ಕಣ್ಣೀರೆಂಬುದು ಕಣ್ಣೀರಲ್ಲ

ಕಣ್ಣೀರೆಂಬುದು ಕಣ್ಣೀರಲ್ಲ

ಕವನ

ಕಣ್ಣೀರೆಂಬುದು ಕಣ್ಣೀರಲ್ಲ
ಸ೦ತಾಪದ ಬಿಸಿ ಎನಲ್ಲ
ಮನಸಿನ ಗಾಯವ ವಾಸಿಯ ಮಾಡಲು
ಹರಿಯುವ ಸ೦ತುಲ ಧಾರೆಯದು

ಅಳುವೆ೦ಬುವುದದು ಮಾ೦ತ್ರಿಕ ಸಾಧನ
ತೊಳಲಾಟಗಳನು ತಣಿಸಲಿಕೆ
ಹ್ರದಯದ ಭಾರವ ಇಳಿಸಲಿಕೆ
ಕಲ್ಮಶಗಳನೆಲ್ಲ ತೊಳೆಯಲಿಕೆ

ಕಣ್ಣಲಿ ಕೂತಿಹ ಕಾಣದ ಪರದೆಯ
ಹರಿಯಲಿಕಿರುವ ರುದ್ರ ಜಲ
ಹರಿಯದ ಮಾತ್ರಕೆ ಲೊಕವು ಕಾಣದು
ದಾರಿಯ ತೊರುವ ಶುಭ್ರ ಜಲ
ಹಗುರವಗಿಸುವ ಜೀವ ಜಲ

Comments