ಹಬ್ಬಿತು ಕನ್ನಡ ಸೊ೦ಪಲಿ
ನಾಡದೇವಿಯ ಪೂಜೆಗೈಯಲು
ಕರವ ಜೋಡಿಸಿ ಭಜಕರು
ದೇಗುಲದ ರಥವನ್ನು ಸೊಗಯಿಸಿ
ಎಳೆದು ತರುತಿಹರೆಲ್ಲರು IIನಾಡII
ದಿಟ್ಟ ನುಡಿಗಳ ಕೋಶ ಹೊಸೆದಿಹ
ಶತಕದ೦ಚಿನ "ಜೀವಿ" ಗೆ
ಕಟ್ಟಿ ನಾಯಕಪಟ್ಟ ಪೊಗಳಿರೆ
ಪುಷ್ಪಗುಚ್ಛವನೀಯುತ
ದಿಟ್ಟಿಯಾಗದ ತೆರದಿ ಕಾಡಿಗೆ
ಬೊಟ್ಟನಿಟ್ಟರು ಸೊಬಗಲಿ
ಗಟ್ಟಿದನಿಯಲಿ ಉಲಿದರೆಳೆಯುತ
ರಥವ ಕನ್ನಡ ಬಾಳಲಿ IIನಾಡII
ಇಳಿದು ಬ೦ದನೊ ಗುಡಿಯ ಬಸವನು
ಕನ್ನಡದ ಸವಿ ಸವಿಯಲು
ಕನ್ನಡದ ಕೋಗಿಲೆಗಳುಲಿಯುವ
ಮಧುರಗಾನವ ಕೇಳಲು
ಬಾನಿನೆತ್ತರ ಹಾರಿಹೊಮ್ಮಿತು
ಕೆ೦ಪು ಧೂಳಿಯ ಮಳೆಯದೊ
ಉದಯರವಿಯನೆ ಮಬ್ಬುಗೊಳಿಸಿತು
ಸಾಹಿತಿಯ ನುಡಿ ಕಿಡಿಯದೊ IIನಾಡII
ಸುತ್ತಮುತ್ತಲು ಮಾರ್ದವಿಸಿತದೊ
ಕನ್ನಡದ ನುಡಿ ಇ೦ಪಲಿ
ಎತ್ತರವ ಬಿತ್ತರಿಸೆ ಅರಳಿತು
ಕನ್ನಡದ ಧ್ವಜ ಸೊ೦ಪಲಿ
ಎತ್ತ ನೋಡಿದರತ್ತ ಕೋರೈ-
-ಸಿತದೊ ಕನ್ನಡ ಪೆ೦ಪಲಿ
ಕತ್ತಲಿನ ಜೊ೦ಪಿನಲು ಹಬ್ಬಿತು
ಸೆಳೆವ ಕನ್ನಡ ಕ೦ಪುಲಿ IIನಾಡII
Comments
ಉ: ಹಬ್ಬಿತು ಕನ್ನಡ ಸೊ೦ಪಲಿ
In reply to ಉ: ಹಬ್ಬಿತು ಕನ್ನಡ ಸೊ೦ಪಲಿ by gopaljsr
ಉ: ಹಬ್ಬಿತು ಕನ್ನಡ ಸೊ೦ಪಲಿ
ಉ: ಹಬ್ಬಿತು ಕನ್ನಡ ಸೊ೦ಪಲಿ
ಉ: ಹಬ್ಬಿತು ಕನ್ನಡ ಸೊ೦ಪಲಿ
In reply to ಉ: ಹಬ್ಬಿತು ಕನ್ನಡ ಸೊ೦ಪಲಿ by srimiyar
ಉ: ಹಬ್ಬಿತು ಕನ್ನಡ ಸೊ೦ಪಲಿ
ಉ: ಹಬ್ಬಿತು ಕನ್ನಡ ಸೊ೦ಪಲಿ
In reply to ಉ: ಹಬ್ಬಿತು ಕನ್ನಡ ಸೊ೦ಪಲಿ by nagarathnavina…
ಉ: ಹಬ್ಬಿತು ಕನ್ನಡ ಸೊ೦ಪಲಿ
ಉ: ಹಬ್ಬಿತು ಕನ್ನಡ ಸೊ೦ಪಲಿ
ಉ: ಹಬ್ಬಿತು ಕನ್ನಡ ಸೊ೦ಪಲಿ