ಕನಸಿನ ಹಗಲು ಕಾಟ
ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ.
ಈಗ ನೋಡಿ ಇಲ್ಲಿ ಬೆಳಿಗ್ಗೆ ಕೆಲಸದವರ ಜತೆ ಕಾಫಿ ಕುಡಿಯುವಾಗ ಪಕ್ಕದಲ್ಲೇ ಕೂತು ನಗತ್ತೆ. ಏನೆಂದು ಪರಿಚಯಿಸಲಿ? ಹುಚ್ಚ ಎಂದುಕೊಳ್ಳುವುದಿಲ್ಲವೆ? ಅಥವಾ ಅದು ಇಲ್ಲವೇ ಇಲ್ಲ ಎಂಬಂತೆ ನಟಿಸಲೇ? ನನಗೆ ಗೊತ್ತಿಲ್ಲ ಯಾರ ಕನಸೋ ಇದು ಎಂಬಂತೆ ಇರಬಹುದು. ಆದರೆ, ನನ್ನ ಮಗುವನ್ನೇ ನಾನು ನನ್ನದಲ್ಲ ಎಂದಂತಲ್ಲವೆ ಅದು?
ನಾಳೆ ನಾನು ಕಣ್ಣಿನ ಡಾಕ್ಟರ್ ಬಳಿ ಹೋಗಬೇಕು. ಆಗ ಇದು ನನ್ನ ಜತೆ ಬಂದರೆ ಏನು ಮಾಡುವುದು? ಹುಚ್ಚರ ಡಾಕ್ಟರ್ ಹತ್ತಿರ ಹೋಗುವ ಬದಲು ಇಲ್ಲಿ ಬಂದಿದ್ದೀಯ ಅಂತ ಅವರು ಕೇಳಿಬಿಟ್ಟರೆ? ನನಗಂತೂ ಕಪಾಳಕ್ಕೆ ಹೊಡೆಯುವಂಥ ಸಿಟ್ಟು ಬಂದೀತು. ಅಲ್ಲದೆ ಅದನ್ನು ನನ್ನ ಕೆಲಸಗಳ ನಡುವೆ, ಪರಿಚಯದವರ ನಡುವೆ ಸಂಭಾಳಿಸುವಷ್ಟರಲ್ಲಿ ಸಾಕು ಸಾಕಾಗುತ್ತದೆ. ನಿಜ ಹೇಳಬೇಕೆಂದರೆ, ಮಧ್ಯಾಹ್ನದ ಹೊತ್ತಿಗೇ ನಿದ್ದೆ ಬರುವಷ್ಟು ಸುಸ್ತಾಗುತ್ತೇನೆ.
ಈಗ ನಾನು ಕೇಳುತ್ತಿರುವುದು ಇಷ್ಟು. ಇಲ್ಲಿ ಉಳಿದವರಿಗೆ ಯಾರಿಗಾದರೂ ಈ ರೀತಿಯ ತೊಂದರೆ ಆಗಿದೆಯ? ಆಗ ಏನು ಮಾಡುತ್ತೀರಿ? ಕಾಟ ಕೊಡದ ಹಾಗೆ ಈ ಕನಸುಗಳನ್ನು ಎಲ್ಲಿಗಾದರೂ ಬಿಟ್ಟು ಬರಲು ಸಾಧ್ಯವ? ಮಕ್ಕಳನ್ನು ನೋಡಿಕೊಳ್ಳಲು ಇರುವಂತ ಯಾವುದಾದರೂ ಜಾಗ ಕನಸುಗಳನ್ನು ಬಿಡಲು ಇದೆಯೆ? ಮತ್ತೆ ಸಂಜೆ ಮನೆಗೆ ಹೋಗುವಾಗ ತಪ್ಪದೆ ಕರೆದೊಯ್ಯುತ್ತೇನೆ.
ಅವಿಲ್ಲದಿದ್ದರೆ ನನಗೆ ನಿದ್ದೆ ಬರುವುದಿಲ್ಲ...
Comments
ಉ: ಕನಸಿನ ಹಗಲು ಕಾಟ
In reply to ಉ: ಕನಸಿನ ಹಗಲು ಕಾಟ by Vasanth Kaje
ಉ: ಕನಸಿನ ಹಗಲು ಕಾಟ
In reply to ಉ: ಕನಸಿನ ಹಗಲು ಕಾಟ by naasomeswara
ಉ: ಕನಸಿನ ಹಗಲು ಕಾಟ
In reply to ಉ: ಕನಸಿನ ಹಗಲು ಕಾಟ by ವೈಭವ
ಉ: ಕನಸಿನ ಹಗಲು ಕಾಟ
In reply to ಉ: ಕನಸಿನ ಹಗಲು ಕಾಟ by naasomeswara
ಉ: ಕನಸಿನ ಹಗಲು ಕಾಟ
In reply to ಉ: ಕನಸಿನ ಹಗಲು ಕಾಟ by shreekant.mishrikoti
ಉ: ಕನಸಿನ ಹಗಲು ಕಾಟ
ಉ: ಕನಸಿನ ಹಗಲು ಕಾಟ