ವಿದಾಯ
ಅರಿವಿಲ್ಲದೆ ಹನಿ ಜಾರುತಿಹುದು
ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು
ದೂರವಾಗುವ ದಿನ ಇಂದೇ ಏಕೆ ಬಂದಿಹುದು
ಅಲೆಮಾರಿ ಜೀವನದಲಿ ಊರ ಸೆಲೆ ತಂದವರು
ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು
ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು,
ಕಳೆದ ಒಂದು ವರುಷದ ಹಲವು ಹರುಷಕೆ ಕಾರಣರಾದವರು
ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು
ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು
ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ
ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ
ನನ್ನ ನೆನಪಿನ ಭುತ್ತಿಲಿ ನಿಮ್ಮ ಪಾಲು ಎಂದೆಂದಿಗೂ ಇರಲಿ
Rating
Comments
ಉ: ವಿದಾಯ
In reply to ಉ: ವಿದಾಯ by asuhegde
ಉ: ವಿದಾಯ
ಉ: ವಿದಾಯ
In reply to ಉ: ವಿದಾಯ by raghumuliya
ಉ: ವಿದಾಯ