ಕತ್ತೆಯ ಕೊರಗು
ಕವನ
ಅಗಸನೊಬ್ಬನ ಕತ್ತೆ,ತಾಯ ಕಳಕೊಂಡು
ಬಗೆಬಗೆಯ ಕಷ್ಟದಲಿ ಬಾಳನೆಳಕೊಂಡು
ದುಡಿಯುತಿರೆ ಹೊಟ್ಟೆ ತುಂಬದ ಸಿಟ್ಟಿನಿಂದ
ಹಗ್ಗವನು ಕಡಿದು ಹೊರಟಿತು ಗೇಹದಿಂದ [೧]
ಸುಟ್ಟಬಟ್ಟೆಯೆ, ನೀನು ನನ್ನ ಮೇಲೇರಿ
ಕಷ್ಟ ಕೊಡುತಿರುವಿಯಲ! ನೀನೆನಗೆ ಮಾರಿ
ಎಂದಮಿತ ಕ್ರೋಧದಲಿ ಬಟ್ಟೆಗಳ ತುಳಿದು
ಚಿಂದಿ ಮಾಡುತ್ತ ತೆರಳಿತು ನದಿಗೆ ಅಂದು [೨]
ನೀನಿರಲು ಕೆಲಸವಿಹುದೆನ್ನ ಮಾಲಕಗೆ
ನಿನ್ನಿಂದ ನೂರಾರು ಬನ್ನ ಬಂತೆನಗೆ
ಎಂದು ನೂಕಿತು ಕಲ್ಲ ನದಿಯ ಕೆಸರಲ್ಲಿ
ಹುಲ್ಲು ಮೇಯಲು ಬಂತು ಹೊಳೆಯ ದಡದಲ್ಲಿ [೩]
ಓಡಿ ಬಂದನು ಅಗಸ,ಬಟ್ಟೆಗಳ ನೋಡಿ
ಈ ಕತ್ತೆಗೇನು ರೋಗವೆ?ಹುಚ್ಚು ಖೋಡಿ!
ಎಂದೆನುತ ಬಾರಿಸಿದ ನೂರಾರು ಹೊಡೆತ
ಬಂಧನಕೆ ಸಿಕ್ಕಿತಾ ಕತ್ತೆ ರೋದಿಸುತ [೪]
ಸೋಲಿರಲಿ ,ಗೆಲುವಿರಲಿ ಕ್ರಾಂತಿ ಗೀತೆಯನು
ಶೋಷಿತರು ಊದುವರು ಪಾಂಚಜನ್ಯವನು
ನಿಂತ ಗಡಿಯಾರವೂ ದಿನಕೆರಡು ಬಾರಿ
ಸರಿಯಾಗಿ ತೋರುವುದು ವೇಳೆಯನು ಸಾರಿ [೫]
Comments
ಉ: ಕತ್ತೆಯ ಕೊರಗು
ಉ: ಕತ್ತೆಯ ಕೊರಗು
ಉ: ಕತ್ತೆಯ ಕೊರಗು
ಉ: ಕತ್ತೆಯ ಕೊರಗು