ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್
ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ.
೨೦೦೫-೦೬ನೆಯ ಸಾಲಿನ ರಣಜಿ ಟ್ರೋಫಿ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೪ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿತು. ಆ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳು ಬೆಂಗಳೂರಿನಲ್ಲಿ ಮತ್ತು ಒಂದು ಪಂದ್ಯ ಬೆಂಗಳೂರಿನಿಂದ ಬಹಳಷ್ಟು ದೂರವಿರುವ ಮೈಸೂರಿನಲ್ಲಿ ನಡೆಯಿತು. ಹೋದ ಸಾರೆಯ ಅಂದರೆ ೨೦೦೬-೦೭ನೆಯ ಸಾಲಿನ ಸುಪರ್ ಲೀಗಿನ ಸೆಮಿ ಫೈನಲ್ ಹಂತದವರೆಗೂ ಮುಟ್ಟಿದ ಕರ್ನಾಟಕದ ತಂಡ ಒಟ್ಟು ಎಂಟು ಪಂದ್ಯಗಳನ್ನಾಡಿತು, ಅದರಲ್ಲಿ ಕೇವಲ ಎರಡು ಪಂದ್ಯಗಳು ತವರಿನ ಅಂಗಳದಲ್ಲಿ ನಡೆಸುವ ಯೋಗ ಕರ್ನಾಟಕಕ್ಕಿತ್ತು. ಆ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಬೆಂಗಳೂರಿನಲ್ಲೂ ಮತ್ತೊಂದು ಪಂದ್ಯ ಮೈಸೂರಿನಲ್ಲಿ ನಡೆಯಿತು. ಇದೇ ಸಾಲಿನಲ್ಲಿ ಮಹಾರಾಷ್ಟ್ರ ತಂಡ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೫ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಮಹಾರಾಷ್ಟ್ರಕ್ಕೆ ಸಿಕ್ಕಿತು. ಆ ಐದರಲ್ಲಿ ಒಂದೂ ಪಂದ್ಯವೂ ಕೂಡ ಮಹಾರಾಷ್ಟ್ರ ಕ್ರಿಕೆಟನ ಕೇಂದ್ರ ಸ್ಥಾನವಾದ ಪುಣೆಯಲ್ಲಿ ನಡೆಯಲಿಲ್ಲ. ಪಂದ್ಯಗಳು ಕರಾಡ, ರತ್ನಾಗಿರಿ, ನಾಸಿಕ್ ಮತ್ತು ಕೊಲ್ಹಾಪುರಗಳಲ್ಲಿ ನಡೆದವು. ಇದರ ಹಿಂದಿನ ವರ್ಷ ಅಂದರೆ ೨೦೦೫-೦೬ನೆಯ ಸಾಲಿನಲ್ಲಿ ಕೂಡ ಪಂದ್ಯಗಳು ನಾಸಿಕ್ ಮತ್ತು ಕೊಲ್ಹಾಪುರಗಳಲ್ಲಿ ನಡೆದವು. ಇದರಿಂದ ರಾಜ್ಯದ ಮೂಲೆಗಳ ಜನರಿಗೆ ಒಳ್ಳೆಯ ದರ್ಜೆಯ ಕ್ರಿಕೆಟ ಪಂದ್ಯಗಳನ್ನು ಖುದ್ದಾಗಿ ನೋಡುವ ಅವಕಾಶ ಸಿಕ್ಕಿತು, ಕ್ರಿಕೆಟ್ ಸಂಸ್ಥೆಗೆ ಒಳ್ಳೆಯ ದುಡ್ಡು ಸಿಕ್ಕಿತು ಮತ್ತು ಪಂದ್ಯಗಳನ್ನು ಸರಿಯಾದ ಅರ್ಥದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಆಡಲಾಯಿತು, ಬರೀ ಒಂದೆರಡು ನಗರಗಳಲ್ಲಲ್ಲ. ಬೆಂಗಳೂರು ಮತ್ತು ಮೈಸೂರನ್ನು ಹೊರತುಪಡಿಸಿ ನಡೆದ ಕೊನೆಯ ಪಂದ್ಯ ನವ್ಹೆಂಬರ ೧೫-೧೮, ೨೦೦೦ದಲ್ಲಿ ಬೆಳಗಾವಿಯಲ್ಲಿ ಆಂಧ್ರದ ವಿರುದ್ಧ ನಡೆದಿತ್ತು.
ಇವೆಲ್ಲವನ್ನೂ ಅವಲೋಕಿಸಿದಾಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹೆಸರನ್ನೇಕೆ ಬದಲಾಯಿಸಿ ಬೆಂಗಳೂರು ಕ್ರಿಕೆಟ್ ಸಂಸ್ಥೆ ಎಂತಿಡಬಾರದು? ಬೇರೆ ರಾಜ್ಯಗಳು ಪಂದ್ಯಗಳನ್ನೂ ಹೊಸ ಹೊಸ ಕ್ರೀಡಾಂಗಣಗಳಲ್ಲಿ ತಮ್ಮ ರಾಜ್ಯದ ಮೂಲೆ ಮೂಲೆಯಲ್ಲಿ ಆಡಿಸುತ್ತಿವೆ, ಕರ್ನಾಟಕದಲ್ಲಿ ಏಕೆ ಅಂತಹ ಪ್ರಯತ್ನವಾಗುತ್ತಿಲ್ಲ. ಇದಕ್ಕೇನೂ ಅಸಡ್ಢೆಯೆನಬೇಕೋ ಅಥವಾ ತಾರತಮ್ಯವೆನಬೇಕೋ ಗೊತ್ತಿಲ್ಲ. ಸರಕಾರದಿಂದ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಪ್ರಾದೇಶಿಕ ಅಸಮಾನತೆಯಂತೂ ಗೊತ್ತಿರುವ ವಿಷಯ ಇದನ್ನೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡೆಯಲ್ಲೂ ಬೆಳೆಸಿ ತಾನೇನೂ ಸರಕಾರಕ್ಕಿಂತ ಕಡೆಮೆಯಿಲ್ಲ ಎಂದು ತೋರಿಸಿಕೊಡವ ಪ್ರಯತ್ನ ಮಾಡುತ್ತಿದೇಯೋ ಹೇಗೆ?
Comments
ಉ: ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್