ಹಣದ ಉತ್ಪಾದನೆ

ಹಣದ ಉತ್ಪಾದನೆ

Comments

ಬರಹ

ನಾವೆಲ್ಲ ಹಣ ಗಳಿಕೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಅದು ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪ ಕೂಡ ಆಲೋಚನೆ ಮಾಡುವುದಿಲ್ಲ. ವಿಶಯ ಇಷ್ಟೇ. ಎಲ್ಲಾ ದೇಶದಲ್ಲಿ ಚಲಾವಣೆಯಲ್ಲಿರುವ ಕಾಗದದ ಹಣವು ಸಾಲವೆ. ಈಗ ನಿಮ್ಮ ಬಳಿ ಇರುವ ಹಣವೂ ಸಾಲವೆ. ಆದರೆ ಅದು ನಿಮ್ಮ ಸಾಲವಲ್ಲ. ಕಾಗದದ ಮೇಲಿನ ಮುಖಬೆಲೆಯನ್ನು ವ್ಯವಸ್ತೆಯಲ್ಲಿರುವ ಯಾರೋ ಕೇಂದ್ರೀಯ ಬ್ಯಾಂಕಿಗೆ ಬಡ್ಡಿಯ ಸಮೇತ ಪಾವತಿಸಬೇಕಾದ ಮೋತ್ತ. ಅದು ದೇಶದ ಪ್ರಜೆ ಆಗಿರಬಹುದು ಅಥವಾ ಸರ್ಕಾರ ಆಗಿರಬಹುದು.

ಹಾಗಾದರೆ, ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಲದಲ್ಲಿದೆಯೆ? ಹೌದು. ಪ್ರತಿ ದೇಶದಲ್ಲಿರುವ ಪ್ರತಿ ಕಾಗದದ ಹಣವು ಒಂದಲ್ಲ ಒಂದು ದಿನ ಆಯಾ ದೇಶದ ಕೇಂದ್ರೀಯ ಬ್ಯಾಂಕುಗಳಿಗೆ ಹಿಂದಿರುಗಿಸಬೆಕಾದದ್ದೆ. ಅದು ಬಡ್ಡಿಯ ಸಮೇತ. ಬಡ್ಡಿ ಎನ್ನುವುದು ನಮ್ಮ Commercial ಬ್ಯಾಂಕುಗಳು ಕಾಗದದ ಮೇಲೆ ಹುಟ್ಟು ಹಾಕುವ ಕಾಣದ ಹಣ. ಹೇಗೆ?

ಅದು ಸುಲಭವಾದ ವಿಶಯ. ಸ್ವಲ್ಪ ಹೋತ್ತು ನೀವೇ ಆಲೋಚಿಸಿ ನೋಡಿ. ಉದಾಹರಣೆಗೆ, ಪ್ರಪಂಚದಲ್ಲಿ ಸಾಲ ಮಾಡುತ್ತಿರುವವರಲ್ಲಿ ನೀವೇ ಮೋದಲನೆಯವರು ಎಂದುಕೊಳ್ಳಿ. ಬ್ಯಾಂಕಿನಿಂದ ೧೦೦೦ ರೂಪಾಯಿಯನ್ನು ೧೦% ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತೀರಿ. ಪ್ರಪಂಚದಲ್ಲಿ ನೀವೇ ಮೊದಲ ಸಾಲಗಾರರಾದ್ದರಿಂದ ಹೊರಗಡೆ ಬೇರೆ ಯಾವ ಹಣವು ಚಲವಣೆಯಲ್ಲಿರುವುದಿಲ್ಲ. ಆದರೆ ನೀವು ಬ್ಯಾಂಕಿಗೆ ಪಾವತಿಸಬೇಕಾದ ಒಟ್ಟು ಮೊತ್ತ ೧೧೦೦ ರೂಪಾಯಿಗಳು. ಆದರೆ ಚಲವಣೆಯಲ್ಲಿ ಕಾಣುತ್ತಿರುವುದು ೧೦೦೦ ರೂಪಾಯಿ. ನೀವು ಬ್ಯಾಂಕಿಗೆ ಪಾವತಿಸಬೇಕಾದ್ದು ೧೧೦೦ ರೂಪಾಯಿಗಳು. ಹಾಗಾದರೆ, ೧೦೦ ರೂಪಾಯಿ ಬಡ್ಡಿಯನ್ನು ಹೇಗೆ ಪಾವತಿ ಮಾಡುತ್ತಿರಾ. ಸಾಧ್ಯವೇ? ಇದು ಸಾಧ್ಯವಿಲ್ಲ. ಎಕೆಂದರೆ ಬ್ಯಾಂಕು ನಿಮ್ಮ ಮುಖಾಂತರ ಚಲವಣೆಗೆ ತಂದಿರುವುದು ೧೦೦೦ ರೂಪಾಯಿಗಳು ಮಾತ್ರ. ಬಡ್ಡಿಯಾಗಿ ಪಾವತಿಸಬೆಕಾದ ೧೦೦ ರೂಪಾಯಿಗಳು ಚಲಾವಣೆಯಲ್ಲೇ ಇಲ್ಲ. ಹಾಗಾಗಿ ಬಡ್ಡಿ ಎನ್ನುವುದು ಬ್ಯಾಂಕುಗಳು ಹಣವನ್ನು ಹುಟ್ಟುಹಾಕಲು ಬಳಸುವ ಒಂದು ತಂತ್ರ.

ಇನ್ನೋಂದು ಉದಾಹರಣೆ ತೆಗೆದು ಕೊಳ್ಳಿ. ಬ್ಯಾಂಕಿನಿಂದ ಸಾಲ ಪಡೆಯುತ್ತಿರುವವರಲ್ಲಿ ನೀವು ಮದ್ಯದವರು. ಬ್ಯಾಂಕಿನಿಂದ ೧೦೦೦ ರೂಪಾಯಿಗಳನ್ನು ೧೦% ಬಡ್ಡಿ ದರಕ್ಕೆ ಸಾಲ ಪಡೆಯುತ್ತೀರಿ. ನೀವು ಮಧ್ಯದವರಾದ್ದರಿಂದ ವ್ಯವಸ್ತೆಯಲ್ಲಿರುವ ಯಾರಿಗಾದರು ಎನಾದರು ವಸ್ತುವನ್ನು ಮಾರಿ ಅಥವ ಸೇವೆ ಮಾಡಿ ಹುಟ್ಟಿದ ೧೦೦ ರೂಪಾಯಿ ಬಡ್ಡಿಯನ್ನು ತೀರಿಸಬಹುದು.

ಕೊನೆಯಲ್ಲಿ ಪ್ರಪಂಚದಲ್ಲಿರುವ ಎಲ್ಲಾ ವ್ಯಕ್ತಿಗಳು ಮತ್ತು ಸರ್ಕಾರಗಳು ಸಾಲ ತೀರಿಸಿದರೆ, ಕೆಲವರು ದಿವಾಳಿಗಳಾಗುತ್ತಾರೆ ಮತ್ತು ಯಾವ ಕಾಗದದ ಹಣವು ಚಲಾವಣೆಯಲ್ಲಿರುವುದಿಲ್ಲ.

ಹಾಗಾದರೆ ಹಣ ಎಂದರೇನು? ಹಣ ಎಂದರೆ, ಸರ್ಕಾರದ ಪರವಾಗಿ ಕೇಂದ್ರೀಯ ಬ್ಯಾಂಕು ಮುದ್ರಿಸಿ ಚಲಾವಣೆ ಮಾಡುವ ಕಾಗದದ ಚೂರು. ಸರ್ಕಾರವು ಕಾಗದದ ಚೂರನ್ನು ತೆಗೆದುಕೊಳ್ಳಲು ಕೆಲವು ಸಾಲಪತ್ರಗಳನ್ನು ಅಡಮಾನ ಮಾಡುತ್ತದೆ. ಅದರ ಜೊತೆ ಚಿನ್ನ, ಬೆಳ್ಳಿ ಅಥವಾ ಯಾವುದೆ ಬೆಲೆ ಬಾಳುವ ವಸ್ತುವನ್ನು ಕೂಡ ಅಡಮಾನ ಮಾಡುತ್ತದೆ. ಸರ್ಕಾರವು ಸಾಲವನ್ನು ಹುಟ್ಟುಹಾಕಿದ ಬಡ್ಡಿಯ ಸಮೇತ ಮರುಪಾವಾತಿ ಮಾಡಬೇಕಾಗುತ್ತದೆ.

ಹಣ ಎನ್ನುವುದು ಸಾರ್ಕಾರದಿಂದ ಪ್ರಮಾಣಿಕರಿಸಿದ ಒಂದು ಕಾಗದದ ಚೂರು. ವ್ಯವಸ್ತೆಯಲ್ಲಿರುವ ಎಲ್ಲರು ಆ ಕಾಗದವನ್ನು ಸರ್ಕಾರಕ್ಕೆ ವಾಪಸ್ಸು ಮಾಡಿದರೆ, ಸರ್ಕಾರವು ಅದನ್ನು ಕೇಂದ್ರೀಯ ಬ್ಯಂಕಿಗೆ ನೀಡಿ ಅಷ್ಟೇ ಬೆಲೆ ಬಾಳುವ ಯಾವುದಾದರು ವಸ್ತುವನ್ನು ನಮಗೆ ನೀಡುತ್ತದೆ. ಸರ್ಕಾರವು ಹಣವನ್ನು Commercial ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ಚಲವಣೆಗೆ ತರುತ್ತದೆ. ಆಮೇಲೆ ಯಾರಾದರೂ ಬಡ್ಡಿಗೆ ಸಾಲಪಡೆಯುತ್ತಾರೆ. ಆಮೇಲೆ ಸಾಲ ಪಡೆದ ವ್ಯಕ್ತಿ ಎನಾದರು ಕೆಲಸ ಮಾಡಿ ಅಥವ ಎನಾದರು ಸಂಪನ್ಮೂಲವನ್ನು ಹುಟ್ಟಿಸಿ ಅದನ್ನು ಯಾರಿಗಾದರು ಮಾರಿ ಹಣ ಸಂಪಾದಿಸುತ್ತಾನೆ. ಕೊಳ್ಳುವವನು ಬ್ಯಾಂಕುಗಳಿಂದ ಸಾಲ ಪಡೆದು ವಸ್ತುಗಳನ್ನು ಕೂಳ್ಳುತ್ತಾನೆ. ಹಾಗಾಗಿ ಮೂದಲು ಸಾಲ ಪಡೆದ ವ್ಯಕ್ತಿ ಸಾಲವನ್ನು ಬಡ್ಡಿಯ ಸಮೇತ ಮರುಪಾವತಿ ಮಾಡಬಹುದು.

ಉದಾಹರಣೆಗೆ; ಮೋದಲು ಸಾಲಪಡೆಯುವವನು ಎನಾದರು ಸಂಪನ್ಮೂಲ ಕ್ರೂಡೀಕರಿಸಿ ಯಾರಿಗಾದರು ಮಾರುತ್ತಾನೆ. ಕೊಳ್ಳುವವನು ಸಾಲ ಪಡೆದು ಕೊಳ್ಳುತ್ತಾನೆ. ಎರಡನೆಯವನಿಗೆ ಸಾಲ ಕೊಡಲು ಬ್ಯಾಂಕು ಮತ್ತೆ ಹಣ ಮುದ್ರಿಸುವುದಿಲ್ಲ. ಮೊದಲನೆ ವ್ಯಕ್ತಿಗೆ ಕೊಟ್ಟ ಸಾಲ ಮತ್ತೆ ಬ್ಯಾಂಕಿಗೆ ಬರುತ್ತದೆ. ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಯ ಮೇಲೆ ಸಾಲ ನೀಡುತ್ತವೆ. ಮೊದಲನೆ ವ್ಯಕ್ತಿಗೆ ಕೊಟ್ಟ ಸಾಲವು ಪುನಃ ಬ್ಯಾಂಕಿಗೆ ಬಂದಾಗ, ಅದರಲ್ಲಿ ಸ್ವಲ್ಪ ಉಳಿಸಿಕೊಂಡು ಇನ್ನು ಉಳಿದ ಭಾಗವನ್ನು ಮತ್ತೆ ಬೇರೆಯವರಿಗೆ ಸಾಲ ನೀಡುತ್ತದೆ. ಹಾಗಾಗಿ ೧೦೦೦ ರೂಪಾಯಿಗಳ ಸಾಲವು ಪುನಃ ಬ್ಯಾಂಕಿಗೆ ಬರುತ್ತದೆ. ಅದರಲ್ಲಿ ಸ್ವಲ್ಪ (ಅಂದರೆ ೧೦%) ಬ್ಯಾಂಕು ತನ್ನಲ್ಲಿ ಉಳಿಸಿಕೊಂಡು ಉಲಿದ ೯೦೦ ರೂಗಳನ್ನು ಬ್ಯಾಂಕು ಎರಡನೆ  ವ್ಯಕ್ತಿಗೆ ಸಾಲ ನೀಡುತ್ತದೆ. ಹಾಗಾಗಿ ವ್ಯಸ್ತೆಯಲ್ಲಿ ಒಟ್ಟು ೧೯೦೦ ರೂಪಾಯಿಗಳು ಹುಟ್ಟುತ್ತದೆ. ಅದರಲ್ಲಿ ಕಾಣಿಸುವ ೧೦೦೦ ರೂಪಾಯಿ ಮತ್ತು ಹುಟ್ಟಿದ ೯೦೦ ರೂಪಾಯಿಗಳು. ಹಾಗಾಗಿ ಮೊದಲನೆ ವ್ಯಕ್ತಿ ತನ್ನ ಸಾಲವನ್ನು ತೀರಿಸಲು ಸಾಧ್ಯ. ಹಣ ಹುಟ್ಟು ಹಾಕುವ ಈ ಪ್ರಕ್ರಿಯೆ ನಿರಂತರ ಮತ್ತು ಕೊನೆಯಿಲ್ಲದ್ದು. ಹಣ ಹುಟ್ಟುಹಾಕುವ ಈ ಪ್ರಕ್ರಿಯೆ ಸಾಮಾಜಿಕ ದಿವಾಳಿತನಕ್ಕೆ ಕಾರಣವಾಗಿದೆ.
ಬಡ್ಡಿ ಕೇವಲ ಒಂದು ಸರಳವಾದ ವಿಧಾನ. ಬಡ್ಡೀ ಕೇವಲ ವಯ್ಯಕ್ತಿಕ ದಿವಾಳಿತನಕ್ಕೆ ಕಾರಣವಾಗಿದೆ. ಹೀಗೆ ವ್ಯವಸ್ತೆಯಲ್ಲಿ ಅನೇಕ ವಿಧಾನಗಳಿವೆ. ಈ ಅನೇಕ ವಿಧನಗಳು ಯಾವ ಯಾವ ಸಮಸ್ಯೆಗಳಿಗೆ ಕಾರಣವಾಗಿದೆ?

ಹಣದ ಉತ್ಪಾದನೆ

ನಾವೆಲ್ಲ ಹಣ ಗಳಿಕೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಅದು ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪ ಕೂಡ ಆಲೋಚನೆ ಮಾಡುವುದಿಲ್ಲ. ವಿಶಯ ಇಷ್ಟೇ. ಎಲ್ಲಾ ದೇಶದಲ್ಲಿ ಚಲಾವಣೆಯಲ್ಲಿರುವ ಕಾಗದದ ಹಣವು ಸಾಲವೆ. ಈಗ ನಿಮ್ಮ ಬಳಿ ಇರುವ ಹಣವೂ ಸಾಲವೆ. ಆದರೆ ಅದು ನಿಮ್ಮ ಸಾಲವಲ್ಲ. ಕಾಗದದ ಮೇಲಿನ ಮುಖಬೆಲೆಯನ್ನು ವ್ಯವಸ್ತೆಯಲ್ಲಿರುವ ಯಾರೋ ಕೇಂದ್ರೀಯ ಬ್ಯಾಂಕಿಗೆ ಬಡ್ಡಿಯ ಸಮೇತ ಪಾವತಿಸಬೇಕಾದ ಮೋತ್ತ. ಅದು ದೇಶದ ಪ್ರಜೆ ಆಗಿರಬಹುದು ಅಥವಾ ಸರ್ಕಾರ ಆಗಿರಬಹುದು.

ಹಾಗಾದರೆ, ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಲದಲ್ಲಿದೆಯೆ? ಹೌದು. ಪ್ರತಿ ದೇಶದಲ್ಲಿರುವ ಪ್ರತಿ ಕಾಗದದ ಹಣವು ಒಂದಲ್ಲ ಒಂದು ದಿನ ಆಯಾ ದೇಶದ ಕೇಂದ್ರೀಯ ಬ್ಯಾಂಕುಗಳಿಗೆ ಹಿಂದಿರುಗಿಸಬೆಕಾದದ್ದೆ. ಅದು ಬಡ್ಡಿಯ ಸಮೇತ. ಬಡ್ಡಿ ಎನ್ನುವುದು ನಮ್ಮ ಚೊಮ್ಮೆರ್ಚಿಅಲ್ ಬ್ಯಾಂಕುಗಳು ಕಾಗದದ ಮೇಲೆ ಹುಟ್ಟು ಹಾಕುವ ಕಾಣದ ಹಣ. ಹೇಗೆ?

ಅದು ಸುಲಭವಾದ ವಿಶಯ. ಸ್ವಲ್ಪ ಹೋತ್ತು ನೀವೇ ಆಲೋಚಿಸಿ ನೋಡಿ. ಉದಾಹರಣೆಗೆ, ಪ್ರಪಂಚದಲ್ಲಿ ಸಾಲ ಮಾಡುತ್ತಿರುವವರಲ್ಲಿ ನೀವೇ ಮೋದಲನೆಯವರು ಎಂದುಕೊಳ್ಳಿ. ಬ್ಯಾಂಕಿನಿಂದ ೧೦೦೦ ರೂಪಾಯಿಯನ್ನು ೧೦% ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತೀರಿ. ಪ್ರಪಂಚದಲ್ಲಿ ನೀವೇ ಮೊದಲ ಸಾಲಗಾರರಾದ್ದರಿಂದ ಹೊರಗಡೆ ಬೇರೆ ಯಾವ ಹಣವು ಚಲವಣೆಯಲ್ಲಿರುವುದಿಲ್ಲ. ಆದರೆ ನೀವು ಬ್ಯಾಂಕಿಗೆ ಪಾವತಿಸಬೇಕಾದ ಒಟ್ಟು ಮೊತ್ತ ೧೧೦೦ ರೂಪಾಯಿಗಳು. ಆದರೆ ಚಲವಣೆಯಲ್ಲಿ ಕಾಣುತ್ತಿರುವುದು ೧೦೦೦ ರೂಪಾಯಿ. ನೀವು ಬ್ಯಾಂಕಿಗೆ ಪಾವತಿಸಬೇಕಾದ್ದು ೧೧೦೦ ರೂಪಾಯಿಗಳು. ಹಾಗಾದರೆ, ೧೦೦ ರೂಪಾಯಿ ಬಡ್ಡಿಯನ್ನು ಹೇಗೆ ಪಾವತಿ ಮಾಡುತ್ತಿರಾ. ಸಾಧ್ಯವೇ? ಇದು ಸಾಧ್ಯವಿಲ್ಲ. ಎಕೆಂದರೆ ಬ್ಯಾಂಕು ನಿಮ್ಮ ಮುಖಾಂತರ ಚಲವಣೆಗೆ ತಂದಿರುವುದು ೧೦೦೦ ರೂಪಾಯಿಗಳು ಮಾತ್ರ. ಬಡ್ಡಿಯಾಗಿ ಪಾವತಿಸಬೆಕಾದ ೧೦೦ ರೂಪಾಯಿಗಳು ಚಲಾವಣೆಯಲ್ಲೇ ಇಲ್ಲ. ಹಾಗಾಗಿ ಬಡ್ಡಿ ಎನ್ನುವುದು ಬ್ಯಾಂಕುಗಳು ಹಣವನ್ನು ಹುಟ್ಟುಹಾಕಲು ಬಳಸುವ ಒಂದು ತಂತ್ರ.

ಇನ್ನೋಂದು ಉದಾಹರಣೆ ತೆಗೆದು ಕೊಳ್ಳಿ. ಬ್ಯಾಂಕಿನಿಂದ ಸಾಲ ಪಡೆಯುತ್ತಿರುವವರಲ್ಲಿ ನೀವು ಮದ್ಯದವರು. ಬ್ಯಾಂಕಿನಿಂದ ೧೦೦೦ ರೂಪಾಯಿಗಳನ್ನು ೧೦% ಬಡ್ಡಿ ದರಕ್ಕೆ ಸಾಲ ಪಡೆಯುತ್ತೀರಿ. ನೀವು ಮಧ್ಯದವರಾದ್ದರಿಂದ ವ್ಯವಸ್ತೆಯಲ್ಲಿರುವ ಯಾರಿಗಾದರು ಎನಾದರು ವಸ್ತುವನ್ನು ಮಾರಿ ಅಥವ ಸೇವೆ ಮಾಡಿ ಹುಟ್ಟಿದ ೧೦೦ ರೂಪಾಯಿ ಬಡ್ಡಿಯನ್ನು ತೀರಿಸಬಹುದು.

ಕೊನೆಯಲ್ಲಿ ಪ್ರಪಂಚದಲ್ಲಿರುವ ಎಲ್ಲಾ ವ್ಯಕ್ತಿಗಳು ಮತ್ತು ಸರ್ಕಾರಗಳು ಸಾಲ ತೀರಿಸಿದರೆ, ಕೆಲವರು ದಿವಾಳಿಗಳಾಗುತ್ತಾರೆ ಮತ್ತು ಯಾವ ಕಾಗದದ ಹಣವು ಚಲಾವಣೆಯಲ್ಲಿರುವುದಿಲ್ಲ.

ಹಾಗಾದರೆ ಹಣ ಎಂದರೇನು? ಹಣ ಎಂದರೆ, ಸರ್ಕಾರದ ಪರವಾಗಿ ಕೇಂದ್ರೀಯ ಬ್ಯಾಂಕು ಮುದ್ರಿಸಿ ಚಲಾವಣೆ ಮಾಡುವ ಕಾಗದದ ಚೂರು. ಸರ್ಕಾರವು ಕಾಗದದ ಚೂರನ್ನು ತೆಗೆದುಕೊಳ್ಳಲು ಕೆಲವು ಸಾಲಪತ್ರಗಳನ್ನು ಅಡಮಾನ ಮಾಡುತ್ತದೆ. ಅದರ ಜೊತೆ ಚಿನ್ನ, ಬೆಳ್ಳಿ ಅಥವಾ ಯಾವುದೆ ಬೆಲೆ ಬಾಳುವ ವಸ್ತುವನ್ನು ಕೂಡ ಅಡಮಾನ ಮಾಡುತ್ತದೆ. ಸರ್ಕಾರವು ಸಾಲವನ್ನು ಹುಟ್ಟುಹಾಕಿದ ಬಡ್ಡಿಯ ಸಮೇತ ಮರುಪಾವಾತಿ ಮಾಡಬೇಕಾಗುತ್ತದೆ.

ಹಣ ಎನ್ನುವುದು ಸಾರ್ಕಾರದಿಂದ ಪ್ರಮಾಣಿಕರಿಸಿದ ಒಂದು ಕಾಗದದ ಚೂರು. ವ್ಯವಸ್ತೆಯಲ್ಲಿರುವ ಎಲ್ಲರು ಆ ಕಾಗದವನ್ನು ಸರ್ಕಾರಕ್ಕೆ ವಾಪಸ್ಸು ಮಾಡಿದರೆ, ಸರ್ಕಾರವು ಅದನ್ನು ಕೇಂದ್ರೀಯ ಬ್ಯಂಕಿಗೆ ನೀಡಿ ಅಷ್ಟೇ ಬೆಲೆ ಬಾಳುವ ಯಾವುದಾದರು ವಸ್ತುವನ್ನು ನಮಗೆ ನೀಡುತ್ತದೆ. ಸರ್ಕಾರವು ಹಣವನ್ನು ಚೊಮ್ಮೆರ್ಚಿಅಲ್ ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ಚಲವಣೆಗೆ ತರುತ್ತದೆ. ಆಮೇಲೆ ಯಾರಾದರೂ ಬಡ್ಡಿಗೆ ಸಾಲಪಡೆಯುತ್ತಾರೆ. ಆಮೇಲೆ ಸಾಲ ಪಡೆದ ವ್ಯಕ್ತಿ ಎನಾದರು ಕೆಲಸ ಮಾಡಿ ಅಥವ ಎನಾದರು ಸಂಪನ್ಮೂಲವನ್ನು ಹುಟ್ಟಿಸಿ ಅದನ್ನು ಯಾರಿಗಾದರು ಮಾರಿ ಹಣ ಸಂಪಾದಿಸುತ್ತಾನೆ. ಕೊಳ್ಳುವವನು ಬ್ಯಾಂಕುಗಳಿಂದ ಸಾಲ ಪಡೆದು ವಸ್ತುಗಳನ್ನು ಕೂಳ್ಳುತ್ತಾನೆ. ಹಾಗಾಗಿ ಮೂದಲು ಸಾಲ ಪಡೆದ ವ್ಯಕ್ತಿ ಸಾಲವನ್ನು ಬಡ್ಡಿಯ ಸಮೇತ ಮರುಪಾವತಿ ಮಾಡಬಹುದು.

ಉದಾಹರಣೆಗೆ; ಮೋದಲು ಸಾಲಪಡೆಯುವವನು ಎನಾದರು ಸಂಪನ್ಮೂಲ ಕ್ರೂಡೀಕರಿಸಿ ಯಾರಿಗಾದರು ಮಾರುತ್ತಾನೆ. ಕೊಳ್ಳುವವನು ಸಾಲ ಪಡೆದು ಕೊಳ್ಳುತ್ತಾನೆ. ಎರಡನೆಯವನಿಗೆ ಸಾಲ ಕೊಡಲು ಬ್ಯಾಂಕು ಮತ್ತೆ ಹಣ ಮುದ್ರಿಸುವುದಿಲ್ಲ. ಮೊದಲನೆ ವ್ಯಕ್ತಿಗೆ ಕೊಟ್ಟ ಸಾಲ ಮತ್ತೆ ಬ್ಯಾಂಕಿಗೆ ಬರುತ್ತದೆ. ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಯ ಮೇಲೆ ಸಾಲ ನೀಡುತ್ತವೆ. ಮೊದಲನೆ ವ್ಯಕ್ತಿಗೆ ಕೊಟ್ಟ ಸಾಲವು ಪುನಃ ಬ್ಯಾಂಕಿಗೆ ಬಂದಾಗ, ಅದರಲ್ಲಿ ಸ್ವಲ್ಪ ಉಳಿಸಿಕೊಂಡು ಇನ್ನು ಉಳಿದ ಭಾಗವನ್ನು ಮತ್ತೆ ಬೇರೆಯವರಿಗೆ ಸಾಲ ನೀಡುತ್ತದೆ. ಹಾಗಾಗಿ ೧೦೦೦ ರೂಪಾಯಿಗಳ ಸಾಲವು ಪುನಃ ಬ್ಯಾಂಕಿಗೆ ಬರುತ್ತದೆ. ಅದರಲ್ಲಿ ಸ್ವಲ್ಪ (ಅಂದರೆ ೧೦%) ಬ್ಯಾಂಕು ತನ್ನಲ್ಲಿ ಉಳಿಸಿಕೊಂಡು ಉಲಿದ ೯೦೦ ರೂಗಳನ್ನು ಬ್ಯಾಂಕು ಎರಡನೆ  ವ್ಯಕ್ತಿಗೆ ಸಾಲ ನೀಡುತ್ತದೆ. ಹಾಗಾಗಿ ವ್ಯಸ್ತೆಯಲ್ಲಿ ಒಟ್ಟು ೧೯೦೦ ರೂಪಾಯಿಗಳು ಹುಟ್ಟುತ್ತದೆ. ಅದರಲ್ಲಿ ಕಾಣಿಸುವ ೧೦೦೦ ರೂಪಾಯಿ ಮತ್ತು ಹುಟ್ಟಿದ ೯೦೦ ರೂಪಾಯಿಗಳು. ಹಾಗಾಗಿ ಮೊದಲನೆ ವ್ಯಕ್ತಿ ತನ್ನ ಸಾಲವನ್ನು ತೀರಿಸಲು ಸಾಧ್ಯ. ಹಣ ಹುಟ್ಟು ಹಾಕುವ ಈ ಪ್ರಕ್ರಿಯೆ ನಿರಂತರ ಮತ್ತು ಕೊನೆಯಿಲ್ಲದ್ದು. ಹಣ ಹುಟ್ಟುಹಾಕುವ ಈ ಪ್ರಕ್ರಿಯೆ ಸಾಮಾಜಿಕ ದಿವಾಳಿತನಕ್ಕೆ ಕಾರಣವಾಗಿದೆ.

ಬಡ್ಡಿ ಕೇವಲ ಒಂದು ಸರಳವಾದ ವಿಧಾನ. ಬಡ್ಡೀ ಕೇವಲ ವಯ್ಯಕ್ತಿಕ ದಿವಾಳಿತನಕ್ಕೆ ಕಾರಣವಾಗಿದೆ. ಹೀಗೆ ವ್ಯವಸ್ತೆಯಲ್ಲಿ ಅನೇಕ ವಿಧಾನಗಳಿವೆ. ಈ ಅನೇಕ ವಿಧನಗಳು ಯಾವ ಯಾವ ಸಮಸ್ಯೆಗಳಿಗೆ ಕಾರಣವಾಗಿದೆ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet