ಮೋಡಗಳು
ನಿತ್ಯ ಬಿಡುವು ಇಲ್ಲದಷ್ಟು ಕೆಲಸದ ನಡುವೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದಷ್ಟು ಹೊತ್ತು ಒಮ್ಮೆಲೇ ಎಲ್ಲವೂ ನಿಂತು, ಸಮಯ ಹಿಡಿದಿಟ್ಟಂತೆ ಭಾಸವಾಗುವುದುಂಟು. ಆ ಸಮಯ ಏನೋ ಒಂದಷ್ಟು ಮನಸ್ಸಿಗೆ ತಟ್ಟನೆ ಬಂದು ಮಾಯವಾಗುವುದು. ಇವುಗಳಲ್ಲಿ ನೆನಪುಗಳೇ ಹೆಚ್ಚಿನವು. ಸುಮಾರು ಹತ್ತು ವರ್ಷಗಳ ಹಿಂದೆ ಮಾಮ ಪುಣೆಯಿಂದ ನನಗಾಗಿಯೇ ಕಳುಹಿಸಿಕೊಟ್ಟಿದ್ದ ಮೋಡಗಳ ಚಿತ್ರಗಳನ್ನುಳ್ಳ ಕ್ಯಾಲೆಂಡರ್. ಜಗತ್ತಿನ ವಿವಿಧ ರೀತಿಯ ವಿಶೇಷ ಮೋಡಗಳ ಚಿತ್ರಗಳು, ಅವುಗಳ ಕುರಿತು ವೈಜ್ಞಾನಿಕ ಮಾಹಿತಿ ಆ ಕ್ಯಾಲೆಂಡರಿನಲ್ಲಿತ್ತು. ಉಳಿದಂತೆ, ನೆನಪಿನಲ್ಲಿ ಅಚ್ಚಾದಂತಿರುವ ಶಿವಮೊಗ್ಗದ ಮಳೆ ಹಿಡಿದ ಮೋಡಗಳು, ದುರ್ಗದ ಖಾಲಿ ಆಗಸದ ಮೋಡಗಳು... ಸಮಯವಿದ್ದಾಗ ಏಕಾಂತದಲ್ಲಿ ಮೋಡಗಳನ್ನು ನೋಡುತ್ತ ಕಳೆಯುತ್ತಿದ್ದ ಸಮಯ, ಆಗೊಮ್ಮೆ ಈಗೊಮ್ಮೆ ನೋಡ ಸಿಗುತ್ತಿದ್ದ ವಿಹಂಗಮ ಚಿತ್ರ, ಎಂದೂ ಒಂದೇ ರೀತಿ ಕಾಣದ ಮೋಡಗಳು; ಕೆಲವೊಮ್ಮೆ ಕಾಣದ್ದೂ ಕಾಣಿಸುವ ಮುಗಿಲು - ನೆನಪಿನ ಸುರಿಮಳೆ. ಇಷ್ಟೆಲ್ಲ ಕೆಲಸ, ಒತ್ತಡದ ಜೀವನ ಇವುಗಳತ್ತ ನೋಡಲೂ ಆಗದಷ್ಟು ದೂರ ಮನಸ್ಸನ್ನು ಕೊಂಡೊಯ್ದರೂ ಪ್ರಕೃತಿಯೊಂದಿಗೆ ಸಮಯ ಕಳೆಯಲು ಸಿಕ್ಕ ಕೆಲವೇ ಅವಕಾಶಗಳನ್ನು ಸಾಧ್ಯವಾದಷ್ಟು ಚೆಂದವಾಗಿ ಚಿತ್ರರೂಪದಲ್ಲಿ ಸಂಗ್ರಹಿಸುವ ಖುಷಿ, ಸಾಮರ್ಥ್ಯ ನೀಡಿದೆ.
(ಫೆಬ್ರವರಿ, ೨೦೧೧)
ಚಿತ್ರಗಳು: ಹರಿ ಪ್ರಸಾದ್ ನಾಡಿಗ್
Comments
ಉ: ಮೋಡಗಳು
In reply to ಉ: ಮೋಡಗಳು by kavinagaraj
ಉ: ಮೋಡಗಳು
ಉ: ಮೋಡಗಳು
In reply to ಉ: ಮೋಡಗಳು by gopaljsr
ಉ: ಮೋಡಗಳು
ಉ: ಮೋಡಗಳು
ಉ: ಮೋಡಗಳು
In reply to ಉ: ಮೋಡಗಳು by ಗಣೇಶ
ಉ: ಮೋಡಗಳು
ಉ: ಮೋಡಗಳು
ಉ: ಮೋಡಗಳು