ಉತ್ತರ ಕರ್ನಾಟಕದ ಕಟಿರೊಟ್ಟಿ

ಉತ್ತರ ಕರ್ನಾಟಕದ ಕಟಿರೊಟ್ಟಿ

 

ಉತ್ತರ ಕರ್ನಾಟಕದ ಭಾಷೆಯಂತೆಯೇ ಅಲ್ಲಿಯ ಊಟವೂ ವೈಷಿಷ್ಟವಾದುದು. ಇಲ್ಲಿಯ ವೈವಿಧ್ಯತೆಗೆ ಮಿತಿ ಇಲ್ಲ.
ಊರಿನಲ್ಲಿ ನಡೆಯುವ ಕಾರಣಗಳಲ್ಲಿ ಊಟದ ನೋಟವೇ ಬಲು ಚಂದ. ಊಟ ಬಲು ಆನಂದ.
ಮದುವೆ,ಮುಂಜಿ,ನಾಮಕರಣ, ಕುಬುಸ (ಸೀಮಂತ) ಇತ್ಯಾದಿ ಸಂಭ್ರಮದ ದಿನಗಳಿಗೆ ಇಲ್ಲಿ ಕಾರಣಗಳು ಎನ್ನುತ್ತರೆ. 'ನಮ್ಮ ಮನಿಯ ಕಾರಣಕ್ಕೆ ,ಬಿನ್ನ ಕೊಡಲಿಕ್ಕೆ ಬಂದೀನಿ' ಎಂದು ನಿಮ್ಮ ನೆರೆಯಾತ ಹೇಳಿದರೆ ಆತ ತನ್ನ ಮನೆಯಲ್ಲಿ ಏನೋ ಕಾರ್ಯಕೃಮ ಇಟ್ಟುಕೊಂಡಿದ್ದು ಊಟಕ್ಕೆ ನಿಮ್ಮನ್ನು ಅಹ್ವಾನಿಸುತ್ತಿದ್ದಾನೆ(ಬಿನ್ನವಿಸಿಕೊಳ್ಳುತಿದ್ದಾನೆ?) ಎಂದು ತಿಳಿದುಕೊಳ್ಳಬೇಕು.

ಇಲ್ಲಿ ಭೋಜನ ಎಂದರೆ ಹೊಟ್ಟೆ ತುಂಬಲೇ ಬೇಕು. ಕಾಟಾಚಾರಕ್ಕೆ ಊಟವಲ್ಲ.ಕೆಲವರ್ಷಗಳ ಮೊದಲು
ಊಟದಲ್ಲಿ ಬಹು ಬಗೆ ಇರಲಿಲ್ಲ. ಬಡವರ ಮನೆಯಲ್ಲಾದರೆ ಹೊಟ್ಟೆ ತುಂಬುವಷ್ಟು ಗೋದಿಹುಗ್ಗಿ,
ಹೊಟ್ಟೆ ತುಂಬಿದಮೇಲೋಂದಿಷ್ಟು ಅನ್ನ.(ಇಲ್ಲಿ ಅನ್ನವು ದಿನನಿತ್ಯದ ತಿನಿಸು
ಅಲ್ಲ.)ಅದಕ್ಕೆ ಜೊತೆಯಾಗಿ ಗಂಗಾಳ (ಪ್ಲೇಟ್) ದಲ್ಲಿ ಹಿಡಿಯುವಷ್ಟು ಆಮ್ರ
(ಬೀಳ್ಳುಳ್ಳಿ, ಶುಂಠಿ, ಮೆಣಸಿನಕಾಯಿಗಳನ್ನು ಇತಿಮಿತಿಯಿಲ್ಲದೇ ಹಾಕಿ ರುಚಿಗೆ
ತಕ್ಕಷ್ಟು ಉಪ್ಪು ಸೇರಿಸಿ ಮಾಡಿದ ಕಟ್ಟಿನ ಸಾರು /ತಿಳಿಸಾರು)ಇದ್ದರೆ ಮುಗಿಯಿತು. ದವಳವರ / ಉಳ್ಳವರ
(ಸಿರಿವಂತರ) ಮನೆಗಳಲ್ಲಿ ಹೊಟ್ಟೆತುಂಬ ಹೋಳಿಗೆ ಅಥವಾ ಬೋಂದಿಕಾಳು ಇರುತ್ತಿದ್ದವು.ಈಗ
ಮನಸ್ಥಿತಿ ಬದಲಾಗಿದೆ. ಸಿಹಿಯ ಜಾಗವನ್ನು ಖಾರವು ಆಕೃಮಿಸಿಕೊಂಡಿದೆ.ಬಡವರ ಮನೆಯಲ್ಲಾದರೆ
ಮೊಳಕೆಕಟ್ಟಿದ ಕಾಳಿನ ಪಲ್ಯ,ಕಾರೆಳ್ಳು ಹಾಕಿದ ಬದನೇಕಾಯಿ ಪಲ್ಯ ಆಮೇಲೆ ಮಾಮೂಲಾಗಿ
ಅನ್ನಾ ಆಮ್ರ.ಹೆಸರಿಗೊಂದು ಸ್ವೀಟು. ಸಾಹುಕಾರನಮನೆಯಲ್ಲಿ (ಯಾರು ಯಾವಾಗಲೂ ಶುಬ್ರವಾದ ಬಿಳಿ ಧೋತರ ಉಡುತ್ತಾರೆಯೋ ಅವರೆಲ್ಲಾ ಸಾಹುಕಾರಗಳೇ) ಘಟ್ಟಿ ಪೀಟಲಾ (ಕಡಲೇಹಿಟ್ಟು ಉಪಯೋಗಿಸಿಮಾಡಿದ ವ್ಯಂಜನ), ಮಿರ್ಚಿಭಜಿ, ಕಾಂದಾಬಜಿ, ಶೇಂಗಾಹಿಂಡಿ, ಗೂರೆಳ್ಲುಚಟ್ನು, ಹಲವುಬಗೆಯ ಉಪ್ಪಿನಕಾಯಿಗಳು ಪಚಡಿ((ಸಲಾಡ) ಹಾಗೂ ಮಟರ್‍ಪನೀರ್, ಪಾಲಕ್‍ಪನೀರ್,ಭೇಡಿಮಸಾಲಾ ಇತ್ಯಾದಿಗಳಜೊತೆಗೆ ಘಟ್ಟಿ ಮೊಸರು ಬೆಣ್ಣೆಗಳೂ ಇರಬಹುದು. ಇವುಗಳು
ಸೈಡ್ಸ್. ನಿಜವಾದ ಮೇನ್ ಪುಡ್ ಬೇರೆಯೇ ಇದೆ.ಕಟಿರೊಟ್ಟಿ ಮತ್ತು ಬಿಸಿಬಿಸಿ ಚಪಾತಿ ಅಥವಾ
ಪೂರಿ ಇಲ್ಲಿಯ ಮೇನ್ ಪುಡ್. ಕಟಿರೊಟ್ಟಿಯನ್ನು ಮೊದಲೇ ತಯಾರಿಸಿ
ಇಟ್ಟುಕೊಳ್ಳಬಹುದು.ಮಾರುಕಟ್ಟೆಯಲ್ಲೂ ಅದು ದೊರಕುತ್ತದೆ. ಆದರೆ ಹೋಳಿಗೆ ಚಪಾತಿ
ಪೂರಿಗಳು ಬಿಸಿ ಬಿಸಿಯಾಗಿಯೇ ಇರಬೇಕು.

ಒಟ್ಟಿಗೆ
ಊಟಕ್ಕೆ ಕುಳಿತ ಅಥವಾ ನಿಂತ( ಬಫೆ ಊಟ) ನೂರಾರು ಮಂದಿಗೆ ಹೀಗೆ ಬಿಸಿ ಬಿಸಿ ತಯಾರಿಸಿ
ಬಡಿಸುವುದು ಸಿಲಭದ ಕೆಲಸವಲ್ಲ. ಹಳ್ಳಿಗಳಲ್ಲಿ ಕಾರ್ಯಕರ್ತರು ಸದಾ
ಸಿದ್ದವಾಗಿರುತ್ತಾರೆ.(ಫೋಟೋ ನೋಡಿ)ನಗರದಲ್ಲಾದರೆ ಅಡಿಗೆ ಕೂಲಿಗ್ಗಳೂ ಸಿಗುತ್ತಾರೆ.
ಫೋಟೋಗಳನ್ನು
ನೋಡಿ, ಚಪಾತಿ ಹಾಗೂ ಅದನ್ನ ಮಾಡುವ ಹಂಚಿನ ಗಾತ್ರವನ್ನು ಗಮನಿಸಿ, ಇಷ್ಟು ದೊಡ್ಡ
ಚಪಾತಿಯನ್ನು ಹೇಗೆ ತಿನ್ನುವುದಪ್ಪಾ ಎಂದು ದಡ್ಡ ಪ್ರಶ್ನೆಯನ್ನು ಕೇಳಬೇಡಿರಿ,
ಬಡಿಸುವಾಗ ಇದನ್ನು ಚೂರು ಚೂರು ಮಾಡಿಯೇ ಗಡಿಸುತ್ತಾರೆ. ಒಂದು ಚಪಾತಿಯನ್ನು ೪ / ೮ /೧೬
ಅಥವಾ ಆದರ ಎರಡರಷ್ಟು ಭಾಗಮಾಡಿ ಬಡಿಸುತ್ತಾರೆ..ಅಳತೆ ಪಟ್ಟಿ ಹಿಡಿದುಕತ್ತರಿಸಿದಂತೆ
ನೀಟಾಗಿ ಇದು ಇರುತ್ತದೆ. ಬಫೆಗಳಲ್ಲಿ ಇದನ್ನು ಆಕರ್ಶಕವಾಗಿ ಒಪ್ಪ ಓರಣವಾಗಿ
ಜೋಡಿಸಿರುತ್ತಾರೆ. ಕುಳಿತು ಊಟ ಮಾಡುವವರಿಗೆ ಬೇಡಿದಷ್ಟು ನೀಡುತ್ತಾರೆ (ಕೇಳಿದಷ್ಟು ಬಡಿಸುತ್ತಾರೆ.) ಭಾವಿಸಿ ನೋಡಿ. ಚಪಾತಿ ಲಟ್ಟಸಲು ಲಟ್ಟಣಿಗೆ ಸಾಕಾಗದೆಂದು ಪಿ.ವಿ.ಸಿ. ಪೈಪನ್ನು ಬಳಸುತ್ತಿದ್ದಾರೆ. ಪೋಳ್‍ಪಾಟ್

(ಲಟ್ಟಿಸುವ ಮಣೆ) ಬದಲು ದೊಡ್ಡ ಡಬರಿಯ ಮುಚ್ಚಳವನ್ನು ಬಳಸುತ್ತಿದ್ದಾರೆ.

ಅಲ್ಲೇ ಸ್ವಲ್ಪ ಬಗ್ಗಿ ಉರಿಯುತ್ತಿರುವ ಸೌದೆ ಒಲೆಯನ್ನು ನೋಡಿ- ಹರಿಶ್ಚಂದ್ರ ಘಾಟಿನ ಚಿತಾಗಾರ ನೆನಪಿಗೆ ಬರುತ್ತಿದೆಯಾ?

Rating
No votes yet

Comments