ಗ್ಯಾಸ್ ಟ್ರಬಲ್
ಗ್ಯಾಸ್ ಎಂಬ ಮಹಾನ್ ಧಂದೆ
ಆಹಾರ ಮತ್ತು ಸರಬರಾಜು ಇಲಾಖೆ ಸುಮ್ಮನೆ ಕುಳಿತಿಲ್ಲ ಎಂದು ತೋರಿಸಿಕೊಳ್ಳಲು ಹೊರಟಿದ್ದು ಬಹುತೇಕ ಬೆಂಗಳೂರಿಗರಿಗೆ ಬಿಸಿ ಮುಟ್ಟಿದೆ. ಅದರ ಕುರಿತಾದ ಒಂದು ಸಣ್ಣ ವಿಮರ್ಶೆ.
ಕಳೆದ ವಾರ ಹೆಬ್ಬಾಳದ ಬಳಿಯ ಹೊಟೆಲ್ಲೊಂದರಲ್ಲಿ ನಿಂತಿದ್ದಾಗ ೪ ಸಿಲಿಂಡರ್ಗಳನ್ನು ಇಳಿಸಿದವ ನಮ್ಮ ಮನೆಗೂ ಗ್ಯಾಸ್ ಸಿಲಿಂಡರ್ ಒದಗಿಸುವವನೆ, ಅವನು ಅತ್ತ ಹೋದ ನಂತರ ಹೋಟೆಲ್ನವನನ್ನು ವಿಚಾರಿಸಿದೆ ಎಷ್ಟು ಕೊಡ್ತೀರ ಒಂದು ಸಿಲಿಂಡರ್ಗೆ, ಬಂದ ಉತ್ತರ ೭೦೦ ಕೆಲವೊಮ್ಮೆ ೭೫೦. ಇದೇ ವಿಷಯಕ್ಕೆ ಸ್ನೇಹಿತರೊಡನೆ ಚರ್ಚಿಸುವಾಗ ನೆನಪಾದದ್ದು ನಮಗೆ ಸಿಗುವ ಸಿಲಿಂಡರ್ಗಳ ಸಂಖ್ಯೆ. ಮನೆಗೆ ಬಂದು ಅಂಕಿ ಅಂಶಗಳನ್ನು ನೋಡಿದಾಗ ಕಾಣಿಸಿದ ಸತ್ಯ ವರ್ಷಕ್ಕೆ ೯ ಸಿಲಿಂಡರ್. ನನ್ನ ಸ್ನೇಹಿತನ ಮನೆಯಲ್ಲಿ ೭. ಪಕ್ಕದ ಮನೆಯವನಿಗೆ ೮. ನಾನೇ ಅದೃಷ್ಠವಂತ. ಲಭ್ಯವಿರುವ ಸಂಖ್ಯೆ ೧೨ ಪ್ರತಿ ೩೨ ದಿನಗಳಿಗೊಂದರಂತೆ. ಇದು ಹೆಚ್ಪಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರ ಸ್ಪಷ್ಟನೆ.
ಅಲ್ಲಿಗೆ ಸರಾಸರಿ ೪ ಸಿಲಿಂಡರ್ ಏಜೆನ್ಸಿಯವನ ಪಾಲು. ೩೦೦x೪=೧೨೦೦ ರೂ ವರ್ಷಕ್ಕೆ ಒಂದು ಸಕ್ರಮ ಸಂಪರ್ಕದಿಂದ.
ಪ್ರತಿಯೊಂದು ಏಜೆನ್ಸಿಯವನ ಬಳಿ ಕನಿಷ್ಠ ೫೦೦೦ ಸಂಪರ್ಕ ಇರಬಹುದೆಂಬ ಅಂದಾಜು (ಟಿವಿಯಲ್ಲಿ ಶೋಭಾಕರಂದ್ಲಾಜೆಯವರ ಮಾತಿನಂತೆ ೫೦ ಸಾವಿರ ಸಂಪರ್ಕ ಕೂಡ ಇರುವ ಏಜೆನ್ಸಿಗಳಿವೆ)
ಅಲ್ಲಿಗೆ ೫೦೦೦x೧೦೦೦=೫೦,೦೦,೦೦೦ ಪ್ರತಿ ವರ್ಷಕ್ಕೆ ಕನಿಷ್ಠ ಒಂದು ಏಜೆಂಟನಿಗೆ ೫೦ ಲಕ್ಷ ಕಪ್ಪುಹಣ ಶೇಖರಣೆ. ಇದು ಸಕ್ರಮ ಸಂಪರ್ಕದಿಂದ ಬರುವ ಕಪ್ಪುಹಣ.
ಶೋಭಾ ಅವರ ಹೇಳಿಕೆಯಂತೆ ಬೆಂಗಳೂರಿನಲ್ಲಿ ೪೦ ಲಕ್ಷ ಅಕ್ರಮ ಸಂಪರ್ಕಗಳಿವೆ ಅವುಗಳಲ್ಲಿ ಬಹುತೇಕವು ಏಜೆನ್ಸಿಗಳೆ ಸೃಷ್ಸಿಕೊಂಡವು.
೪೦ ಲಕ್ಷx೨೦೦ ರೂಗಳು ತಿಂಗಳಿಗೆ ೮೦ ಕೋಟಿ ಕಪ್ಪುಹಣ ಬೆಂಗಳೂರಿನಲ್ಲೊಂದರಲ್ಲೆ.
ಇದರಲ್ಲಿ ಗ್ಯಾಸ್ ವಿತರಕ ಕಂಪೆನಿಗಳೂ ಶಾಮೀಲಾಗಿರುವ ಶಂಕೆಯೂ ಇದೆ. ಇಲ್ಲದಿದ್ದರೆ ಒಂದು ಸಣ್ಣ ಮಾರ್ಪಾಡಿನಿಂದ ಇಡೀ ವ್ಯವಸ್ಥೆಯನ್ನು ಸರಿ ಪಡಿಸಬಹುದು.
ಇಂಡೇನ್, ಹೆಚ್ ಪಿ ಮತ್ತು ಬಿ ಪಿ ವಿತರಕ ಕಂಪೆನಿಗಳು ನೇರವಾಗಿ ಸಿಲಿಂಡರ್ ಬುಕ್ (ಕೇಂದ್ರಿಕೃತ ದೂರವಾಣಿ ಮೂಲಕ)ಮಾಡಿಕೊಂಡು ಗ್ರಾಹಕನಿಗೆ ಸಿಲಿಂಡರ್ ಸಿಗುವ ದಿನಾಂಕವನ್ನು ಆಗಲೆ ಪ್ರಕಟಿಸಬೇಕು. ನಂತರ ಏಜೆಂಟರುಗಳ ಮೂಲಕ ಅದನ್ನು ಸರಬರಾಜು ಮಾಡಿದರೆ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಕಾಣಬಹುದು.
ನೀವೇನಂತೀರಿ?
Comments
ಉ: ಗ್ಯಾಸ್ ಟ್ರಬಲ್
In reply to ಉ: ಗ್ಯಾಸ್ ಟ್ರಬಲ್ by asuhegde
ಉ: ಗ್ಯಾಸ್ ಟ್ರಬಲ್
In reply to ಉ: ಗ್ಯಾಸ್ ಟ್ರಬಲ್ by raghumuliya
ಉ: ಗ್ಯಾಸ್ ಟ್ರಬಲ್
ಉ: ಗ್ಯಾಸ್ ಟ್ರಬಲ್
ಉ: ಗ್ಯಾಸ್ ಟ್ರಬಲ್
ಉ: ಗ್ಯಾಸ್ ಟ್ರಬಲ್