some-ಮೇಳನ

some-ಮೇಳನ

ಅಚ್ಚಕನ್ನಡದಲ್ಲಿ ಮಾತಾಡ್ಬೇಕು
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,

ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"

***

ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು ಮತ್ತು ಧೂಳು!
 

***

ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!

--ಶ್ರೀ
(೬-ಫೆಬ್ರವರಿ-೨೦೧೧)

Rating
No votes yet

Comments