ದಿನಕ್ಕೊಂದು ಪ್ರಶ್ನೆ!.... ಅಚ್ಚಗನ್ನಡ ಜನಪದ 'ಪಂಚ ಪತಿರ್ವತೆ' ಯಾರು ಯಾರುಯಾರು?

ದಿನಕ್ಕೊಂದು ಪ್ರಶ್ನೆ!.... ಅಚ್ಚಗನ್ನಡ ಜನಪದ 'ಪಂಚ ಪತಿರ್ವತೆ' ಯಾರು ಯಾರುಯಾರು?

http://sampada.net/… ಬ್ಲಾಗು ನೋಡಿದಾಗ ನನ್ನ ತಲೆಗೆ ಬಂದದ್ದು. ಈ ಮೇಲಿನ ಬರಹದ ಪಂಚ ಕನ್ಯಯರು ನಮ್ಮ ಅಚ್ಚಗನ್ನಡ ಜನಪದ ಸಂಸ್ಕೃತಿಗೆ ಯಾವ ರೀತಿ ಸಂಬಂಧ ಪಟ್ಟಿದ್ದಾರೋ ಗೊತ್ತಿಲ್ಲ?! ;) ನಮ್ಮ ಕನ್ನಡ ಮೂಲ ಸಂಸ್ಕೃತಿಯಲ್ಲಿ / ಕನ್ನಡ ಜನಪದ ಸಂಸ್ಕೃತಿಯಲ್ಲಿ ಐವರನ್ನು 'ಪಂಚ ಪತಿರ್ವತೆ" ಯಾರನಾಗಿ ಗುರ್ತಿಸಲಾಗಿದೆ. ಅವರು ಯಾರು? ..................... ಉತ್ತರವನ್ನು ಪ್ರತಿಕ್ರಿಯೆಯ ರೂಪದಲ್ಲಿ ಅಲ್ಲದೆ, ಬ್ಲಾಗಿನಲ್ಲೇ ಹಾಕೋಣ ಅಂತ... ಇಲ್ಲೇ ಸೇರುಸ್ತಾ ಇದ್ದೀನಿ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಉತ್ತರ. ೧. ಸತ್ಯವ್ವ ೨. ಚಂಗಳೇ ೩. ದುಗ್ಗಳೇ ೪. ಗುಡ್ದವ್ವೆ ೫. ಪಾರ್ವತಿ ದೇವಿ ಇವರು ನಮಗೆ ಕಟ್ಟಿ ಕೊಡುವ ಮೌಲ್ಯಗಳು ಯಾವುದೇ "ಪಂಚ ಕನ್ಯಾ" ಸಂಸ್ಕೃತಿಗಿಂತ ತುಂಬಾನೇ ಮಿಗಿಲಾದದ್ದು. ಅಚ್ಚಗನ್ನಡದ ಅಸಮಾನ್ಯ ಗರತಿಯರಿಗೇನೂ ಬರವಿಲ್ಲ. ಆದರೂ ಇವರು ಪ್ರಮುಖವಾಗಿ ಜನಪದರಿಂದ "ಐದು ಐದೆ" ಯರಾಗಿ ಮೆರೆದಿದ್ದಾರೆ. ಕನ್ನಡ ಇತಿಹಾಸದ ಬಗ್ಗೆ ಸಂಸ್ಕೃತಿಯ ಬಗ್ಗೆ ಆಸಕ್ತಿಯುಳ್ಳವರು ಇವರ ಬಗ್ಗೆ ಹೆಚ್ಚು ಬರೆಯಬಹುದು.
Rating
No votes yet

Comments