯುತ್ತೇವೆ. ಆದರೆ ಒಂದು ಕ್ಷಣ ಯೋಚಿಸಿ ಸ್ವಾತಂತ್ರಪೂರ್ವದ ಯುವ ಜನತೆಗೆ ಅಂದಿನ ಹಿರಿಯರು ಎಂತಹ ಸಮಾಜ ಒದಗಿಸಿದ್ದರು. ಆ ಯುವಕರ ಮುಂದಿದ್ದ ಆದರ್ಶ ಪುರುಷರಾದರು ಯಾರು ನೆನಪಿಸಿಕೊಳ್ಳಿ ತಿಲಕ್, ಲಾಲ ಲಜಪತ್ ರಾಯ್, ಸುಭಾಸ್ ಚಂದ್ರ ಬೋಸ್, ವಲ್ಲಬಾಯ್ ಪಟೇಲ್ , ಲಾಲ್ ಬಹುದ್ದುರ್ ಶಾಸ್ತ್ರಿ , ಗಾಂದಿ, ನೆಹರು .. ಹೀಗೆ ಸಾಗುವ ಒಂದೊಂದು ಹೆಸರು ಸ್ಪೂರ್ತಿ ಕೊಡುವಂತದೆ.
ಈಗಿನ ಜನತೆಯ ಮುಂದಿರುವ ಆದರ್ಶ ಪುರುಷರಾರದು ಯಾರು ? ಮನಮೋಹನ್ ಸಿಂಗ್ , ಸೋನಿಯ, ಲಲ್ಲು ಪ್ರಸಾದ್, ಕರುಣಾನಿದಿ, ರಾಜಾ, ಅರ್ಜುನ್ ಸಿಂಗ್, ಗಡ್ಕರಿ ,ಮುಲಯಾಂ ಯಾದವ್, ಅಂಟಾನಿ, ಅನ್ಸಾರಿ, ಚಿದಂಬರಮ್, ದೇವೆಗೌಡ, ಯಡಿಯೂರಪ್ಪ, ಕುಮಾರಸ್ವಾಮಿ ,ರೆಡ್ಡಿ ಸಹೋದರರು ..... ಸಾಕ. ಅಥವ ದೇಶವನ್ನೆ ಲೂಟೆ ಮಾಡುತ್ತಿರುವ ಇಂಡಷ್ಟ್ರಿಯಲಿಷ್ಟಗಳ ಹೆಸರು ಬೇಕ. ಯುವಜನತೆ ಯಾರನ್ನು ಆದರ್ಶವನ್ನಾಗಿ ನೋಡಬೇಕು.ಮತ್ತೆ ವಿವೇಕಾನಂದರಂತ ಮಹಾಪುರುಷರಿಗೆ ಆದರ್ಶವಾಗಿದ್ದವರಾದರು ಯಾರು? ರಾಮಕೃಷ್ಣಪರಮಹಂಸರು ! ಈಗಲು ನಮ್ಮಲ್ಲಿ ವಿವೇಕಾನಂದರಿರಬಹುದು ಅವರಿಗೆ ಗುರುವಾಗಲು ಸಿಗುವರು ಯಾರು ? ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳಂತವರು.
ಮತ್ತೆ ಹೇಳುತ್ತೇವೆ ವಿವೇಕಾನಂದರು ಇಂದಿನ ಜನತೆಗೆ ಆದರ್ಶವಾಗಲಿ ಎಂದು. ಹೇಗೆ ಸಾದ್ಯ ? ಅವರನ್ನು ಇಂದಿನ ಜನತೆ ನೋಡಿಲ್ಲ ಅರಿತಿಲ್ಲ , ಅವರ ಆದರ್ಶಗಳೆಲ್ಲವು ಈಗ ಪುಸ್ತಕರೂಪದಲ್ಲಿದೆ. ಆದರೆ ನಮ್ಮ ಯುವ ಜನತೆಗೆ ಬೇಕಿರುವುದು ಪುಸ್ತಕ ಚಿತ್ರರೂಪದಲ್ಲಿರುವ ಆದರ್ಶವಲ್ಲ. ನಡೆದಾಡುವ ಆದರ್ಶ ಜೀವಂತ ಆದರ್ಶ ಅದನ್ನು ಕೊಡಲು ಬಾರತದಲ್ಲಿರುವ ಹಿರಿಯ ತಲೆಗಳು ಸೋತಿವೆ. ಯುವಮನಸ್ಸುಗಳು ಸದಾ ಶುಭ್ರವಾಗಿರುತ್ತವೆ ಖಾಲಿ ಕಾಗದದಂತೆ ಅಲ್ಲಿ ಬರೆಯಬೇಕಾದವರು ಸಮಾಜದ ಹಿರಿಯರು. ಹೀಗಿರುವಾಗ ಯುವಜನತೆ ದಾರಿ ಕಾಣದೆ ನಿಂತರೆ ಸೋತರೆ ಅದಕ್ಕೆ ಹೊಣೆ ಹಿರಿಯರೆ. ಈಗಲು ಇಲ್ಲೊಂದು ಅಲ್ಲೊಂದು ಜೀವಗಳು ಮಿನುಗುತ್ತವೆ ಮತ್ತು ಉರಿದು ಸುಟ್ಟು ಹೋಗುತ್ತವೆ ಕಲ್ಪನ ಛಾವ್ಲಳಂತೆ, ಹೇಮಂತ್ ಕರ್ಕರೆಯಂತೆ .... ಏಕೆಂದರೆ ಇಂದಿನ ಸಮಾಜಕ್ಕೆ ಅವರು ಹೊಂದುವದಿಲ್ಲ. ’ಯುವಜನರೆ ಏಳಿ ಎದ್ದೇಳ’ ಎಂದು ಕರೆಕೊಡಬೇಕಾದರೆ ಎಬ್ಬಿಸುವ ನಾವು ಎದ್ದಿರಬೇಕಲ್ಲವೆ. ಯುವಜನತೆಯನ್ನು ಹೇಗೆ ಬೇಕಾದರು ತಿದ್ದಿಕೊಳ್ಳಬಹುದು ನಾವು ಸರಿಯಾದರೆ !.
Comments
ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ?
In reply to ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ? by asuhegde
ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ?
In reply to ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ? by partha1059
ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ?
In reply to ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ? by bhasip
ಉ: ಭಾರತದ ಯುವಜನತೆ ಏಕೆ ಹೀಗಿದ್ದಾರೆ?