ಅಂತರಂಗದ ಮಾತು?!

ಅಂತರಂಗದ ಮಾತು?!

  

ಯಾವ ವರ್ತನೆಗಳು
ಕಾರಣವಿಲ್ಲದೆ 
ಆಗುವುದಿಲ್ಲ..
ಎಲ್ಲಾ ವರ್ತನೆಗಳ ಹಿಂದೆ
ಕಾರಣಗಳು ಇರಲೇಬೇಕೆಂದಿಲ್ಲ.
ಆಕಸ್ಮಿಕ ಘಟನೆಗಳಿಗೆ
ಅಗಾದ ಅರ್ಥ ಹುಡುಕುವುದರಲ್ಲಿ ಅರ್ಥವಿಲ್ಲ..
ತಮ್ಮಿಂದಾಗಿ ಇನ್ನೊಬ್ಬರಿಗೆ
ನೋವಾಗಿರಬಹುದೆಂಬ 
ಕಲ್ಪನೆಯನ್ನು ಕಲ್ಪಿಸಲು
ಕೆಲವರಿಗೆ ವ್ಯವಧಾನವಿಲ್ಲದಿರಬಹುದು..
ನಗುವಿನ ಅಲೆಗಳ
ಆಳದಲ್ಲಿ ಕಮರಿಹೋಗಿರುವ 
ಆಸರೆಯಿಂದ ವಂಚಿತರಾಗಿ
ಕಳೆದುಹೋದ ಆರದ ಗಾಯಗಳೆಷ್ಟೋ...
ಆ ನೋವನ್ನು ವ್ಯಕ್ತಪಡಿಸಲು ಹೋದಾಗ
ಪ್ರತಿಸ್ಪಂದನ ಸಿಗದೆ
ಅಥವ ಪ್ರತಿಸ್ಪಂದಿಸದೆ
ತಮ್ಮದೇ ನಿಲುವುಗಳನ್ನು ಹೇರಲು ಹೋಗಿ
ಮಾಡಿರುವ ನೋವುಗಳ
ಕಲ್ಪನೆಯೂ ಕಲ್ಪಿಸದೆ
ತಮ್ಮ ಕಲ್ಪನೆಗಳಲ್ಲೇ ಕಳೆದುಹೋಗಿರುವ
ಕಲ್ಪನೆಗಳ ಸಿದ್ದಾಂತಗಳೇ ultimate 
ಎನ್ನುವ
ಭಾವ ಲಹರಿಯಲ್ಲಿ ವಿಹರಿಸುತ್ತಿರುವವರಿಗೆ
ಲಹರಿಯಾಚೆಯ ನೋವ ತಿಳಿಯುವುದೆಂತು..
ಅವರವರ ಅನುಭವದ ಆಳದ
ಹೇಳಿಕೆಗಳು ಅವರವರಿಗೆ ಸರಿ 
ಎನಿಸುತ್ತದೆ... 
ಆ ಅನುಭವ ಅವರಿಗೆ ಸರಿ ಎನಿಸಿದಾಗ 
ಬಲವಂತದ ಬದಲಾವಣೆಯ ಹೇರಿಕೆಯ
ಅವಶ್ಯಕತೆ ಇದೆಯೇ?
ಸಂಬಂದಗಳ ಉಳಿವಿಗಾಗಿ
ನಾನು ಮೌನದ ಮೊರೆ ಹೊಕ್ಕಿರುವೆ,
ನನಗೆ ಸಿಕ್ಕಿರುವ  ಮುತ್ತಿಗೆ 
ನನಗಿಷ್ಟವಾದಂತ ಹೊಳಪನ್ನು
ನೀಡಲು ಹೋಗಿ
ಅದು ಸಿಕ್ಕಾಗ ಇದ್ದ
ಅದರ ಮೂಲ ಹೊಳಪನ್ನು
ಬದಲಾಯಿಸಿ
ನನ್ನ ವೈಯಕ್ತಿಕ ಹೊಳಪಿನ
ಲೇಪನದಿಂದ ಮೂಲದ
ಸೊಬಗನ್ನು ಅಂದಗೆಡಿಸಲು ಇಷ್ಟವಿಲ್ಲ.
ಅಂದಗೆಡಿಸಲು ಹೋಗಬಾರದಲ್ಲವೇ?
ಕಾರಣ ಗೊತ್ತಲ್ಲ..
ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು

 

Rating
No votes yet

Comments