ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..
ಇದನ್ನು ಯಾರೊಬ್ಬರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ಬರೆದಿದ್ದಲ್ಲ. ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಪ್ರತಿ ಬಾರಿ ಹಬ್ಬಗಳು ಬಂದಾಗ ಈ ವಿಷಯ ನನ್ನನ್ನು ಕಾಡುತ್ತಿತ್ತು. ಮೊನ್ನೆ ನಡೆದ ಸಂಕ್ರಾಂತಿ ಹಬ್ಬದಂದು ಈ ವಿಷಯ ಕಾಡಿದ್ದು ಸುಳ್ಳಲ್ಲ. ಅದೇನೆಂದರೆ ಮಾಮೂಲಿ ದಿನಗಳಲ್ಲಿ ಖಾಲಿ ಖಾಲಿ ಇರುವ ದೇವಸ್ಥಾನಗಳು ಹಬ್ಬಗಳು ಬಂತೆಂದರೆ ಸಾಕು ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಫುಲ್ ಬ್ಯುಸಿ. ಆ ದಿನ ದೇವರಿಗೆ ವಿಶ್ರಾಂತಿಯೇ ಇರುವುದಿಲ್ಲ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ಬರಿಕಾಲಲ್ಲಿ ನಿಂತು ದರ್ಶನ ಮಾಡುತ್ತಾರೆ.
ಮಾಮೂಲಿ ದಿನಗಳಲ್ಲಿ ಅದೇ ದೇವಸ್ಥಾನ ಅದೇ ದೇವರು ಅಲ್ಲೇ ಇದ್ದರು ಮರೆತೇ ಬಿಟ್ಟಿರುವ ಜನ ಅದು ಹೇಗೆ ಹಬ್ಬ ಹಾಗೂ ವಿಶೇಷ ದಿನಗಳ ಮಾತ್ರ ನೆನಪಾಗಿ ಬಿಡುತ್ತದೆ. ಅದು ಹೇಗೆ ದಿನ ಇಲ್ಲದ ಭಕ್ತಿ ವಿಶೇಷ ದಿನಗಳಲ್ಲಿ ಮಾತ್ರ ಆಚೆ ಬರುತ್ತದೆ....???
Comments
ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..
ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..
ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..
ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..
In reply to ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ.. by bhaashapriya
ಉ: ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..