ಸಂಪದ ಹಾಗು ನೀವು

ಸಂಪದ ಹಾಗು ನೀವು

ಈಗಷ್ಟೆ ಮಂಗಳೂರು ತಲುಪಿದೆ.

ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ.

 

ಸಂಪದ ಹೇಗೆ ಪ್ರಾರಂಭವಾಯಿತು? ಕನ್ನಡ ಯುವಜನರ ಸಮುದಾಯ ಇಲ್ಲಿ ಕೂಡಿಕೊಂಡದ್ದು ಹೇಗೆ? ಎಂಬುದರ ಸುತ್ತ ನಾಳೆ ಮಾತನಾಡುವವನಿದ್ದೇನೆ.

 

ಮುಂಚಿನಿಂದಲೂ ಸಂಪದ ಇಲ್ಲಿ ಪಾಲ್ಗೊಂಡ ಸದಸ್ಯರ ಸಮೂಹದ ಆಸಕ್ತಿಗೆ ಅನುಗುಣವಾಗಿ ರೂಪುಗೊಳ್ಳುತ್ತ ಬಂದಿದೆ. ಸಂಪದ ಇಷ್ಟು ದೊಡ್ಡದಾಗುವಲ್ಲಿ ನಿರಂತರ ಅದನ್ನು ಉಳಿಸಿ, ನಡೆಸಿಕೊಂಡು ಬಂದದ್ದು ಪೂರಕವಾದರೂ ಅದರ ಜೊತೆ ಇದರಲ್ಲಿ ಪಾಲ್ಗೊಂಡವರ ಪಾತ್ರ ಕೂಡ ದೊಡ್ಡದು.

 

ಇದರಲ್ಲಿ ಪಾಲ್ಗೊಂಡವರು, ಪಾಲ್ಗೊಳ್ಳುತ್ತಿರುವವರು ನೀವುಗಳು. ಹೀಗಾಗಿ ನಿಮ್ಮಿಂದಲೇ ಈ ಕೆಳಗಿನ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕೇಳಿ ಪಡೆಯಬಹುದೆ?

 

ಅ) ಸಂಪದವನ್ನು ನೀವು ಹೇಗೆ ಬಳಸಿಕೊಳ್ಳುತ್ತಿದ್ದೀರಿ? (ನಿಮ್ಮ ಬರವಣಿಗೆಯ ಹವ್ಯಾಸಕ್ಕೆ ಇದು ವೇದಿಕೆ ನೀಡಿದೆಯೆ? ನಿಮ್ಮ ನಿತ್ಯದ ಕೆಲಸದ ನಡುವೆ ಒಂದಷ್ಟೊತ್ತು ಬಿಡುವಿನ ಸಮಯದ ಓದಿಗೆ ಸಂಪದ ಪೂರಕವಾಗಿದೆಯೆ? - ನಿಮ್ಮದೇ ಆದ ಅನುಭವ ಹಂಚಿಕೊಂಡಲ್ಲಿ ಉತ್ತಮ)

 

ಆ) ಹೊಸ ಅಂತರ್ಜಾಲ ಮಾಧ್ಯಮಗಳ ನಡುವೆ ಸ್ವದೇಶಿ ಪ್ರಯತ್ನಗಳು (ಸಂಪದವೇ ಆಗಿರಬೇಕಿಲ್ಲ) ನಿಮ್ಮ ಮೇಲೆ ಎಷ್ಟು ಪರಿಣಾಮ ಬೀರಿದೆ? ಇವುಗಳನ್ನು ನೀವು ಹೇಗೆ ಬಳಸಿಕೊಳ್ಳುತ್ತಿದ್ದೀರಿ?

 

(ಪ್ರತಿಕ್ರಿಯೆ ಉದ್ದವಾದರೂ ಅಡ್ಡಿಯಿಲ್ಲ)

 

- ಹರಿ ಪ್ರಸಾದ್ ನಾಡಿಗ್

Rating
No votes yet

Comments