ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯರಾಜ. ೧೩ ವರ್ಷಗಳ ಹಿಂದೆ ’ಶಿವಸೇನೆ’ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಿಸಿದ್ದರು. ಅವರೇ ಹಾಡಿದೆ ’ಚಿಕ್ಕ ಮಗಳೂರ ಓ ಚಿಕ್ಕಮಲ್ಲಿಗೆ..ಅಕ್ಕರೆಯ ಮಾತು ಬಂದ್ ಹೇಳು ಮೆಲ್ಲಗೇ..’ ಕೂಡ ಉತ್ತಮ ಗೀತೆಯಾಗಿತ್ತು. ಇನ್ನು ಅವರ ಹಳೆಯ ಚಿತ್ರಗಳಾದ ’ಗೀತ’ ಹಾಗು ’ಈ ಬಂಧ ಅನುಬಂಧ (?)(ಅನಿಲ್ ಕಪೂರ್ ನಟಿಸಿರುವ ಚಿತ್ರ) ಗಳಲ್ಲಿಯೂ ಉತ್ತಮ ಗೀತೆಗಳಿವೆ. ಇಷ್ಟು ಒಳ್ಳೆಯ ಹಾಡುಗಳನ್ನು ಕೊಟ್ಟ ಇಳೆಯ ರಾಜ ಇನ್ನು ಮುಂದೆಯೂ ಕೆಲವು ಕನ್ನಡ ಚಿತ್ರಗಳಿಗೆ ಸಂಗೀತ ನೀಡಬಹುದು. ಇಳೆಯರಾಜ ತಮಿಳಿನವರೇ ಇರಬಹುದು. ಆದರೆ ಪ್ರತಿಭೆಗೇಕೆ ಮತ್ಸರ??

ಇನ್ನು ಈ ವಾರ ಬಿಡುಗಡೆಯಾದ ’ಚಂಡ’ ಚಿತ್ರದ ’ನೀ ಚೆಂದನೋ..ನಿನ್ನಾಸೆ ಚೆಂದಾನೊ..’ ಕೂಡ ಚೆನ್ನಾಗಿದೆ. ಯಾರು ಇದರ ಸಂಗೀತ ನಿರ್ದೇಶಕರು?? ಈ ಹಾಡನ್ನು ಹಾಡಿರುವವರು ಕುಮಾರ್ ಶಾನು. ಇವರೇ ಹಿಂದೆ ಹಾಡಿದ ’ದೇವರು ವರವನು ಕೊಟ್ರೆ...’ ಕೂಡ ಬಹಳ ಯಶಸ್ವಿ ಗೀತೆಯಾಗಿತ್ತು.

ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೇ..’ ಕೂಡ ಬಹಳ ಉತ್ತಮ ಗೀತೆ. ಇದನ್ನು ಹಾಡಿದವರು ಸೋನು ನಿಗಮ್ ಎನ್ನಿಸುತ್ತದೆ.

ಇನ್ನು ಮಿಲನ ಚಿತ್ರದ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.

’ನಿನದೇ ನೆನಪು’ ಚಿತ್ರದ ಒಂದೆರಡು ಹಾಡುಗಳೂ ಸುಶ್ರಾವ್ಯವಾಗಿವೆ.

ಒಟ್ಟಿನಲ್ಲಿ ಕನ್ನಡ ಚಲನ ಚಿತ್ರಗೀತೆ ಪ್ರಿಯರಿಗೆ ಇದು ಸುಗ್ಗಿ ಕಾಲ!!.

Rating
No votes yet

Comments