ಅರ್ಥಪೂರ್ಣ ಸಲಹೆ
ಚಿಣ್ಣ ಕೃಷ್ಣ ಬೆಣ್ಣೆ ಕದ್ದು ಓಡುತಿದ್ದನು
ಅಣ್ಣ ಬಲನು ಹೋಗಿ ಅದನು ಮಾತೆಗೊರೆದನು
ಕೋಲಹಿಡಿಯುತಾ ಯಶೋದೆ ಅಟ್ಟಿ ಬಂದಳು
ಬಾಲ ಎಲ್ಲಿ ಹೋದರಿಂದು ಬಿಡೆನು ಎಂದಳು
ತುಂಟತನವು ಮೀರುತಿಹುದು ಕೃಷ್ಣ ದಿನದಿನ
ಎಂಟು ಮಂದಿಯಲ್ಲಿ ಕಳೆಯುತಿರುವೆ ಮಾನವ
ನೆಂಟರಿಷ್ಟರೆಲ್ಲ ದಿನವು ದೂರುತಿರುವರು
ಕಂಟಕ ಗೋಕುಲಕೆಂದು ಬಯ್ಯುತಿರುವರು
ಎಲ್ಲಿ ಹೋಗಿ ಅಡಗಿದರೂ ಬಿಡೆನು ಖಂಡಿತ
ಚೆಲ್ಲುತನಕೆ ಇಲ್ಲವಲ್ಲೊ ಒಂದು ಪರಿಮಿತ
ಒಳ್ಳೆ ಮಾತಿಗೆಲ್ಲ ನೀನು ಬಗ್ಗೆ ಎನ್ನುತ
ಬಲ್ಲೆ ಅದಕೆ ಕೋಲು ತಂದೆ ನಿಲ್ಲೊ ಅಚ್ಯುತ
ರಂಗ ಓಡುತಿಹುದ ನೋಡುತೊಬ್ಬ ಗೋಪಿಕೆ
ಕಂಗಳಲ್ಲಿ ನೀರ ಹರಿಸುತೋಡುವೆ ಏಕೆ?
ವ್ಯರ್ಥ ಶ್ರಮವದೇಕೆ ನಿನ್ನ ಬಿಡಳೆಶೋದೆಯು
ಅರ್ಥಪೂರ್ಣ ಸಲಹೆಯೀವೆ ಮಾರ್ಗ ಸುಲಭವು
ನೀನು ಕಪ್ಪು ಕತ್ತಲು ನಿನಗಿಂತಲು ಕಪ್ಪು
ತಾಣವಿಹುದು ಅಡಗೆ ಎನ್ನ ಮಾತನು ಒಪ್ಪು
ಅಲ್ಲಿ ಅಡಗಲಾಯಶೋದೆ ನಿನ್ನನರಸಳು
ಫುಲ್ಲ ನಯನ ಅಡಗಿಬಿಡು ನೀನೆನ್ನ ಮನದೊಳು
ಅದಕಿಂತಲು ಅಂಧಕಾರ ಜಗದೊಳಿಲ್ಲವು
ಮದನ ಜನಕ ಮುದವನೀಯೊ ಹುದುಗಿ ಮನದೊಳು
ಪದುಮನಾಭ ನಿನಗೆ ಮನದಿ ರಕ್ಷಣೆ ಸಿಗಲಿ
ಮಧುಸೂದನ ಎನ್ನ ಮೋಹ ನಾಶವಾಗಲಿ
ಪ್ರೇರಣೆ-
ಲೀಲಾಶುಕರಿಂದ ರಚಿತವಾದ ಕೃಷ್ಣ ಕರ್ಣಾಮೃತದ ಈ ಕೆಳಕಂಡ ಶ್ಲೋಕ
ಕ್ಷೀರಸಾರಮಪಹೃತ್ಯ ಶಂಕಯಾ
ಸ್ವೀಕೃತಂ ಯದಿ ಪಲಾಯನಂ ವಿಭೋ
ಮಾನಸೇ ಮಮ ನಿತಾಂತ ತಾಮಸೇ
ನಂದನಂದನ ಕಥಂ ನ ಲೀಯಸೇ
Comments
ಉ: ಅರ್ಥಪೂರ್ಣ ಸಲಹೆ
In reply to ಉ: ಅರ್ಥಪೂರ್ಣ ಸಲಹೆ by sada samartha
ಉ: ಅರ್ಥಪೂರ್ಣ ಸಲಹೆ
ಉ: ಅರ್ಥಪೂರ್ಣ ಸಲಹೆ
In reply to ಉ: ಅರ್ಥಪೂರ್ಣ ಸಲಹೆ by Jayanth Ramachar
ಉ: ಅರ್ಥಪೂರ್ಣ ಸಲಹೆ
ಉ: ಅರ್ಥಪೂರ್ಣ ಸಲಹೆ
In reply to ಉ: ಅರ್ಥಪೂರ್ಣ ಸಲಹೆ by hamsanandi
ಉ: ಅರ್ಥಪೂರ್ಣ ಸಲಹೆ
ಉ: ಅರ್ಥಪೂರ್ಣ ಸಲಹೆ
In reply to ಉ: ಅರ್ಥಪೂರ್ಣ ಸಲಹೆ by kamath_kumble
ಉ: ಅರ್ಥಪೂರ್ಣ ಸಲಹೆ
ಉ: ಅರ್ಥಪೂರ್ಣ ಸಲಹೆ