ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಕವನ

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಭಾವನೆಗಳ ಹರಿದುಬಿಡುವುದೇ ಪ್ರೇಮ..

ಪ್ರೀತಿಯ ಅನ್ವೇಷಣೆಯಲ್ಲಿದ್ದ ನನಗೆ 

ಸಿಕ್ಕಿತು ಎಂದೂ ಬತ್ತದ ಪ್ರೀತಿಯ ಸೆಲೆ..

 

ಚಂಚಲ ಮನಸಿನಿಂದ ಕೂಡಿದ್ದ ನನಗೆ

ಮೊದಲ ನೋಟದಲ್ಲೇ ಇಷ್ಟವಾಗಿಬಿಟ್ಟೆ ನೀ

ತಿರಸ್ಕರಿಸಲು ಕಾರಣವಿರಲಿಲ್ಲ ನನ್ನೊಳಗೆ

ಮೋಹಿತನಾಗಿಬಿಟ್ಟಿದ್ದೆ  ನಿನ್ನ ಕಣ್ಣೋಟಕ್ಕೆ..

 

ಮಗುವಂತ ಮುದ್ದಾದ ಮನಸಿನ

ಮುಗ್ಧತೆಗೆ ಮಾರು ಹೋಗಿರುವೆನು ನಾ..

ಕವಿಯಾದರೂ ನಾ ಪದಗಳ ಕೊರತೆ

ಉಂಟಾಗಿದೆ ನಿನ್ನ ವರ್ಣಿಸಲು

Comments